ಪಶ್ಚಿಮಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಇನ್ನೂ ಮುಂದುವರೆದಿದೆ…

  58
  0
  Prakash Sesharaghavachar
  bengaluru

  85 ವಯಸ್ಸಿನ ಸೋವಾ ರಾಣಿ ಮಂಡಲ್ ತನ್ನ ಮಗ ಗೋಪಾಲ್ ಮಜುಂದಾರ್ ಮೇಲೆ ಹಲ್ಲೆ ಮಾಡಲು ಬಂದಿದ್ದ ಮಮತಾಬ್ಯಾನರ್ಜಿ ಗೂಂಡಾ ಬ್ರಿಗೇಡ್ ನವರನ್ನು ತಡೆಯಲು ಹೋದಾಗ ವಯಸ್ಸಿನ ಪರಿವೆ ನೋಡದೆ ಆಕೆಯ ಮೇಲೆಯೂ ಅಮಾನುಷವಾಗಿ ಹಲ್ಲೆ ಮಾಡುತ್ತಾರೆ. ತೀವ್ರ ಗಾಯಗೊಂಡಿದ್ದ ವೃದ್ಧ ತಾಯಿ ಅಸುನೀಗುತ್ತಾರೆ. ಇದು ಮಮತಾ ಆಡಳಿತದ ರಾಕ್ಷಸಿ ವರಸೆಯ ಒಂದು ಸ್ಯಾಂಪಲ್ ಮಾತ್ರ.

  ಚುನಾವಣಾ ಹಿಂಸಾಚಾರವು ಪಶ್ಚಿಮಬಂಗಾಳಕ್ಕೆ ಹೊಸದೇನಲ್ಲ. ಹಿಂದೆ ಎಡರಂಗ ಸರ್ಕಾರವಿದ್ದ ಸಂದರ್ಭದಲ್ಲಿಯೂ ಹಿಂಸಾಚಾರಕ್ಕೆ ಅಡ್ಡಿ ಇರಲಿಲ್ಲ ಆಗ ಕಮ್ಯುನಿಷ್ಟರ ಕೆಂಗಣ್ಣು ಮಮತಾರವರ ಮೇಲೆ ಇತ್ತು. 2011ರಲ್ಲಿ ಸ್ವತ: ಮಮತಾಬ್ಯಾನರ್ಜಿ ಮುಖ್ಯಮಂತ್ರಿಯಾದ ತರುವಾಯ ಎಡರಂಗವನ್ನು ನಾಚಿಸುವಂತಾ ಚುನಾವಣಾ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ವಿಪರ್ಯಾಸ.

  ಮಮತಾ ಬ್ಯಾನರ್ಜಿಯವರ ಹೊಡತಕ್ಕೆ ತತ್ತರಿಸಿ ಹೋದ ಎಡರಂಗ ಮತ್ತು ಕಾಂಗ್ರೆಸ್ ಪಾರ್ಟಿಯು ತಮ್ಮ ಕಾರ್ಯಕರ್ತರ ನೆರವಿಗೆ ಧಾವಿಸಲೂ ಸ್ಥೈರ್ಯವಿಲ್ಲದೆ ಎರಡೂ ಪಕ್ಷಗಳು ರಾಜ್ಯದಲ್ಲಿ ತಮ್ಮ ಕಚೇರಿಗಳಿಗೆ ಬಾಗಿಲು ಹಾಕಿ ಕುಳಿತಿವೆ.

  2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಗೆದ್ದಿದು 3 ಸೀಟು ಮಾತ್ರ. ಆದರೆ 2018ರ ಪಂಚಾಯತಿ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರವನ್ನು ದಿಟ್ಟವಾಗಿ ಬಿಜೆಪಿ ಎದುರಿಸಿತು. ಈ ಚುನಾವಣೆಯು 100 ಜನರ ಆಹುತಿ ಪಡೆದು ಪಶ್ಚಿಮ ಬಂಗಾಳದ ಭೀಕರ ವಾತಾವರಣಕ್ಕೆ ಕನ್ನಡಿ ಹಿಡಿದಿತ್ತು. ಅಂದಿನಿಂದ ಮಮತಾರವರ ರಾಕ್ಷಸ ರಾಜ್ಯಭಾರ ಪರ್ಯಾಯ ಶಕ್ತಿಯಾಗಿ ಎದ್ದು ನಿಂತ ಬಿಜೆಪಿಯನ್ನು ಗುರಿಯಾಗಿಸಿಕೊಂಡ ಫಲವಾಗಿ ಇಲ್ಲಿಯತನಕ ನೂರಾರು ಬಿಜೆಪಿ ಕಾರ್ಯಕರ್ತರು ಬಲಿಯಾಗಿದ್ದಾರೆ.

