Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಸ್ವಯಂ ಘೋಷಿತ ಆಸ್ತಿ ತೆರಿಗೆ: ವಲಯ ವರ್ಗೀಕರಣದಲ್ಲಿ ತಪ್ಪು ಘೋಷಣೆ ದಂಡ-ಬಡ್ಡಿಗೆ ವಿನಾಯಿತಿ ನೀಡಲು ಬಿಬಿಎಂಪಿಗೆ ಅಶ್ವತ್ಥನಾರಾಯಣ ಸಲಹೆ
  • ಬೆಂಗಳೂರು ನಗರ

ಸ್ವಯಂ ಘೋಷಿತ ಆಸ್ತಿ ತೆರಿಗೆ: ವಲಯ ವರ್ಗೀಕರಣದಲ್ಲಿ ತಪ್ಪು ಘೋಷಣೆ ದಂಡ-ಬಡ್ಡಿಗೆ ವಿನಾಯಿತಿ ನೀಡಲು ಬಿಬಿಎಂಪಿಗೆ ಅಶ್ವತ್ಥನಾರಾಯಣ ಸಲಹೆ

The Bengaluru Live August 3, 2021 10:30 PM 1 minute read
Self-Assesment Property Tax wrong declaration: Malleswaram MLA Ashwathnarayana advises BBMP to exempt peanlty and interest

ಸ್ವಯಂ ಘೋಷಿತ ಆಸ್ತಿ ತೆರಿಗೆ: ವಲಯ ವರ್ಗೀಕರಣದಲ್ಲಿ ತಪ್ಪು ಘೋಷಣೆ ದಂಡ-ಬಡ್ಡಿಗೆ ವಿನಾಯಿತಿ ನೀಡಲು ಬಿಬಿಎಂಪಿಗೆ ಅಶ್ವತ್ಥನಾರಾಯಣ ಸಲಹೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ನಗರದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡು ದಂಡ ಮತ್ತು ಬಡ್ಡಿ ಸುಳಿಗೆ ಸಿಲುಕಿರುವ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡುವಂತೆ ಮಲ್ಲೇಶ್ವರದ ಶಾಸಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಿಬಿಎಂಪಿಗೆ ಸಲಹೆ ನೀಡಿದರು.

ಈ ವಿಷಯಕ್ಕೆ ಸಂಬಂಧಿಸಿ ಮಂಗಳವಾರ ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣದಿಂದ ಆಸ್ತಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ದಂಡ ಮತ್ತು ಬಡ್ಡಿಗೆ ಗುರಿಯಾದ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡಬೇಕು. ಈ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸೂಚಿಸಿದರು.

ನಗರದಲ್ಲಿ ಒಟ್ಟು 22 ಲಕ್ಷ ಆಸ್ತಿಗಳಿದ್ದು, 78,000 ಆಸ್ತಿಗಳ ಮಾಲೀಕರು 2016ರಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡಿದ್ದಾರೆ. ಇದರಿಂದಾಗಿ ಬಿಬಿಎಂಪಿಗೆ ಸುಮಾರು 116 ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ. ಈ ವಿಷಯವನ್ನು ಯೋಜನೆ ಜಾರಿ‌ ಮಾಡಿದಾಗಲೇ ಆಸ್ತಿ ಮಾಲೀಕರಿಗೆ ಮನವರಿಕೆ ಮಾಡಬೇಕಿತ್ತು. ಹಾಗೆ ಮಾಡದೇ 2016ರಿಂದ ಅನ್ವಯವಾಗುಂತೆ ಇದರ ಮೇಲೆ ಬಡ್ಡಿ (89 ಕೋಟಿ ರೂಪಾಯಿ) ಮತ್ತು ಮಾಡಿದ ತಪ್ಪಿಗೆ ದಂಡ (232 ಕೋಟಿ ರೂಪಾಯಿ) ವಿಧಿಸುವುದು ತಪ್ಪಾಗುತ್ತದೆ. ಇದರ ಬದಲು ಬಡ್ಡಿ ಮತ್ತು ದಂಡದ ಮೊತ್ತಕ್ಕೆ ವಿನಾಯಿತಿ ಕೊಟ್ಟು, ಆಸ್ತಿ ತೆರಿಗೆಯನ್ನು ಮಾತ್ರ ಕಟ್ಟಿಸಿಕೊಳ್ಳುವ ವ್ಯವಸ್ಥೆ ಆದರೆ ಸೂಕ್ತ ಎಂದು ಅವರು ಅಧಿಕಾರಿಗಳ ಗಮನಕ್ಕೆ ತಂದರು.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಜತೆಗೂ ಚರ್ಚೆ ನಡೆಸುವಂತೆ ಅಶ್ವತ್ಥನಾರಾಯಣ ಅವರು ಸೂಚಿಸಿದರು.  .

