ರಾಜ್ಯಪಾಲರ ಎಕ್ಸ್ ಪೋಸ್ಟ್‌ನೊಂದಿಗೆ ಹಂಚಿಕೊಂಡಿರುವ ಗ್ರಾಫಿಕ್
ಬೆಂಗಳೂರು: ಯುಪಿಎಸ್‌ಸಿ ನಡೆಸಿದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿದ್ಯಾರ್ಥಿನಿ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ರಾಜ್ಯಪಾಲರ ಎಕ್ಸ್ ಪೋಸ್ಟ್ ಹಾಗೂ ನವೆಂಬರ್ 10ರ ದಿನಾಂಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ತಿಳಿಸಿದೆ.
ಈ ಸಾಧನೆ ಶ್ರೇಯಾ ಅವರ ಅಚಲ ನಿರ್ಧಾರ, ಪರಿಶ್ರಮ ಹಾಗೂ ಸಮವಸ್ತ್ರದಲ್ಲಿ ದೇಶಸೇವೆ ಮಾಡಬೇಕೆಂಬ ಜೀವಮಾನದ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ; ಇದು ಕರ್ನಾಟಕಕ್ಕೆ ಅಪಾರ ಹೆಮ್ಮೆ ತಂದಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
Heartiest congratulations to Shreya N. Gowda from Bhadravathi, Shivamogga, on securing All India Rank 1 in the women’s category of the UPSC NDA Examination.
Achieving this remarkable feat in her very first attempt reflects her unwavering determination, perseverance, and lifelong aspiration to serve the nation in uniform.
Her outstanding achievement has brought immense pride to Karnataka and serves as a powerful inspiration to young women across the country to dream big, break barriers, and pursue their aspirations with courage and conviction.
Wishing her continued success in her journey of service to the nation.
ರಾಜ್ಯಪಾಲರಾದ ಡಾ. ಸುಧಾ ಯಾದವ್ (@drsudhayadav) ಅವರ ಎಕ್ಸ್ ಪೋಸ್ಟ್, ನವೆಂಬರ್ 10 – ಪೋಸ್ಟ್ ನೋಡಿ
ದೇಶದಾದ್ಯಂತದ ಯುವತಿಯರು ದೊಡ್ಡ ಕನಸು ಕಾಣಲು, ಅಡೆತಡೆಗಳನ್ನು ಮುರಿಯಲು ಹಾಗೂ ಧೈರ್ಯ ಮತ್ತು ದೃಢನಿಶ್ಚಯದಿಂದ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಈ ಸಾಧನೆ ಸ್ಫೂರ್ತಿ ನೀಡಲಿದೆ; ವಿಶೇಷವಾಗಿ ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು ಬಯಸುವ ಯುವತಿಯರಿಗೆ ಹೊಸ ಭರವಸೆ ಮತ್ತು ಪ್ರೇರಣೆ ನೀಡಲಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ದೇಶಸೇವೆಯ ಹಾದಿಯಲ್ಲಿ ಶ್ರೇಯಾ ಅವರಿಗೆ ನಿರಂತರ ಯಶಸ್ಸು ಸಿಗಲಿ, ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಅವರ ಕನಸು ನನಸಾಗಲಿ ಎಂದು ರಾಜ್ಯಪಾಲರು ಹಾರೈಸಿದ್ದಾರೆ.
