Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಯುಜಿನೀಟ್ ಸ್ಟ್ರೇ ವೇಕೆನ್ಸಿ ಸುತ್ತು: ಅ.13–16 ಹೊಸ ನೋಂದಣಿ, ಅ.19ರ ಬೆಳಿಗ್ಗೆ 9ಕ್ಕೆ ಆಪ್ಷನ್ ಎಂಟ್ರಿ ಮುಕ್ತಾಯ
  • ಕರ್ನಾಟಕ
  • ಶಿಕ್ಷಣ

ಯುಜಿನೀಟ್ ಸ್ಟ್ರೇ ವೇಕೆನ್ಸಿ ಸುತ್ತು: ಅ.13–16 ಹೊಸ ನೋಂದಣಿ, ಅ.19ರ ಬೆಳಿಗ್ಗೆ 9ಕ್ಕೆ ಆಪ್ಷನ್ ಎಂಟ್ರಿ ಮುಕ್ತಾಯ

ಯುಜಿನೀಟ್ ಸ್ಟ್ರೇ ವೇಕೆನ್ಸಿ ಸುತ್ತಿಗೆ ಅಕ್ಟೋಬರ್ 13–16 ಹೊಸ ನೋಂದಣಿ. ಅ.19ರ ಬೆಳಿಗ್ಗೆ 9ಕ್ಕೆ ಆಪ್ಷನ್ ಎಂಟ್ರಿ ಮುಕ್ತಾಯ; ಅರ್ಹತೆ, ಠೇವಣಿ ಮತ್ತು ಸೀಟು ರದ್ದತಿ ನಿಯಮಗಳ ವಿವರ.
The Bengaluru Live October 9, 2026 11:24 PM 1 minute read
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಕಟ್ಟಡಗಳು, ಲಾಂಛನ ಮತ್ತು ಹೆಸರಿರುವ ಸಂಗ್ರಹಿತ ಹೆಡರ್

505 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಪರೀಕ್ಷೆಗೆ ಪರಿಷ್ಕೃತ ಕೀ ಉತ್ತರ ಪ್ರಕಟಿಸಿದ KEA; ತಜ್ಞರ ಪರಿಶೀಲನೆಯ ಬಳಿಕ ತಿದ್ದುಪಡಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಯುಜಿನೀಟ್ 2026ರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶದ ಸ್ಟ್ರೇ ವೇಕೆನ್ಸಿ ಸುತ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (KEA) ನೋಂದಣಿ ಮಾಡದ ಅಥವಾ ನೋಂದಣಿ ಪೂರ್ಣಗೊಳಿಸದ ನೀಟ್ ಅರ್ಹ ಅಭ್ಯರ್ಥಿಗಳಿಗೆ ಅಕ್ಟೋಬರ್ 13ರಿಂದ 16ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೊಸ ಆಪ್ಷನ್ ಎಂಟ್ರಿ ಅಕ್ಟೋಬರ್ 16ರ ಬೆಳಿಗ್ಗೆ 11ಕ್ಕೆ ಆರಂಭವಾಗಿ, ಅಕ್ಟೋಬರ್ 19ರ ಬೆಳಿಗ್ಗೆ 9ಕ್ಕೆ ಮುಕ್ತಾಯವಾಗಲಿದೆ.

ಅಭ್ಯರ್ಥಿಗಳು ನೋಂದಣಿ ಪೂರ್ಣಗೊಳಿಸಿ, ಶುಲ್ಕ ಪಾವತಿಸಿ, ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಬೇಕು. ನಂತರ ನಿಗದಿತ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಅಥವಾ ದಂತ ವೈದ್ಯಕೀಯ ಕಾಷನ್ ಡೆಪಾಸಿಟ್ ಪಾವತಿಸಿ ಆಯ್ಕೆಗಳನ್ನು ದಾಖಲಿಸಬೇಕು. ಈಗಾಗಲೇ ವೆರಿಫಿಕೇಷನ್ ಸ್ಲಿಪ್ ಹೊಂದಿರುವವರು ಮತ್ತೆ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು KEA ತಿಳಿಸಿದೆ.

ಈ ಸುತ್ತಿಗೆ ಯಾರು ಅರ್ಹರು?

