ಬೆಂಗಳೂರಿನಲ್ಲಿ 13,640 ಮಂದಿಗೆ , ತುಮಕೂರಿನಲ್ಲಿ 1,176 ಮಂದಿಗೆ ಕೋವಿಡ್
ಬೆಂಗಳೂರು:
ಕರ್ನಾಟಕದಲ್ಲಿಂದು 23,558 ಮಂದಿ ಸೋಂಕಿತರಾಗಿರುವುದು ಹಾಗೂ 116 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.
ಕರ್ನಾಟಕದಲ್ಲಿ ಸೋಂಕು ದೃಢ ಪ್ರಮಾಣ ಶೇ 15.47ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ದರ ಶೇ 0.49ಕ್ಕೆ ತಲುಪಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 26 ಜಿಲ್ಲೆಗಳಲ್ಲಿ ಮೂರಂಕಿ ಮುಟ್ಟಿದೆ. ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ತುಸು ಇಳಿದಿದೆ. ಒಟ್ಟು 13,640 ಮಂದಿಗೆ ಕೋವಿಡ್ ದೃಢಪಟ್ಟಿದೆ.
ಇಂದಿನ 21/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/TrKPapdAsx@mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @RCBTweets @NammaKarnataka_ pic.twitter.com/4DzBQRxUXg
— K'taka Health Dept (@DHFWKA) April 21, 2021
ತುಮಕೂರಿನಲ್ಲಿ ಒಟ್ಟು 1,176 ಮಂದಿ ಸೋಂಕಿತರಾಗಿರುವುದು ಖಾತರಿಯಾಗಿದೆ. ಮೈಸೂರು (975), ಬಳ್ಳಾರಿ (792), ಕಲಬುರ್ಗಿ (757), ಬೆಂಗಳೂರು ಗ್ರಾಮಾಂತರ (544), ಮಂಡ್ಯ (492), ಉಡುಪಿ (471), ಹಾಸನ (445) ಜಿಲ್ಲೆಗಳಲ್ಲಿಯೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.