ಬೆಂಗಳೂರಿನ ವಿಧಾನಸೌಧ. ಕಡತ ಚಿತ್ರ: ದಿ ಬೆಂಗಳೂರು ಲೈವ್ ಸಂಗ್ರಹ.
ಬೆಂಗಳೂರು: ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) 2026-27ನೇ ಸಾಲಿನ ಯೋಜನೆಗಳಿಗೆ ನವೆಂಬರ್ 28ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಕಟಣೆ ಸೋಮವಾರ ತಿಳಿಸಿದೆ.
ಆಸಕ್ತರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಬಳಿಕ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಲಿಡ್ಕರ್ನ ಪ್ರಧಾನ ಕಚೇರಿಗೆ ತಲುಪಿಸಬೇಕು.
ಅರ್ಜಿ ಆಹ್ವಾನಿಸಿರುವ ಯೋಜನೆಗಳು
- ಕಾಯಕ ಸ್ಫೂರ್ತಿ ಮಹಿಳೆಯರಿಗೆ ಪಾದುಕೆ ಕುಟೀರ ಯೋಜನೆ
- ಮಾರುಕಟ್ಟೆ ಸಹಾಯ ಯೋಜನೆ
- ಚರ್ಮಶಿಲ್ಪಿ ಯೋಜನೆ
- ನೇರ ಸಾಲ ಯೋಜನೆ
- ಸ್ವಾವಲಂಬಿ/ಸಂಚಾರಿ ಮಾರಾಟ ಯೋಜನೆ
- ಕೌಶಲ್ಯ ಉನ್ನತೀಕರಣ ಯೋಜನೆ
- ಚರ್ಮಕಾರರ ವಸತಿ ಯೋಜನೆ
- ಚರ್ಮಕಾರರ ಕಿರು ಆರ್ಥಿಕ ನೇರ ಸಾಲ ಯೋಜನೆ
ಸಂಪರ್ಕ
ಹೆಚ್ಚಿನ ಮಾಹಿತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕರನ್ನು 9060163031 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