  bengaluru

  2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 19 ಸೀಟುಗಳನ್ನು ಗೆದ್ದು ಟಿಎಂಸಿಗೆ ಪರ್ಯಾಯ ಪ್ರಬಲ ಶಕ್ತಿಯಾಗಿ ಬೆಳೆಯಿತು. ಟಿಎಂಸಿ ಗೂಂಡಾಗಳ ವ್ಯಾಪಕ ಹಿಂಸಾಚಾರ ಹಲ್ಲೆ,ಹತ್ಯಾ ರಾಜಕಾರಣಕ್ಕೆ ಜಗ್ಗದೆ ಬಿಜೆಪಿಯು 2021ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಬಹು ದೊಡ್ಡ ಹೆಜ್ಜೆಯನ್ನು ಇಟ್ಟಿತ್ತು.

  ವಿಧಾನಸಭೆ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಯ ಪಡೆಗಳು ನಿಯೋಜನೆಯಾಗಿದ್ದರು ಟಿಎಂಸಿ ಗೂಂಡಾಗಳ ಹಿಂಸಾಚಾರದಲ್ಲಿ 12 ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತದೆ. ರಕ್ತಪಿಪಾಸು ಟಿಎಂಸಿ ಕಾರ್ಯಕರ್ತರನ್ನು ಸ್ವತ: ಮಮತಾ ಕೇಂದ್ರೀಯ ಪಡೆಗಳ ವಿರುದ್ದ ಎತ್ತಿ ಕಟ್ಟುಲು ಸಹಾ ಹಿಂಜರಿಯಲಿಲ್ಲ.

  ಮೇ2 ರ ತರುವಾಯ ಸ್ವಾತಂತ್ರ ಪೂರ್ವದಲ್ಲಿ ಕಂಡರಿಯದ ಚುನಾವಣೋತ್ತರ ಹಿಂಸಾಚಾರವು ಪ್ರಭುತ್ವದ ಬೆಂಬಲದಿಂದ ಮಮತಾ ಆಡಳಿತದಲ್ಲಿ ನಿರ್ದಯವಾಗಿ ನಡೆಯುತ್ತದೆ. ಚುನಾವಣಾ ಫಲಿತಾಂಶ ಬರುತ್ತಿದ್ದ ಹಾಗೆಯೇ ಮಮತಾ ಗೂಂಡಾ ಬ್ರಿಗೇಡ್ ತನ್ನ ಪೈಚಾಚಿಕ ವರ್ತನೆಯನ್ನು ಬಿಜೆಪಿ ಕಾರ್ಯಕರ್ತರ ಮತ್ತು ಅದರ ಬೆಂಬಲಿಗರ ಮೇಲೆ ಭಿಭೀತ್ಸವಾಗಿ ಹರಿಯಬಿಡುತ್ತಾರೆ.

  35 ವಯಸ್ಸಿನ ಅಭಿಜಿತ್ ಸರ್ಕಾರ್ ಮನೆಯ ಮೇಲೆ ದಾಳಿಯಾದಾಗ ಅದರ ವಿಡೀಯೂ ಫೇಸ್ಬುಕ್ ನಲ್ಲಿ ಆತಹಾಕುತ್ತಾನೆ. ಇದರಿಂದ ರೊಚ್ಚಿಗೆದ್ದ ಟಿಎಂಸಿ ಬೆಂಬಲಿಗರುಅವನನ್ನು ವೈರ್ ನಿಂದ ಕುತ್ತಿಗೆ ಹಿಚುಕಿ ಕೊಲ್ಲುತ್ತಾರೆ.

