Home ರಾಯಚೂರು ಲಿಂಗಸುಗೂರು: ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ; ಪ್ರಿನ್ಸಿಪಾಲ್ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಆರೋಪ

ಲಿಂಗಸುಗೂರು: ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ; ಪ್ರಿನ್ಸಿಪಾಲ್ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಆರೋಪ

29
0
lingsugur Raichur
bengaluru

ರಾಯಚೂರು:

ಪಟ್ಟಣದ ಖಾಸಗಿ ಪಿಯು ಕಾಲೇಜೊಂದರಲ್ಲಿ ಪ್ರಥಮ ಪಿಯು ವಿಜ್ಞಾನ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅದೇ ಕಾಲೇಜಿನ ವಸತಿನಿಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದ್ದು, ಕಾಲೇಜಿನ ಪ್ರಾಂಶುಪಾಲರೆ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿ ಪೋಸ್ಕೊ ದೂರು ದಾಖಲಿಸಿದ್ದಾರೆ.

ಆರೋಪಿ ಪ್ರಾಂಶುಪಾಲ ಪರಾರಿಯಾಗಿದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್ ಎದುರು ಜಮಾಯಿಸಿದ್ದ ಪಾಲಕರು ಹಾಗೂ ಸಂಬಂಧಿಗಳು ಆರೋಪಿ ಪತ್ತೆಗೆ ಒತ್ತಾಯಿಸಿದರು.

ಶುಕ್ರವಾರ ತಡರಾತ್ರಿ ಮೃತ ವಿದ್ಯಾರ್ಥಿನಿಯ ಚಿಕ್ಕಪ್ಪ ನೀಡಿದ ದೂರನ್ನು ಲಿಂಗಸುಗೂರು ಠಾಣೆ ಪೊಲೀಸರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅತ್ಯಾಚಾರ ಎಸಗಿ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

bengaluru

ನಿನ್ನೆ ಸಂಜೆ ನಡೆದಿರೊ ಘಟನೆ ಇದಾಗಿದ್ದು, ಪ್ರಥಮ PU ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ, ವಿಸಿಬಿ ಶಿಕ್ಷಣ ಸಂಸ್ಥೆ ಹಾಸ್ಟೆಲ್​ನಲ್ಲಿ ವಾಸವಿದ್ದಳು. ಆಗಾಗ ಪ್ರಿನ್ಸಿಪಾಲ್ ತನ್ನ ರೂಮ್​ಗೆ ಕರೆಸಿಕೊಳ್ಳುತ್ತಿದ್ದಂತೆ. ಹೀಗಾಗಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ ಪ್ರಾಂಶುಪಾಲರೇ ಕೊಂದು ನೇಣು ಹಾಕಿದ್ದಾರೆ ಎಂದು ಆರೋಪ ಮಾಡಿ ವಸತಿ ಕಾಲೇಜಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಾಂಶುಪಾಲ ರಮೇಶ್ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bengaluru

LEAVE A REPLY

Please enter your comment!
Please enter your name here