ಸಾರ್ವಜನಿಕರು ಆಸ್ತಿ ತೆರಿಗೆ ಮೇಲೆ ವಿಧಿಸುತ್ತಿರುವ ದಂಡ- ಬಡ್ಡಿಯ ಬಗ್ಗೆ ದೂರು ಸಲ್ಲಿಸಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇಂಥ ಸಮಯದಲ್ಲಿ ದುಪ್ಪಟ್ಟು ದಂಡ, ಬಡ್ಡಿ ವಿಧಿಸಿದರೆ ಜನರಿಗೆ ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ವಿಶೇಷ ಆಯುಕ್ತ ಬಸವರಾಜ್‌ ಹಾಗೂ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ಮುಂತಾದ ಅಧಿಕಾರಿಗಳು ಇದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಬಿಬಿಎಂಪಿ ಮುಖ್ಯ ಆಯುಕ್ತರು ರವರಿಂದ ಗಾಂಧಿನಗರ ಬಹುಮಹಡಿ ವಾಹನ ನಿಲುಗಡೆ ತಾಣದ ಕಾಮಗಾರಿ ಪರಿಶೀಲನೆ
Next: ಬೊಮ್ಮಾಯಿ ಕ್ಯಾಬಿನೆಟ್ 29 ಶಾಸಕರ ಅಂತಿಮ ಪಟ್ಟಿ

Related Stories

ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ಉತ್ತರಹಳ್ಳಿ, ವಡ್ಡರಪಾಳ್ಯ, ದ್ವಾರಕಾನಗರ ಸೇರಿ ಹಲವೆಡೆ ನ.30ರಂದು ವಿದ್ಯುತ್ ವ್ಯತ್ಯಯ: ಬೆಸ್ಕಾಂ

The Bengaluru Live November 26, 2026 7:30 PM
ತ್ಯಾಜ್ಯ ನಿರ್ವಹಣೆ ಮತ್ತು ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ವೇಳೆ ವಿಂಗಡಿಸಿದ ಕಸದ ಚೀಲಗಳೊಂದಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು
  • ಬೆಂಗಳೂರು ನಗರ

ಅಸಮರ್ಪಕ ತ್ಯಾಜ್ಯ ನಿರ್ವಹಣೆ, ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಿಂದ 39,800 ರೂ. ದಂಡ

The Bengaluru Live November 26, 2026 7:25 PM
ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಮೆಟ್ರೋ ರೆಡ್ ಲೈನ್‌ಗೆ ಶೀಘ್ರ ಅನುಮೋದನೆ, ಸರ್ಜಾಪುರ–ಸೇಂಟ್ ಜಾನ್ಸ್ ಡಬಲ್ ಡೆಕ್ಕರ್ ಕಾರಿಡಾರ್ ಪರಿಗಣನೆಗೆ ಕೇಂದ್ರಕ್ಕೆ ಮನವಿ: ಕೃಷ್ಣ ಬೈರೇಗೌಡ

The Bengaluru Live November 26, 2026 4:14 PM

Latest Post

ಕರ್ನಾಟಕದಲ್ಲಿ ಉದ್ಯಮ ವಿಸ್ತರಣೆ, ಸುಧಾರಿತ ಉತ್ಪಾದನೆಗೆ ಮಕಿನೊ ಆಸಕ್ತಿ: ಜಪಾನ್ ಮಾತುಕತೆ ಬಳಿಕ ಎಂ.ಬಿ. ಪಾಟೀಲ್ ಜಪಾನ್‌ನಲ್ಲಿ ಮಕಿನೊ ಅಧಿಕಾರಿಗಳೊಂದಿಗೆ ಮಾತುಕತೆ ವೇಳೆ ಕರ್ನಾಟಕ ನಿಯೋಗದ ಸದಸ್ಯರು, ಉಡುಗೊರೆ ವಿನಿಮಯ
  • ಕರ್ನಾಟಕ

ಕರ್ನಾಟಕದಲ್ಲಿ ಉದ್ಯಮ ವಿಸ್ತರಣೆ, ಸುಧಾರಿತ ಉತ್ಪಾದನೆಗೆ ಮಕಿನೊ ಆಸಕ್ತಿ: ಜಪಾನ್ ಮಾತುಕತೆ ಬಳಿಕ ಎಂ.ಬಿ. ಪಾಟೀಲ್