  ಚುನಾವಣಾ ಫಲಿತಾಂಶ ಘೋಷಣೆಯಾದ 24 ಗಂಟೆಗಳಲ್ಲಿ 6ಜನ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡುತ್ತಾರೆ.ಒಂದು ತಿಂಗಳ ಅವಧಿಯಲ್ಲಿ 36 ಬಿಜೆಪಿ ಕಾರ್ಯಕರ್ತರು ಬಲಿಯಾಗುತ್ತಾರೆ ಇವರಲ್ಲಿ ಬಹುತೇಕರು ದಲಿತ ಮತ್ತು ಆದಿವಾಸಿ ಜನಾಂಗಕ್ಕೆ ಸೇರಿದವರು.

  mamata banerjee

  ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೆಲಸ ಮಾಡಿದವರನ್ನು ಮತ್ತು ಅವರ ಬೆಂಬಲಿಗರನ್ನು ಹುಡುಕಿ ಹುಡುಕಿ ಮನೆಗಳ ಮೇಲೆ ದಾಳಿ ಮಾಡುವುದು ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ಅಮಾನುಷವಾಗಿ ಮಾರಣಾಂತಿಕ ಹಲ್ಲೆ ಮಾಡುವುದು ಸರ್ವೆಸಾಮಾನ್ಯ ಸಂಗತಿಯಾಗಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಸರ್ಕಾರದ ಕೈಗೊಂಬೆಯಾಗಿ ಗಂಭೀರ ಅಪರಾಧಗಳನ್ನು ನಿರ್ಲಕ್ಷಿಸಿರುವ ಕಾರಣ ಗೂಂಡಾಗಳಿಗೆ ಮತ್ತಷ್ಟು ಉತ್ತೇಜನ ನೀಡುವಂತಾಗಿದೆ.

  ಟಿಎಂಸಿ ಗೂಂಡಾಗಳ ಭಯದಿಂದ ಒಂದು ಲಕ್ಷಕ್ಕೂ ಹೆಚ್ಚು ಜನಮನೆ ಮಠ ತೊರೆದು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಇಂದಿಗೂ ಸಾವಿರಾರು ಜನ ನೆರೆಯ ಅಸ್ಸಾಂ ರಾಜ್ಯದಲ್ಲಿ ಆಶ್ರಯಪಡೆದಿದ್ದಾರೆ.

  24 ಪರಗಣ ಜಿಲ್ಲೆಯ ಜೇಗ್ರಾಮ್ ನ ನಿವಾಸಿ ಪಿಂಕಿ ಬಾಜ್ ಬಿಜೆಪಿಗೆ ಚುನಾವಣೆಯಲ್ಲಿ ಕೆಲಸ ಮಾಡಿದಳೆಂದು ಅವಳ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿ ಮನೆಗೆ ಬೆಂಕಿ ಹಾಕುತ್ತಾರೆ. ಹಲವಾರು ಮಹಿಳಾ ಕಾರ್ಯಕರ್ತರನ್ನು ಲೈಂಗಿಕವಾಗಿ ಶೋಷಣೆ ಮಾಡಿ ಅವರನ್ನು ಬಿಜೆಪಿ ತೊರೆಯುವಂತೆ ಮಾಡಲಾಗಿದೆ. ಬಹುತೇಕ ಹಿಂಸಾಚಾರವನ್ನು ಬಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವ ಮುಸ್ಲಿಂ ಗೂಂಡಾಗಳು ಪೊಲೀಸರ ಸಹಕಾರದಿಂದ ನಡೆಸುತ್ತಿರುವುದರಿಂದ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ.