KEA ಮೂಲಕ ಯಾವುದೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ವೈದ್ಯಕೀಯ ಸೀಟು ಹಂಚಿಕೆಗೆ ಅರ್ಹರು. ದಂತ ವೈದ್ಯಕೀಯ ಸೀಟು ಆಯ್ಕೆ ಮಾಡಿಕೊಂಡಿರುವವರು ವೈದ್ಯಕೀಯ ಕೋರ್ಸ್ ಶುಲ್ಕ ಪಾವತಿಯ ಷರತ್ತಿಗೆ ಒಳಪಟ್ಟು ವೈದ್ಯಕೀಯ ಸೀಟುಗಳಿಗಾಗಿ ಭಾಗವಹಿಸಬಹುದು.

ಅಖಿಲ ಭಾರತ ಕೋಟಾ, ಡೀಮ್ಡ್ ವಿಶ್ವವಿದ್ಯಾಲಯಗಳು ಅಥವಾ ಇತರ ಸಂಸ್ಥೆ/ಮಂಡಳಿಗಳ ಮೂಲಕ ಮೊದಲ ಮೂರು ಸುತ್ತುಗಳಲ್ಲಿ ಸೀಟು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆದವರು ಈ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತಿಗೆ ಅರ್ಹರಲ್ಲ. MCCಯ ನಾಲ್ಕನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಹಾಗೂ KEAಯ ಯಾವುದೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದವರಿಗೂ ಅವಕಾಶವಿಲ್ಲ.

ಠೇವಣಿ ಮೊತ್ತಕ್ಕೆ ಅನುಗುಣವಾಗಿ ಆಯ್ಕೆಗಳಿಗೆ ಅವಕಾಶ

ಠೇವಣಿದಾಖಲಿಸಬಹುದಾದ ಆಯ್ಕೆಗಳು
₹1,00,000ವೈದ್ಯಕೀಯ ಸರ್ಕಾರಿ (G) ಸೀಟುಗಳು ಮತ್ತು ದಂತ ವೈದ್ಯಕೀಯದ ಎಲ್ಲ ವರ್ಗದ ಸೀಟುಗಳು
₹12,00,117ವೈದ್ಯಕೀಯ G ಮತ್ತು P ಸೀಟುಗಳು; ಖಾಸಗಿ ವಿಶ್ವವಿದ್ಯಾಲಯಗಳ P ಸೀಟುಗಳೂ ಸೇರಿ
₹25,00,000ವೈದ್ಯಕೀಯದ ಎಲ್ಲ ವರ್ಗದ ಸೀಟುಗಳು

ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅಕ್ಟೋಬರ್ 13ರಿಂದ 16ರವರೆಗೆ ಅವಕಾಶವಿದೆ. ದಂತ ವೈದ್ಯಕೀಯಕ್ಕೆ ಪ್ರತ್ಯೇಕವಾಗಿ ₹1,00,000 ಕಾಷನ್ ಡೆಪಾಸಿಟ್ ನಿಗದಿಪಡಿಸಿದ್ದು, ಇದರಿಂದ ಎಲ್ಲ ವರ್ಗದ ದಂತ ವೈದ್ಯಕೀಯ ಸೀಟುಗಳಿಗೆ ಆಪ್ಷನ್ಸ್ ದಾಖಲಿಸಬಹುದು. ಹಂಚಿಕೆ ನಂತರ ಉಳಿಕೆ ಶುಲ್ಕ ಪಾವತಿಸಬೇಕು. ವೈದ್ಯಕೀಯ ಸೀಟು ದೊರೆತರೆ ಠೇವಣಿಯನ್ನು ಶುಲ್ಕಕ್ಕೆ ಹೊಂದಿಸಲಾಗುತ್ತದೆ.

ಹಿಂದಿನ ಸುತ್ತಿನಲ್ಲಿ ಸೀಟು ಸಿಗದೆ ಕಾಷನ್ ಡೆಪಾಸಿಟ್ ಮರುಪಾವತಿ ಪಡೆದವರು ಈ ಸುತ್ತಿನಲ್ಲಿ ಭಾಗವಹಿಸಲು ನಿಗದಿತ ಮೊತ್ತವನ್ನು ಮತ್ತೆ ಪಾವತಿಸಬೇಕು. ಇತರ ಕೋರ್ಸ್‌ಗಳಿಗೆ ಪಾವತಿಸಿದ ಶುಲ್ಕವನ್ನು ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯಾಗಿ ಪರಿಗಣಿಸುವುದಿಲ್ಲ.

