Home ಬೆಂಗಳೂರು ನಗರ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿಕುಮಾರ್ ನೇಮಕ : 38ನೇ ಮುಖ್ಯಕಾರ್ಯದರ್ಶಿ ಯಾಗಿ ಆಯ್ಕೆ

ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿಕುಮಾರ್ ನೇಮಕ : 38ನೇ ಮುಖ್ಯಕಾರ್ಯದರ್ಶಿ ಯಾಗಿ ಆಯ್ಕೆ

77
0

ಬೆಂಗಳೂರು:

ರಾಜ್ಯದ 38ನೇ ಮುಖ್ಯ ಕಾರ್ಯದರ್ಶಿಯಾಗಿ ಅಪರ ಮುಖ್ಯಕಾರ್ಯ ದರ್ಶಿ ಪಿ.ರವಿಕುಮಾರ್ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರ ಸ್ಥಾನಕ್ಕೆ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಪಿ.ರವಿ ಕುಮಾರ್ ಅವರನ್ನು ನೇಮಕಗೊಳಿಸಿ ಡಿಪಿಎಆರ್ ಅಧಿಕೃತ ಆದೇಶ ಹೊರಬಿದ್ದಿದೆ.

ಡಿಸೆಂಬರ್ 31ರಂದು ನಿವೃತ್ತಿಯಾಗುತ್ತಿರುವ 37 ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್,ಅವರ ಉತ್ತ ರಾಧಿಕಾರಿಯಾಗಿ ಕರ್ನಾಟಕ ಕೇಡಾರಿನ ಎರಡನೆ ಹಿರಿಯ ಅಧಿಕಾರಿಯಾಗಿದ್ದಾರೆ.ಸೇವಾವಾಧಿ ವಿಸ್ತರಿಸುವಂತೆ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಸರ್ಕಾರಕ್ಕೆ ಮಾಡಿದ್ದ ಮನವಿಯನ್ನು ಮುಖ್ಯಮಂತ್ರಿ ಪುರಸ್ಕರಿಸಲಿ ಲ್ಲವೆನ್ನಲಾಗಿದೆ.ಡಿ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯ್ ಭಾಸ್ಕರ್ ಗೆ ಬೀಳ್ಕೊಡುಗೆ ನೀಡುವ ಮೂಲಕಅಧಿಕಾರವಧಿ ಮುಗಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ನೂತನ ಮುಖ್ಯಕಾರ್ಯದರ್ಶಿ ಆಯ್ಕೆಯಾಗಿರುವ ರವಿ ಕುಮಾರ್ ಆಂಧ್ರ ಪ್ರದೇಶ ಮೂಲದ 1984ರ ಬ್ಯಾಚಿನ ಲ್ಲಿ ಐಎಎಸ್ ಅಧಿಕಾರಿಯಾಗಿ ಕರ್ನಾಟಕ ಕೇಡಾರ್ ನಲ್ಲಿ ಆಯ್ಕೆಯಾದರು.ಅಲ್ಲಿಂದು ಕಂದಾಯ ಇಲಾಖೆ ಭೂಮಾಪನಯ ಲ್ಯಾಂಡ್ ರೆಕಾರ್ಡ್ ವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ ವೃತ್ತಿ ಜೀವನ ಆರಂಭಿಸಿದ ರವಿ ಕುಮಾರ್,ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ,ವಿಶೇಷ ಕಾರ್ಯದರ್ಶಿ,ಜಂಟಿ ಕಾರ್ಯದರ್ಶಿ,ಕಂದಾಯ ,ಅಬಕಾರಿ,ಗ್ರಾಮೀಣಾಭಿ ವೃದ್ದಿ,ಸಾರಿಗೆ,ಆಹಾರ ಮತ್ತು ನಾಗರೀಕ ಸರಬರಾಜು ,ಸಹಕಾರ,ವಾಣಿಜ್ಯ ತೆರಿಗೆ ಇಲಾ ಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಇಂಧನ ಇಲಾಖೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಯಾಗಿ,ಬಿಜೆಪಿ ಸರ್ಕಾರದಲ್ಲಿ ಅಪರ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಗೊಂಡಿದ್ದರು.2009ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ,2014ರಲ್ಲಿ ಅಪರ ಮುಖ್ಯಕಾರ್ಯದರ್ಶಿಯಾಗಿ,2019ರ ಲ್ಲಿ ಹೆಚ್ಚುವರಿ ಅಪರ ಮುಖ್ಯ ಕಾರ್ಯದರ್ಶಿಯಾಗಿ 2021ರಿಂದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿ ದ್ದಾರೆ.ಪಿ.ರವಿ ಕುಮಾರ್ ಅವರ ಸೇವಾವಧಿ ಮೇ 2022ರವೆಗೆ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. UNI

LEAVE A REPLY

Please enter your comment!
Please enter your name here