  ನೂರಾರು ಮಹಿಳೆಯರು ತಮಗೆ ಟಿಎಂಸಿ ಗೂಂಡಾಗಳು ನಡೆಸಿದ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯ ಬಗ್ಗೆ ದೂರು ದಾಖಲಿಸಲು ಧೈರ್ಯವಿಲ್ಲದಷ್ಟು ಭಯಗೊಂಡಿದ್ದಾರೆ. ದೂರು ದಾಖಲಿಸಿದರು ಅದನ್ನು ಠಾಣೆಯಲ್ಲಿ ಪೊಲೀಸರು ಪಡೆಯುವುದಿಲ್ಲ. ಇದಲ್ಲದೆ ದೂರು ದಾಖಲಿಸಲು ಬಂದವರನ್ನು ಪೊಲೀಸರೆ ಬೆದರಿಸಿ ಹಿಂದಕ್ಕೆ ಕಳುಹಿಸಿದ ಅನೇಕ ಪ್ರಕರಣಗಳುನಡೆದಿವೆ.

  60 ವರ್ಷ ವಯಸ್ಸಿನ ಮಹಿಳೆಯನ್ನು ಬಿಜೆಪಿಗೆ ಕೆಲಸ ಮಾಡಿದಳು ಎಂದು ಮೊಮ್ಮಗನ ಮುಂದೆಯೇ ಆಕೆಯ ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ ಆ ತಾಯಿಗೆ ಇದರಿಂದ ಆಗಿರುವ ದು:ಖ ಅಪಮಾನವನ್ನು ಶಬ್ದಗಳಿಂದ ವಿವರಿಸಲು ಸಾಧ್ಯವಿಲ್ಲದ್ದು. ಆಕೆ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿ ತನಗಾದ ಘೋರ ಪರಿಸ್ಥಿತಿಯನ್ನು ನ್ಯಾಯಾಧೀಶರಿಗೆ ತಿಳಿಸಬೇಕಾದರೆ ಅದೆಷ್ಟು ಸಂಕಟ ಅನುಭವಿಸಿರಬೇಕು. ಮನುಷ್ಯ ರೂಪದ ಮೃಗಗಳು ತಮ್ಮ ತಾಯಿ ವಯಸ್ಸಿನವಳನ್ನು ತಮ್ಮ ಕಾಮತೃಷೆಗೆ ಬಲಿಕೊಟ್ಟು ದ್ವೇಷಕ್ಕೆ ತೀರಿಸಿಕೊಳ್ಳುವ ರಾಕ್ಷಸೀ ತೃಣಮೂಲ ಕಾರ್ಯಕರ್ತರ ಅಟ್ಚಹಾಸವು ಎಂತಹವರಿಗೂ ರೋಷಾಗ್ನಿಯಲ್ಲಿ ಬೇಯುವಂತೆ ಮಾಡುತ್ತದೆ.

  ಪೂರ್ಣಿಮಾ ಮೊಂಡಲ್ ತನ್ನ ಗಂಡನನ್ನು ಟಿಎಂಸಿ ಗೂಂಡಾಗಳು ತನ್ನ ಕಣ್ಣ ಎದುರಿಗೆ ಕೊಚ್ಚಿ ಕೊಂದು ಹಾಕಿದ್ದನ್ನು ನೋಡಬೇಕಾದ ಅಸಹಾಯಕತೆ. ಹತ್ತಾರು ಜನ ಅವಳ ಸೀರೆಗೆ ಕೈ ಹಾಕಿ ವಿವಸ್ತ್ರ ಮಾಡಿ ಆಕೆಯ ಮಾನಭಂಗಕ್ಕೆ ಪ್ರಯತ್ನಿಸಿದಾಗ ಆಕೆ ಗಂಡ ಹೆಣವಾಗಿದ್ದಕ್ಕೆ ದು:ಖಿಸಬೇಕಾ ಇಲ್ಲ ಹತ್ತಾರು ಜನ ತನ್ನ ದೇಹದ ಮೇಲೆ ನಡೆಸಿದ ದೌರ್ಜನ್ಯಕ್ಕೆ ರೋದಿಸಬೇಕಾ? ಎಂತಹ ದಾರುಣ ಪರಿಸ್ಥಿತಿ ಆಕೆಯದು. ಯಾವ ಹೆಣ್ಣಿಗೂ ಇಂತಹ ಪರಿಸ್ಥಿತಿ ಜೀವನದಲ್ಲಿ ಬರಬಾರದು ಆದರೆ ಪೂರ್ಣಿಮಾ ಇಂದು ಧೈರ್ಯವಾಗಿ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಕೂಗಿದ್ದಾಳೆ.
  ಸ್ಥಳೀಯ ಪೊಲೀಸರು ಅಪರಾಧಿಗಳನ್ನು ಬಂಧಿಸುವ ಬದಲು ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹಾಕುತ್ತಾರೆ ಎಂದು ಅರ್ಜಿಯ ಮೂಲಕ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ.