November 26, 2026 9:35 PM
ಹುಕ್ಕೇರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಲೋಕಾಯುಕ್ತ ಬಲೆಗೆ: ಶಿಕ್ಷಕರಿಂದ 15,000 ರೂ. ಲಂಚ ಸ್ವೀಕಾರ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಹುಕ್ಕೇರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಲೋಕಾಯುಕ್ತ ಬಲೆಗೆ: ಶಿಕ್ಷಕರಿಂದ 15,000 ರೂ. ಲಂಚ ಸ್ವೀಕಾರ

November 26, 2026 7:57 PM
ಸಾಗರ ಸಹಾಯಕ ಆಯುಕ್ತರ ಆಪ್ತ ಸಹಾಯಕ ಲೋಕಾಯುಕ್ತ ಬಲೆಗೆ: 5 ಲಕ್ಷ ರೂ. ಲಂಚಕ್ಕೆ ಬೇಡಿಕೆ, ಫೋನ್‌ಪೇಯಲ್ಲಿ 2,000 ರೂ. ಸ್ವೀಕಾರ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಸಾಗರ ಸಹಾಯಕ ಆಯುಕ್ತರ ಆಪ್ತ ಸಹಾಯಕ ಲೋಕಾಯುಕ್ತ ಬಲೆಗೆ: 5 ಲಕ್ಷ ರೂ. ಲಂಚಕ್ಕೆ ಬೇಡಿಕೆ, ಫೋನ್‌ಪೇಯಲ್ಲಿ 2,000 ರೂ. ಸ್ವೀಕಾರ

November 26, 2026 7:57 PM
ಉತ್ತರಹಳ್ಳಿ, ವಡ್ಡರಪಾಳ್ಯ, ದ್ವಾರಕಾನಗರ ಸೇರಿ ಹಲವೆಡೆ ನ.30ರಂದು ವಿದ್ಯುತ್ ವ್ಯತ್ಯಯ: ಬೆಸ್ಕಾಂ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ಉತ್ತರಹಳ್ಳಿ, ವಡ್ಡರಪಾಳ್ಯ, ದ್ವಾರಕಾನಗರ ಸೇರಿ ಹಲವೆಡೆ ನ.30ರಂದು ವಿದ್ಯುತ್ ವ್ಯತ್ಯಯ: ಬೆಸ್ಕಾಂ

November 26, 2026 7:30 PM
ಅಸಮರ್ಪಕ ತ್ಯಾಜ್ಯ ನಿರ್ವಹಣೆ, ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಿಂದ 39,800 ರೂ. ದಂಡ ತ್ಯಾಜ್ಯ ನಿರ್ವಹಣೆ ಮತ್ತು ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ವೇಳೆ ವಿಂಗಡಿಸಿದ ಕಸದ ಚೀಲಗಳೊಂದಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು
  • ಬೆಂಗಳೂರು ನಗರ

ಅಸಮರ್ಪಕ ತ್ಯಾಜ್ಯ ನಿರ್ವಹಣೆ, ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಿಂದ 39,800 ರೂ. ದಂಡ

November 26, 2026 7:25 PM
ಔರಾದ್ ನೀರಿನ ಸಮಸ್ಯೆ: ಪತ್ರಿಕಾ ವರದಿ ಬೆನ್ನಲ್ಲೇ ಸಿಎಂ ಸಚಿವಾಲಯ ಕ್ರಮ, ಟ್ಯಾಂಕರ್ ಮತ್ತು 40 ಎಚ್‌ಪಿ ಮೋಟಾರ್ ವ್ಯವಸ್ಥೆ; ₹50 ಲಕ್ಷ ಪ್ರಸ್ತಾವನೆ ಸಲ್ಲಿಕೆ ಬೀದರ್ ಜಿಲ್ಲೆಯ ಔರಾದ್ ಬಳಿಯ ತೆಗಂಪೂರದಲ್ಲಿ ಕೊಳವೆಬಾವಿ ಕೊರೆಯುವ ಯಂತ್ರ ಮತ್ತು ಕಾರ್ಮಿಕರು, ಸಿಎಂ ಸಚಿವಾಲಯದ ಪೋಸ್ಟರ್‌ನಿಂದ
  • ಕರ್ನಾಟಕ

