ಬೆಂಗಳೂರು: ಪೆನುಕೊಂಡ ಮತ್ತು ರಂಗೇಪಲ್ಲಿ ನಿಲ್ದಾಣಗಳ ನಡುವೆ ಹಳಿ ನವೀಕರಣ ಕಾಮಗಾರಿ ಇರುವುದರಿಂದ, ಕೆಎಸ್ಆರ್ ಬೆಂಗಳೂರು–ಅನಂತಪುರ ಮೆಮು ರೈಲುಗಳ ಸಂಚಾರ ನವೆಂಬರ್ 3ರ ಮಂಗಳವಾರ ಭಾಗಶಃ ರದ್ದಾಗಲಿದೆ ಎಂದು ನೈಋತ್ಯ ರೈಲ್ವೆ ಸೋಮವಾರ ತಿಳಿಸಿದೆ.
ಯಾವ ರೈಲುಗಳಿಗೆ ಅನ್ವಯ
- ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು–ಅನಂತಪುರ ಮೆಮು: ಹಿಂದೂಪುರ ಮತ್ತು ಅನಂತಪುರ ನಡುವೆ ಭಾಗಶಃ ರದ್ದು.
- ರೈಲು ಸಂಖ್ಯೆ 66560 ಅನಂತಪುರ–ಕೆಎಸ್ಆರ್ ಬೆಂಗಳೂರು ಮೆಮು: ಅನಂತಪುರ ಮತ್ತು ಹಿಂದೂಪುರ ನಡುವೆ ಭಾಗಶಃ ರದ್ದು.