  ಪ್ರಜಾಪ್ರಭುತ್ವವನ್ನು ಲೇವಡಿ ಮಾಡಿಕೊಂಡು ಹಿಂಸಾಚಾರದ ಮೂಲಕ ನಿರ್ದೆಯವಾಗಿ ವಿರೋಧಿಗಳ ಹತ್ಯೆಮಾಡಿ ರಾಜಕೀಯ ಮೇಲುಗೈ ಸಾಧಿಸುವ ದಮನಕಾರಿ ಸಿದ್ದಾಂತಕ್ಕೆ ಒತ್ತಾಸೆಯಾಗಿ ನಿಂತಿರುವ ವಿರೋಧಪಕ್ಷ ಮುಖಂಡರುಗಳಿಗೆ ನಿಮ್ಮಲ್ಲಿ ಮನುಷತ್ವ ಇರುವುದಾ ಎಂದು ಪ್ರಶ್ನಿಸಬೇಕಾಗಿದೆ.

  ಒಂದು ಅಂದಾಜಿನ ಪ್ರಕಾರ ಮಮತಾ ಆಡಳಿತದಲ್ಲಿ ಚುನಾವಣೆಯ ಫಲಿತಾಂಶದ ತರುವಾಯ 15 ಸಾವಿರ ಹಿಂಸಾಚಾರ ಪ್ರಕರಣಗಳು ಮತ್ತು 7000 ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದಿದೆ ಎಂದು ವಸ್ತುಸ್ಥಿತಿ ಅಧ್ಯಯನ ಮಾಡಿದ ನಾಗರಿಕ ಸಮಿತಿಯ ಸದಸ್ಯರು ವರದಿ ನೀಡಿದ್ದಾರೆ. ಕೋಲ್ಕತ್ತಾ ಉಚ್ಚನ್ಯಾಯಾಲಯ ರಾಷ್ಟ್ರೀಯ ಮಾನವ ಹಕ್ಕು ಆಯೋಗವನ್ನು ಬಂಗಾಲದ ಹಿಂಸಾಚಾರದ ಕುರಿತು ತನಿಖೆ ಮಾಡಿ ವರದಿ ಸಲ್ಲಿಸಲು ಆದೇಶಿಸಿದೆ.

  ಮಮತಾ ಬ್ಯಾನರ್ಜಿ ಸ್ವತ: ಮಹಿಳೆಯಾಗಿ ತನ್ನ ರಾಜ್ಯದಲ್ಲಿ ತನ್ನದೆ ಪಕ್ಷದವರು ರಾಜಾರೋಷವಾಗಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆಸುತ್ತಿದ್ದರು ಅದನ್ನು ತಡೆಯುವ ಅಥವಾ ಅತ್ಯಾಚಾರಕ್ಕೆ ನಡೆಯದಂತೆ ಮಹಿಳೆಗೆ ರಕ್ಷಣೆ ಕೊಡುವ ಮಾನವೀಯತೆಯೇ ಕಾಣದಾಗಿದೆ. ಮಹಿಳೆಯಾಗಿ ಮತ್ತೊಬ್ಬ ಮಹಿಳೆಯನ್ನು ಕಾಪಾಡುವುದಕ್ಕಿಂತ ತನ್ನ ರಾಜಕೀಯ ವಿರೋಧಿಗಳನ್ನು ಮುಗಿಸುವುದೆ ಮಮತಾಗೆ ಮುಖ್ಯವಾಗಿದೆ.

