ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಎಂಎಸ್ಸಿ ನರ್ಸಿಂಗ್, ಎಂಪಿಟಿ ಮತ್ತು ಎಂಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ (ಎಎಚ್ಎಸ್) ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಮೊದಲ ಸುತ್ತಿನ ಸೀಟು ಹಂಚಿಕೆಗಾಗಿ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಮತ್ತು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದೆ.
ಅರ್ಹತಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಪ್ರಕಟಿತ ವೇಳಾಪಟ್ಟಿಯಂತೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಕೆಇಎ ಪ್ರವೇಶ ವೇಳಾಪಟ್ಟಿ: ಪ್ರಮುಖ ದಿನಾಂಕಗಳು
- ವೆರಿಫಿಕೇಷನ್ ಸ್ಲಿಪ್: ನವೆಂಬರ್ 7ರಂದು ಬೆಳಿಗ್ಗೆ 11 ಗಂಟೆಯ ನಂತರ.
- ಇಚ್ಛೆ ಅಥವಾ ಆಯ್ಕೆ ದಾಖಲಿಸುವ ಅವಧಿ: ನವೆಂಬರ್ 7ರಂದು ಮಧ್ಯಾಹ್ನ 1 ಗಂಟೆಯಿಂದ ನವೆಂಬರ್ 12ರಂದು ಬೆಳಿಗ್ಗೆ 11 ಗಂಟೆವರೆಗೆ.
- ಅಣಕು ಸೀಟು ಹಂಚಿಕೆ ಫಲಿತಾಂಶ: ನವೆಂಬರ್ 12ರಂದು ಮಧ್ಯಾಹ್ನ 3 ಗಂಟೆಯ ನಂತರ.
- ಆಯ್ಕೆಗಳನ್ನು ಅದಲು-ಬದಲು ಮಾಡುವುದು ಅಥವಾ ಅಳಿಸುವುದು: ನವೆಂಬರ್ 12ರಂದು ಸಂಜೆ 4 ಗಂಟೆಯಿಂದ ನವೆಂಬರ್ 14ರಂದು ಬೆಳಿಗ್ಗೆ 11 ಗಂಟೆವರೆಗೆ.
- ನೈಜ ಸೀಟು ಹಂಚಿಕೆ ಫಲಿತಾಂಶ: ನವೆಂಬರ್ 14ರಂದು ಸಂಜೆ 4 ಗಂಟೆಯ ನಂತರ.
ಅಣಕು ಮತ್ತು ನೈಜ ಫಲಿತಾಂಶಗಳು ಪ್ರತ್ಯೇಕ
ನವೆಂಬರ್ 12ರಂದು ಪ್ರಕಟವಾಗುವ ಫಲಿತಾಂಶ ಅಣಕು ಸೀಟು ಹಂಚಿಕೆಯಾಗಿದೆ. ಅದರ ನಂತರ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಆಯ್ಕೆಗಳನ್ನು ಬದಲಾಯಿಸಲು ಅಥವಾ ಅಳಿಸಲು ಅವಕಾಶವಿದೆ. ನೈಜ ಸೀಟು ಹಂಚಿಕೆ ಫಲಿತಾಂಶವನ್ನು ನವೆಂಬರ್ 14ರಂದು ಸಂಜೆ 4 ಗಂಟೆಯ ನಂತರ ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.
