Home ಬೆಂಗಳೂರು ನಗರ ದೇವಸ್ಥಾನ, ಚರ್ಚ್, ಮಸೀದಿ ಸೇರಿ ಧಾರ್ಮಿಕ ಕೇಂದ್ರಗಳು ಭಕ್ತರ ಪ್ರವೇಶಕ್ಕೆ ನಾಳೆಯಿಂದ ಮುಕ್ತ

ದೇವಸ್ಥಾನ, ಚರ್ಚ್, ಮಸೀದಿ ಸೇರಿ ಧಾರ್ಮಿಕ ಕೇಂದ್ರಗಳು ಭಕ್ತರ ಪ್ರವೇಶಕ್ಕೆ ನಾಳೆಯಿಂದ ಮುಕ್ತ

35
0

ಮನರಂಜನಾ ತಾಣಗಳಿಗೂ ಪ್ರವೇಶ ಮಾಡಿಕೊಟ್ಟಿದೆ ರಾಜ ಸರ್ಕಾರ

ಬೆಂಗಳೂರು:

ನಾಳೆ ಜುಲೈ 25ರಿಂದ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳು ಭಕ್ತಾದಿಗಳ ದರ್ಶನಕ್ಕೆ ತೆರೆದಿರುತ್ತವೆ. ಎಲ್ಲಾ ದೇವಸ್ಥಾನಗಳು, ಚರ್ಚ್, ಮಸೀದಿಗಳು, ಗುರುದ್ವಾರಗಳು ತೆರೆಯುವುದಲ್ಲದೆ ಮನರಂಜನಾ ಕೇಂದ್ರಗಳು ಮತ್ತು ಇತರ ಚಟುವಟಿಕೆಗಳು ತೆರೆದಿರುತ್ತವೆ.

ಧಾರ್ಮಿಕ ಕೇಂದ್ರಗಳ ತೆರೆಯುವಿಕೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು ಜಾತ್ರೆಗಳು, ದೇವಸ್ಥಾನ ಉತ್ಸವಗಳು, ಮೆರವಣಿಗೆಗಳು ಹಾಗೂ ಇನ್ನಿತರ ಬೃಹತ್ ಸಂಖ್ಯೆಯಲ್ಲಿ ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ, ಅವಕಾಶವನ್ನು ನೀಡಿಲ್ಲ.

temples and amusement parks allowed to open

ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುವಾಗ ಕೋವಿಡ್-19 ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ರಾಜ್ಯ ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ.

ಮನರಂಜನಾ ಕೇಂದ್ರಗಳ ತೆರೆಯುವಿಕೆಗೆ ಸರ್ಕಾರ ಅನುಮತಿ ನೀಡಿದೆಯಾದರೂ ಜಲ ಕ್ರೀಡೆಗಳು ಮತ್ತು ಜಲ ಸಂಬಂಧಿ ಸಾಹಸ ಕ್ರೀಡೆಗಳು, ಚಟುವಟಿಕೆಗಳಿಗೆ ಇನ್ನೂ ಅನುಮತಿಯನ್ನು ಸಾರ್ವಜನಿಕರಿಗೆ ನೀಡಿಲ್ಲ, ಎಂದು ಆದೇಶದಲ್ಲಿ ಹೇಳಲಾಗಿದೆ

LEAVE A REPLY

Please enter your comment!
Please enter your name here