Home Uncategorized Google: ವೈದ್ಯರ ಕೈಬರಹ ಅರ್ಥೈಸಲು ಗೂಗಲ್​ನಿಂದ ಹೊಸ ಆ್ಯಪ್ ಬಿಡುಗಡೆ: ಯಾವುದು ಗೊತ್ತೇ?

Google: ವೈದ್ಯರ ಕೈಬರಹ ಅರ್ಥೈಸಲು ಗೂಗಲ್​ನಿಂದ ಹೊಸ ಆ್ಯಪ್ ಬಿಡುಗಡೆ: ಯಾವುದು ಗೊತ್ತೇ?

22
0

ವೈದ್ಯರ (Doctors) ಕೈಬರಹವನ್ನು ಅರ್ಥಹಿಸಲು ಗೂಗಲ್ ಹೊಸದೊಂದು ಆ್ಯಪ್ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಗೂಗಲ್ ಇನ್ ಇಂಡಿಯಾ ಈವೆಂಟ್​ನಲ್ಲಿ ಟೆಕ್ (Tech) ದಿಗ್ಗಜ ವಿಶೇಷ ಎಐ ಘೋಷಿಸಿದ್ದು ಇದರ ಮೂಲಕ ಕೈಬರಹವನ್ನ ವೈದ್ಯರ ಪ್ರಿಸ್ಕ್ರಿಪ್ಷನ್​​ನಲ್ಲಿ ಡಿಕೋಡ್ ಮಾಡಬಹುದು. ಗೂಗಲ್ ಲೆನ್ಸ್​ನಲ್ಲಿ ಪ್ರಾರಂಭವಾಗುವ ಈ ವೈಶಿಷ್ಟ್ಯವು ಬಳಕೆದಾರರಿಗೆ ಪ್ರಿಸ್ಕ್ರಿಪ್ಷನ್ ಚಿತ್ರವನ್ನು ತೆಗೆದುಕೊಳ್ಳಲು ಅಥವಾ ಫೋಟೋ ಲೈಬ್ರರಿಯಿಂದ ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಗೂಗಲ್ (Google) ಲೆನ್ಸ್ ಬಳಕೆದಾರರನ್ನ ಹೊಂದಿದೆ. ಹೀಗಾಗಿ ಭಾರತೀಯರಿಗೆ ಇದು ಹೆಚ್ಚು ಅನುಕೂಲಕರವಾಗಲಿದೆ ಎಂದು ಗೂಗಲ್ ಹೇಳಿದೆ.

ಈ ಅಪ್ಲಿಕೇಶನ್ ಪ್ರಸ್ತುತ ಅಭಿವೃದ್ಧಿಯಲ್ಲಿದೆ. ಬೀಟಾ ವರ್ಷನ್​ನಲ್ಲಿ ಪರೀಕ್ಷೆಗೆ ಒಳಪಡಿಸಿದ ನಂತರ ಹೆಚ್ಚಿನ ನವೀಕರಣಗಳನ್ನು ಮಾಡಿ ಬಿಡುಗಡೆಗೊಳಿಸುವುದು ಗೂಗಲ್​ನ ಯೋಜನೆಯಾಗಿದೆ. ಗೂಗಲ್ ಇಂಡಿಯಾ ಸಂಶೋಧನಾ ನಿರ್ದೇಶಕ ಡಾ.ಮನೀಶ್ ಗುಪ್ತಾ ಅವರು, ಈ ಎಐ ಅನ್ನ ಎಐ ವೈದ್ಯಕೀಯ ಪ್ರಿಸ್ಕ್ರಿಪ್ಷನ್ನಲ್ಲಿ ಕೈಬರಹದ ವಿಷಯವನ್ನ ಸರಿಯಾಗಿ ಅರ್ಥಮಾಡಿಕೊಂಡಿರುವ ಉದಾಹರಣೆಯೊಂದಿಗೆ ಮಾಹಿತಿ ನೀಡಿದ್ದಾರೆ.

Tech Tips: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ಅನ್ನು ಸುಲಭವಾಗಿ ಲಾಕ್ ಮಾಡುವುದು ಹೇಗೆ?

ಇದೇವೇಳೆ ಇಸ್ರೇಲ್ ಸಂಶೋಧಕರು ಇಸಿಜಿ ಪರೀಕ್ಷೆಗಳನ್ನ ವಿಶ್ಲೇಷಿಸುವ ಮತ್ತು ಹೃದಯ ವೈಫಲ್ಯಕ್ಕೆ ವಾರಗಳ ಮೊದಲು ಶೇಕಡಾ 80ರಷ್ಟು ನಿಖರತೆಯೊಂದಿಗೆ ಊಹಿಸುವ ಕೃತಕ ಬುದ್ಧಿಮತ್ತೆಯ ಸಾಧನವನ್ನ ಅಭಿವೃದ್ಧಿಪಡಿಸಿದೆ. ಹೃದ್ರೋಗವು ವಿಶ್ವದಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಜನರು ಹೃದಯರಕ್ತನಾಳದ ಕಾಯಿಲೆಗಳಿಂದ ಸಾಯುತ್ತಾರೆಂದು ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಈ ಈವೆಂಟ್‌ನಲ್ಲಿ ಭಾರತದ ಕೃಷಿ ಭೂದೃಶ್ಯದ ಸಮಗ್ರ ಮಾಹಿತಿಯನ್ನು ಕಲೆಹಾಕಲು ಸಹಾಯ ಮಾಡುವ ಮಾದರಿಯನ್ನು ಅಭಿವೃದ್ಧಿಪಡಿಸಲು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಬಗ್ಗೆ ಕೂಡ ಮಾಹಿತಿ ನೀಡಲಯಿತು. ಜೊತೆಗೆ ಸುಧಾರಿತ AI ಮತ್ತು ML ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮಾರ್ಗಗಳ ಕುರಿತು ಗೂಗಲ್ ಈ ಕಾರ್ಯಕ್ರಮದಲ್ಲಿ ಘೋಷಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here