ಹಿಂದಿನ ಆಪ್ಷನ್ಸ್ ಪರಿಗಣಿಸುವುದಿಲ್ಲ

ಹಿಂದಿನ ಸುತ್ತಿನಲ್ಲಿ ದಾಖಲಿಸಿದ ಆಯ್ಕೆಗಳನ್ನು ಈ ಸುತ್ತಿಗೆ ಪರಿಗಣಿಸಲಾಗುವುದಿಲ್ಲ. ಪಾವತಿಸಿದ ಠೇವಣಿಗೆ ಅನುಗುಣವಾಗಿ ಅಭ್ಯರ್ಥಿಗಳು ಹೊಸ ಆಯ್ಕೆಗಳನ್ನು ಆದ್ಯತೆಯ ಕ್ರಮದಲ್ಲಿ ದಾಖಲಿಸಬೇಕು. ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ರಚನೆಯನ್ನು ಪರಿಶೀಲಿಸಬೇಕು; ನಂತರ ರದ್ದಾಗುವ ಅಥವಾ ಮುಟ್ಟುಗೋಲಾಗುವ ಸೀಟುಗಳೂ ಹಂಚಿಕೆಗೆ ಬರಬಹುದು.

ಮೂರನೇ ಸುತ್ತಿನ ನಂತರ ಉಳಿದ ವೈದ್ಯಕೀಯ ಸೀಟುಗಳನ್ನು KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆ ಹಂತದಲ್ಲಿ ಹಂಚಿಕೆಯಾಗದೆ ಉಳಿದ ದಂತ ವೈದ್ಯಕೀಯ ಸೀಟುಗಳು ಇರಲಿಲ್ಲ ಎಂದು ಅಧಿಸೂಚನೆ ತಿಳಿಸಿದೆ. ಸೀಟು ರದ್ದತಿ, ಮುಟ್ಟುಗೋಲು ಅಥವಾ ಪ್ರವೇಶ ಪಡೆಯದ ಕಾರಣ ಖಾಲಿಯಾಗುವ ವೈದ್ಯಕೀಯ ಅಥವಾ ದಂತ ವೈದ್ಯಕೀಯ ಸೀಟುಗಳನ್ನು ಈ ಸುತ್ತಿಗೆ ಸೇರಿಸಬಹುದು.

ಹೊಸ ಸೀಟು ಸಿಕ್ಕರೆ ಹಳೆಯ ಸೀಟು ರದ್ದು

ಈಗಾಗಲೇ ಬೇರೆ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳು ಪೋಷಕರೊಂದಿಗೆ ಚರ್ಚಿಸಿ ಮಾತ್ರ ಭಾಗವಹಿಸುವಂತೆ KEA ಸೂಚಿಸಿದೆ. ಈ ಸುತ್ತಿನಲ್ಲಿ ಹೊಸ ಸೀಟು ಹಂಚಿಕೆಯಾದರೆ ಈಗಿರುವ ಸೀಟು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಹಳೆಯ ಕಾಲೇಜಿನಿಂದ ಮೂಲ ದಾಖಲೆಗಳನ್ನು ಪಡೆದು ನಿಗದಿತ ಅವಧಿಯಲ್ಲಿ ಹೊಸ ಕಾಲೇಜಿಗೆ ಸಲ್ಲಿಸಿ ಪ್ರವೇಶ ಪಡೆಯುವುದು ಅಭ್ಯರ್ಥಿಗಳ ಜವಾಬ್ದಾರಿ.

ಸ್ಟ್ರೇ ಸುತ್ತಿನ ಹಂಚಿಕೆ ನಂತರ ಪ್ರವೇಶ ಪಡೆಯದಿದ್ದರೆ, ಸೀಟು ರದ್ದುಪಡಿಸಿದರೆ ಅಥವಾ ಕಾಲೇಜಿಗೆ ವರದಿ ಮಾಡದಿದ್ದರೆ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಮುಟ್ಟುಗೋಲಾಗಬಹುದು. ಕೌನ್ಸೆಲಿಂಗ್ ನಿಯಮಗಳ ಪ್ರಕಾರ ದಂಡ ಹಾಗೂ ಮುಂದಿನ ಮೂರು ವರ್ಷಗಳ ಯುಜಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅನರ್ಹತೆ ಅನ್ವಯಿಸುವುದಾಗಿ ಅಧಿಸೂಚನೆ ಎಚ್ಚರಿಸಿದೆ. ಹೊಸ ಹಂಚಿಕೆಯ ನಂತರ ವರದಿ ಮಾಡದವರು ಎರಡೂ ಸೀಟುಗಳನ್ನು ಮತ್ತು ಪಾವತಿಸಿದ ಶುಲ್ಕವನ್ನು ಕಳೆದುಕೊಳ್ಳುವ ಅಪಾಯವಿದೆ.

