Home ಅಪರಾಧ Bengaluru | ಸಿನಿಮಾ ನಿರ್ಮಾಪಕ‌ ಸೌಂದರ್ಯ ಜಗದೀಶ್ ಆತ್ಮಹತ್ಯೆ

Bengaluru | ಸಿನಿಮಾ ನಿರ್ಮಾಪಕ‌ ಸೌಂದರ್ಯ ಜಗದೀಶ್ ಆತ್ಮಹತ್ಯೆ

49
0
Movie producer Soundarya Jagdish committed suicide

ಬೆಂಗಳೂರು :  ಕನ್ನಡ ಚಿತ್ರರಂಗದ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್‌ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮನೆಯಲ್ಲಿ ಅವರು ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಕುಟುಂಬಸ್ಥರ ಹೇಳಿಕೆ‌ ಪಡೆದು ಮುಂದಿನ ಕಾನೂನು ಕ್ರಮ‌ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಿನಿಮಾ ನಿರ್ಮಾಪಕರಾಗಿದ್ದ ಇವರು ಅಪ್ಪು‌ ಮತ್ತು ಪಪ್ಪು, ಮಸ್ತ್ ಮಜಾ ಮಾಡಿ, ರಾಮ್‌ಲೀಲಾ, ಸ್ನೇಹಿತರು ಹಾಗೂ ಇತರೆ ಸಿನಿಮಾ‌ ನಿರ್ಮಿಸಿದ್ದರು.

LEAVE A REPLY

Please enter your comment!
Please enter your name here