Home Uncategorized 'RRR' ಚಿತ್ರವನ್ನು 'ಬಾಲಿವುಡ್‌ ಚಿತ್ರ' ಎಂದ ಆಸ್ಕರ್‌ ನಿರೂಪಕ: ಭಾರತವೆಂದರೆ ಕೇವಲ ಹಿಂದಿ, ಬಾಲಿವುಡ್ ಅಲ್ಲ-...

'RRR' ಚಿತ್ರವನ್ನು 'ಬಾಲಿವುಡ್‌ ಚಿತ್ರ' ಎಂದ ಆಸ್ಕರ್‌ ನಿರೂಪಕ: ಭಾರತವೆಂದರೆ ಕೇವಲ ಹಿಂದಿ, ಬಾಲಿವುಡ್ ಅಲ್ಲ- ನಟಿ ರಮ್ಯಾ ಕಿಡಿ

23
0
Advertisement
bengaluru

ʼನಾಟು ನಾಟುʼ ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿರುವ RRR ಚಿತ್ರದ ಬಗ್ಗೆ ಆಸ್ಕರ್‌ ನಿರೂಪಕ ಮಾಡಿದ ತಪ್ಪಾದ ಉಲ್ಲೇಖವು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ನವದೆಹಲಿ: ʼನಾಟು ನಾಟುʼ ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿರುವ RRR ಚಿತ್ರದ ಬಗ್ಗೆ ಆಸ್ಕರ್‌ ನಿರೂಪಕ ಮಾಡಿದ ತಪ್ಪಾದ ಉಲ್ಲೇಖವು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಆರ್‌ಆರ್‌ಆರ್‌ ಚಿತ್ರದ ಗೀತೆಗೆ ಆಸ್ಕರ್‌ ಬಂದಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸುತ್ತಲೇ, ಚಿತ್ರವನ್ನು ʼಬಾಲಿವುಡ್‌ ಚಿತ್ರʼ ಎಂದು ತಪ್ಪಾಗಿ ಗುರುತಿಸಿದ್ದರ ಬಗ್ಗೆ ಆಸ್ಕರ್ 2023ರ ನಿರೂಪಕ ಜಿಮ್ಮಿ ಕಿಮ್ಮೆಲ್ ಅವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ಕೂಡ ಕೂಡ ಕಿಡಿಕಾರಿದ್ದು, ಭಾರತ ಎಂದರೆ ಕೇವಲ ಹಿಂದಿ, ಬಾಲಿವುಡ್ ಅಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಟು-ನಾಟು ತೆಲುಗು ಗೀತೆ ಈ ಸಾಧನೆ ಮಾಡಿರುವುದು ನನಗೆ ತುಂಬಾ ಖುಷಿಯಾಗಿದೆ. ಭಾರತವು ವಿಭಿನ್ನ ಸಂಸ್ಕೃತಿಗಳು ಮತ್ತು ಭಾಷೆಗಳ ವೈವಿಧ್ಯಮಯ ದೇಶ ಎಂದು ವಿಶ್ವಕ್ಕೇ ಗೊತ್ತಾಗಿದೆ. ಭಾರತವೆಂದರೆ ಕೇವಲ ಹಿಂದಿಯಲ್ಲ. ಭಾರತ ಕೇವಲ ಬಾಲಿವುಡ್ ಅಲ್ಲ. ಭಾರತವೆಂದರೆ ಹಿಂದಿಯೆಂಬ ರೂಢಿಗತ ಚಿಂತನೆಯೊಂದು ಆಲಸಿತನ ಎಂದು ಹೇಳಿದ್ದಾರೆ.

bengaluru bengaluru

ಇದರ ಜೊತೆಗೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವುದಿಲ್ಲ ಎಂಬ ಹಿಂದಿ ಮಹಿಳೆಯನ್ನು ಆಟೋದಿಂದ ಕೆಳಕ್ಕಿಳಿಸಿದ ಆಟೊ ಚಾಲಕನ ವಿಡಿಯೊವನ್ನು ರಮ್ಯಾ ಹಂಚಿಕೊಂಡಿದ್ದಾರೆ.

I’m also really glad Naatu Naatu was performed in Telugu – about time the world knows that India is a diverse country of different cultures and languages. India is not just Hindi. India is not just Bollywood. Stereotyping is lazy thinking. https://t.co/fGPhAMwkzX
— Ramya/Divya Spandana (@divyaspandana) March 13, 2023


bengaluru

LEAVE A REPLY

Please enter your comment!
Please enter your name here