ಔರಾದ್ ನೀರಿನ ಸಮಸ್ಯೆ: ಪತ್ರಿಕಾ ವರದಿ ಬೆನ್ನಲ್ಲೇ ಸಿಎಂ ಸಚಿವಾಲಯ ಕ್ರಮ, ಟ್ಯಾಂಕರ್ ಮತ್ತು 40 ಎಚ್‌ಪಿ ಮೋಟಾರ್ ವ್ಯವಸ್ಥೆ; ₹50 ಲಕ್ಷ ಪ್ರಸ್ತಾವನೆ ಸಲ್ಲಿಕೆ

November 26, 2026 7:17 PM

ನೀವು ತಪ್ಪಿಸಿಕೊಂಡಿರಬಹುದು

ಜಪಾನ್‌ನಲ್ಲಿ ಮಕಿನೊ ಅಧಿಕಾರಿಗಳೊಂದಿಗೆ ಮಾತುಕತೆ ವೇಳೆ ಕರ್ನಾಟಕ ನಿಯೋಗದ ಸದಸ್ಯರು, ಉಡುಗೊರೆ ವಿನಿಮಯ
  • ಕರ್ನಾಟಕ

ಕರ್ನಾಟಕದಲ್ಲಿ ಉದ್ಯಮ ವಿಸ್ತರಣೆ, ಸುಧಾರಿತ ಉತ್ಪಾದನೆಗೆ ಮಕಿನೊ ಆಸಕ್ತಿ: ಜಪಾನ್ ಮಾತುಕತೆ ಬಳಿಕ ಎಂ.ಬಿ. ಪಾಟೀಲ್

The Bengaluru Live November 26, 2026 9:35 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಹುಕ್ಕೇರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಲೋಕಾಯುಕ್ತ ಬಲೆಗೆ: ಶಿಕ್ಷಕರಿಂದ 15,000 ರೂ. ಲಂಚ ಸ್ವೀಕಾರ

The Bengaluru Live November 26, 2026 7:57 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಸಾಗರ ಸಹಾಯಕ ಆಯುಕ್ತರ ಆಪ್ತ ಸಹಾಯಕ ಲೋಕಾಯುಕ್ತ ಬಲೆಗೆ: 5 ಲಕ್ಷ ರೂ. ಲಂಚಕ್ಕೆ ಬೇಡಿಕೆ, ಫೋನ್‌ಪೇಯಲ್ಲಿ 2,000 ರೂ. ಸ್ವೀಕಾರ

The Bengaluru Live November 26, 2026 7:57 PM
ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ಉತ್ತರಹಳ್ಳಿ, ವಡ್ಡರಪಾಳ್ಯ, ದ್ವಾರಕಾನಗರ ಸೇರಿ ಹಲವೆಡೆ ನ.30ರಂದು ವಿದ್ಯುತ್ ವ್ಯತ್ಯಯ: ಬೆಸ್ಕಾಂ

The Bengaluru Live November 26, 2026 7:30 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕರ್ನಾಟಕದಲ್ಲಿ ಉದ್ಯಮ ವಿಸ್ತರಣೆ, ಸುಧಾರಿತ ಉತ್ಪಾದನೆಗೆ ಮಕಿನೊ ಆಸಕ್ತಿ: ಜಪಾನ್ ಮಾತುಕತೆ ಬಳಿಕ ಎಂ.ಬಿ. ಪಾಟೀಲ್
  • ಹುಕ್ಕೇರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಲೋಕಾಯುಕ್ತ ಬಲೆಗೆ: ಶಿಕ್ಷಕರಿಂದ 15,000 ರೂ. ಲಂಚ ಸ್ವೀಕಾರ
  • ಸಾಗರ ಸಹಾಯಕ ಆಯುಕ್ತರ ಆಪ್ತ ಸಹಾಯಕ ಲೋಕಾಯುಕ್ತ ಬಲೆಗೆ: 5 ಲಕ್ಷ ರೂ. ಲಂಚಕ್ಕೆ ಬೇಡಿಕೆ, ಫೋನ್‌ಪೇಯಲ್ಲಿ 2,000 ರೂ. ಸ್ವೀಕಾರ
  • ಉತ್ತರಹಳ್ಳಿ, ವಡ್ಡರಪಾಳ್ಯ, ದ್ವಾರಕಾನಗರ ಸೇರಿ ಹಲವೆಡೆ ನ.30ರಂದು ವಿದ್ಯುತ್ ವ್ಯತ್ಯಯ: ಬೆಸ್ಕಾಂ
©Copyright 2025 The Bengaluru Live All rights reserved. | MoreNews by AF themes.