ಆಪ್ಷನ್ಸ್ ದಾಖಲಿಸುವ ಮುನ್ನ ಶುಲ್ಕ ರಚನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಂತೆ KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಸೂಚಿಸಿದ್ದಾರೆ. ಉಳಿಕೆ ಸೀಟುಗಳು ಮತ್ತು ಮುಂದಿನ ಹಂಚಿಕೆ ಹಂತಗಳ ಮಾಹಿತಿಗಾಗಿ KEA ಅಧಿಕೃತ ವೆಬ್‌ಸೈಟ್ ಪರಿಶೀಲಿಸಬೇಕು.

ಹಿಂದಿನ ಕೌನ್ಸೆಲಿಂಗ್ ಸುತ್ತುಗಳ ನಂತರ ಸ್ಟ್ರೇ ವೇಕೆನ್ಸಿ ಹಂತ ನಡೆಯಲಿದೆ. ಹಿನ್ನೆಲೆಗಾಗಿ KEA ಎರಡನೇ ಸುತ್ತಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆ ಕುರಿತ ನಮ್ಮ ಹಿಂದಿನ ವರದಿ ಓದಬಹುದು.

About the Author

The Bengaluru Live

Administrator

Visit Website View All Posts

Post navigation

Previous: ಅರ್ಧ ಹೆಲ್ಮೆಟ್ ಬಳಕೆ, ಉತ್ಪಾದನೆ ಮತ್ತು ಮಾರಾಟ ನಿಷೇಧ: ಕರ್ನಾಟಕ ಕಾಂಗ್ರೆಸ್ ಮಾಹಿತಿ
Next: ಕ್ಯಾನ್ಸರ್ ಔಷಧಿಗಳ ಟ್ರೇಡ್ ಮಾರ್ಜಿನ್‌ಗೆ ಮಿತಿ: ವರ್ಷಕ್ಕೆ ₹2,500 ಕೋಟಿ ಉಳಿತಾಯದ ಅಂದಾಜು

Related Stories

ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

The Bengaluru Live November 24, 2026 9:28 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

The Bengaluru Live November 24, 2026 8:23 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

The Bengaluru Live November 24, 2026 8:16 PM

Latest Post

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್ ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

November 24, 2026 9:28 PM
11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

November 24, 2026 8:23 PM
ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

November 24, 2026 8:16 PM
ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ ಜಪಾನ್‌ನ ರೈಲು ನಿಲ್ದಾಣದ ಸಭಾಂಗಣದಲ್ಲಿ ಬಾಲಕಿಯೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ

November 24, 2026 8:15 PM
ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ
  • ರಾಜಕೀಯ

ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ

November 24, 2026 7:39 PM
ಬ್ಲೂ ಲೈನ್ ಮೆಟ್ರೋ ಪರೀಕ್ಷಾರ್ಥ ಸಂಚಾರ ಆರಂಭ, 2027ರ ಮಧ್ಯಭಾಗದ ವೇಳೆಗೆ ಫೇಸ್ 2ಎ ಮುಕ್ತ ಗುರಿ: ಕೃಷ್ಣ ಬೈರೇಗೌಡ ಬ್ಲೂ ಲೈನ್ ಪರೀಕ್ಷಾರ್ಥ ಸಂಚಾರ ಪರಿಶೀಲನೆ ವೇಳೆ ಮೆಟ್ರೋ ರೈಲಿನೊಳಗೆ ಅಧಿಕಾರಿಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬ್ಲೂ ಲೈನ್ ಮೆಟ್ರೋ ಪರೀಕ್ಷಾರ್ಥ ಸಂಚಾರ ಆರಂಭ, 2027ರ ಮಧ್ಯಭಾಗದ ವೇಳೆಗೆ ಫೇಸ್ 2ಎ ಮುಕ್ತ ಗುರಿ: ಕೃಷ್ಣ ಬೈರೇಗೌಡ

November 24, 2026 5:35 PM

ನೀವು ತಪ್ಪಿಸಿಕೊಂಡಿರಬಹುದು

ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

The Bengaluru Live November 24, 2026 9:28 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

The Bengaluru Live November 24, 2026 8:23 PM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

The Bengaluru Live November 24, 2026 8:16 PM
ಜಪಾನ್‌ನ ರೈಲು ನಿಲ್ದಾಣದ ಸಭಾಂಗಣದಲ್ಲಿ ಬಾಲಕಿಯೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ

The Bengaluru Live November 24, 2026 8:15 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್
  • 11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ
  • ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ
  • ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ
©Copyright 2025 The Bengaluru Live All rights reserved. | MoreNews by AF themes.