  ಹೈಕೋರ್ಟ್ ಆದೇಶದ ಮೇರೆಗೆ ಜಾಧವ್ ಪುರದಲ್ಲಿ ಪರಿಸ್ಥಿತಿಯ ತನಿಖೆಗೆ ಹೋಗಿದ್ದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯರ ಮೇಲೆಯೂ ಟಿಎಂಸಿ ಗೂಂಡಾಗಳು ಹಲ್ಲೆ ಮಾಡುತ್ತಾರೆ.

  ದಲಿತರ ಮತ್ತು ಆದಿವಾಸಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್, ಎಡಪಕ್ಷಗಳು ಮತ್ತು ಇತರ ವಿರೋಧ ಪಕ್ಷಗಳು ಮಮತಾ ಗೂಂಡಾ ರಾಜ್ಯದಲ್ಲಿ ದಲಿತರ ಮತ್ತು ಆದಿವಾಸಿಗಳ ಕೊಲೆ ಮತ್ತು ಅತ್ಯಾಚಾರಗಳ ಕುರಿತು ಉಸಿರೆತ್ತಲು ಸಿದ್ದರಿಲ್ಲ.

  ಪಶ್ಚಿಮಬಂಗಾಳದ ಚುನಾವಣೆಯಲ್ಲಿ ಮಮತಾ ಪರವಾಗಿಪ್ರಚಾರ ಕೈಗೊಂಡ ಜಯಭಾದುರಿ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುವ ಸಂವೇದನಾಶೀಲತೆಯು ಇಲ್ಲವಾಗಿದೆ.

  ವ್ಯವಸ್ಥಿತವಾದ ರೀತಿಯಲ್ಲಿ ಬೀರ್ ಬಮ್, ನಂದಿಗ್ರಾಮ,ದಕ್ಷಿಣಮತ್ತು ಉತ್ತರ 24 ಪರಗಣ ಮತ್ತು ಕೂಚ್ ಬಿಹಾರ್ ಜಿಲ್ಲೆಗಳಿಂದ ಹಿಂದುಗಳು ಸುರಕ್ಷಿತ ಸ್ಥಳವನ್ನು ಅರಸಿಕೊಂಡು ನೆರೆ ರಾಜ್ಯಅಸ್ಸಾಂನ ದೂಬ್ರಿ ಜಿಲ್ಲೆಗೆ ಹೋಗಿ ಆಶ್ರಯ ಪಡೆಯ ಬೇಕಾಗಿದೆ. ಟಿಎಂಸಿ ಗೂಂಡಾಗಳ ದಬ್ಬಾಳಿಕೆಗೆ ಬೆದರಿ ಮನೆ ತೊರೆದುಬಂದಿದ್ದ ಸಾವಿರಾರು ಜನರಿಗೆ 170 ತಾತ್ಕಾಲಿಕ ಶಿಬಿರಗಳಲ್ಲಿಬಿಜೆಪಿ ಆಶ್ರಯ ಕಲ್ಪಿಸಿದೆ.

  ಸಂತ್ರಸ್ತ ಕಾರ್ಯಕರ್ತರನ್ನು ಕಾಣಲು ಮತ್ತು ಪರಿಸ್ಥಿತಿಯನ್ನುಅರಿಯಲು ಪಶ್ಚಿಮ ಮಿಡ್ನಾಪುರದ ಪಂಚಖುದಿಗೆ ಹೋದ ಕೇಂದ್ರಸಚಿವ ಮುರಳೀಧರನ್ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡುವ ಪ್ರಯತ್ನ ಮಾಡುತ್ತಾರೆ. ಗಲಭೆಗ್ರಸ್ತ ನಂದಿಗ್ರಾಮಕ್ಕೆ ಭೇಟಿ ಕೊಟ್ಟು ನೊಂದವರನ್ನು ಸಂತೈಸಲು ತೆರಳಿದ್ದ ರಾಜ್ಯಪಾಲರಕಾರಿಗೆ ಅಡ್ಡಹಾಕಿ ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಗೂಂಡಾವರ್ತನೆಗೆ ತಡೆಯಲು ಪೊಲೀಸರು ಕೂಡಾ ಅಸಹಾಯಕರು ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

  ಪಶ್ಚಿಮಬಂಗಾಳದ ಮಾಧ್ಯಮಗಳು ಮಮತಾ ಕಾಲಬುಡದಲ್ಲಿ ಮಲಗಿ ಸತ್ಯವನ್ನು ಸಂಕಷ್ಟದಲ್ಲಿರುವವರ ನೋವನ್ನು ಮರೆಮಾಚಿ ಮಮತಾ ಬ್ಯಾನರ್ಜಿಯವರನ್ನು ಕಾಪಾಡಲು ಕಂಕಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.

  ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಸ್ಥಿತಿಯು ಕಾಶ್ಮೀರದ ಪರಿಸ್ಥಿತಿಗೆ ತಲುಪುವ ದಿನ ದೂರವಿಲ್ಲ. ಬಂಗ್ಲಾದೇಶದ ಮುಸ್ಲಿಂಮರು ಗಡಿ ಜಿಲ್ಲೆಗಳಲ್ಲಿ ಸಂಖ್ಯೆ ವೃದ್ಧಿಸಿಕೊಂಡು ಆಡಳಿತ ಪಕ್ಷದ ಬೆಂಬಲದಿಂದ ಹಿಂದೂಗಳ ಮೇಲೆ ದೌರ್ಜನ್ಯ ಅತ್ಯಾಚಾರ ಯಾವುದೆ ಭಯವಿಲ್ಲದೆ ನಡೆಸುತ್ತಿದ್ದಾರೆ. ಸಾವಿರಾರು ಜನ ತಮ್ಮ ಪ್ರಾಣ ಮಾನ ಕಾಪಾಡಿಕೊಳ್ಳಲು ತಮ್ಮ ಮನೆಗಳನ್ನು ತೊರೆದು ವಲಸೆ ಹೋಗುವ ದಾರುಣ ಪರಿಸ್ಥಿತಿಯು ಇಲ್ಲಿ ಈಗಾಗಲೇ ನಿರ್ಮಾಣವಾಗಿದೆ.

  ಮಮತಾ ಪೈಶಾಚಿಕ ಆಡಳಿತದ ವಿರುದ್ದ ಬಿಜೆಪಿ ಮತ್ತು ಸಂಘದ ಇತರ ಸಂಘಟನೆಗಳು ಇಂದು ಏಕಾಂಗಿಯಾಗಿ ಹೋರಾಡುತ್ತಿದೆ. ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವ ಕಪಟಿಗಳು ಪಶ್ಚಿಮಬಂಗಾಳದಲ್ಲಿ ನಡೆದಿರುವ ನೂರಾರು ಅತ್ಯಾಚಾರಗಳ ಬಗ್ಗೆ ಧ್ವನಿಯೆತ್ತದೆ ಆತ್ಮವಂಚನೆ ಮಾಡಿಕೊಂಡಿವೆ.

  ವ್ಯಾಪಕ ಹಿಂಸಾಚಾರದಲ್ಲಿ ನೂರಾರು ಪ್ರಾಣಗಳುಬಲಿಯಾಗಿದ್ದರು ಅದನ್ನು ಖಂಡಿಸುವ ಬದಲು ಮಮತಾರವರನ್ನು ಮೋದಿಯವರನ್ನು ಪರಾಭವಗೊಳಿಸಿದ ಧೀರ ಮಹಿಳೆಯೆಂದು ಆಕೆಯ ಕ್ರೌರ್ಯಕ್ಕೆ ಪರದೆ ಎಳೆಯುವ ನೀಚ ಕೆಲಸದಲ್ಲಿ ವಿರೋಧ ಪಕ್ಷಗಳು ತೊಡಗಿ ತಮ್ಮ ನೈತಿಕ ಶಕ್ತಿಯನ್ನು ಕಳೆದುಕೊಂಡು ಬೆತ್ತಲಾಗಿವೆ.

  ಪ್ರಕಾಶ್ ಶೇಷರಾಘವಾಚಾರ್
  sprakashbjp@gmail.com

  Prakash Sesharaghavachar is a Joint Spokesperson of Karnataka BJP

  Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

  bengaluru

  LEAVE A REPLY

  Please enter your comment!
  Please enter your name here