Home ಅಪರಾಧ ನಟ ಸಂಚಾರಿ ವಿಜಯ್‌ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದೆ ಬಂದ ಡಿಸಿಎಂ

ನಟ ಸಂಚಾರಿ ವಿಜಯ್‌ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದೆ ಬಂದ ಡಿಸಿಎಂ

82
0
bengaluru

ಖುದ್ದು ಆಸ್ಪತ್ರೆ ಮುಖ್ಯಸ್ಥರಿಗೆ ಕರೆ ಮಾಡಿ ತಿಳಿಸಿದ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಬೆಂಗಳೂರು:

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ನಟ ಸಂಚಾರಿ ವಿಜಯ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮುಂದೆ ಬಂದಿದ್ದಾರೆ.

ಇಂದು ಬೆಳಗ್ಗೆ ವಿಜಯ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಆಡಳಿತ ವರ್ಗದ ಮುಖ್ಯಸ್ಥರಿಗೆ ಖುದ್ದಾಗಿ ಕರೆ ಮಾಡಿ ವಿಜಯ್‌ ಅವರ ಯೋಗ-ಕ್ಷೇಮ ವಿಚಾರಿಸಿದ ಡಿಸಿಎಂ, ಅವರ ಚಿಕಿತ್ಸೆ ಆಗುವ ಸಂಪೂರ್ಣ ವೆಚ್ಚವನ್ನು ತಮ್ಮ ನೇತೃತ್ವದ ಡಾ. ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್‌ ಭರಿಸುತ್ತದೆ ಎಂದು ಭರವಸೆ ನೀಡಿದರು.

Read Here: Award-winning Kannada actor meets with accident, critical https://thebengalurulive.com/award-winning-kannada-actor-meets-with-accident-critical/

bengaluru

ವಿಜಯ್‌ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಅವರ ಸಂಬಂಧಿಗಳಿಂದಾಗಲೀ ಅಥವಾ ಬೇರೆ ಯಾರಿಂದಲೂ ಹಣ ಪಾವತಿಸಿಕೊಳ್ಳದಂತೆ ಅವರು ಆಸ್ಪತ್ರೆ ಆಡಳಿತ ವರ್ಗಕ್ಕೆ ಸೂಚಿಸಿದ್ದಾರೆ.

ಇಲ್ಲಿ ಓದಿ: ಸಂಚಾರಿ ವಿಜಯ್​ ಕೋಮಾದಲ್ಲೇ ಇದ್ದಾರೆ https://kannada.thebengalurulive.com/award-winning-kannada-actor-sanchari-vijay-is-in-coma/

bengaluru

LEAVE A REPLY

Please enter your comment!
Please enter your name here