Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • Shimoga | ಶಿವಮೊಗ್ಗ ಘಟನೆಯ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ
  • ಬೆಂಗಳೂರು ನಗರ

Shimoga | ಶಿವಮೊಗ್ಗ ಘಟನೆಯ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

Vighnesh Pawar October 4, 2023 4:15 PM 1 minute read
Shimoga | CT Ravi demands judicial inquiry into the Shimoga incident

Shimoga | CT Ravi demands judicial inquiry into the Shimoga incident

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಶಿವಮೊಗ್ಗ ಘಟನೆ ಹಿಂದೆ ದುರುದ್ದೇಶ ಇದ್ದಂತಿದೆ. ರಾಜ್ಯದ ಶಾಂತಿ ಹಾಳು ಮಾಡುವ ಉದ್ದೇಶ ಇದ್ದಂತಿದೆ. ಆದ್ದರಿಂದ ಈ ಘಟನೆಯ ನ್ಯಾಯಾಂಗ ತನಿಖೆ ಮಾಡುವಂತೆ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಒತ್ತಾಯಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿದರು. ಪುನೀತ್ ಕೆರೆಹಳ್ಳಿ ಮೇಲಿನ ಸುಳ್ಳು ಆರೋಪಕ್ಕೆ ಗೃಹ ಸಚಿವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ ಎಂದೂ ಆಗ್ರಹಿಸಿದರು.

ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ. ಶಿವಮೊಗ್ಗ, ಕೋಲಾರ ಘಟನೆಗಳ ಮೂಲಕ ಟೆಸ್ಟಿಂಗ್ ಡೋಸ್ ಕೊಟ್ಟಿದ್ದಾರೆ. ಈಗ ಪಿಕ್ಚರ್ ಬಾಕಿ ಹೈ ಎಂಬಂತೆ ಟ್ರೈಲರ್ ತೋರಿಸುವ ಕೆಲಸ ಮಾಡಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಶಿವಮೊಗ್ಗ ಅತಿ ಸೂಕ್ಷ್ಮ ಪ್ರದೇಶ. ಹರ್ಷನ ಹತ್ಯೆ ಆಗಿತ್ತು. ಕರ್ನಾಟಕವು 140 ದಿನಗಳಲ್ಲಿ ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾದುದೇ ಹೆಚ್ಚು. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹಾಕುತ್ತಿದ್ದೀರಿ. ಸಹಜ ಸಾವಿನ ಮಾಹಿತಿ ಇದ್ದರೂ ಪುನೀತ್ ಕೆರೆಹಳ್ಳಿ ಮೇಲೆ ಕೊಲೆ ಮೊಕದ್ದಮೆ ಹಾಕಿದ್ದೀರಿ. ವೇಶ್ಯಾವಾಟಿಕೆ ಮಾಡುತ್ತಿದ್ದ ಎಂದು ಸುಳ್ಳುವರದಿ ಕೊಟ್ಟಿದ್ದೀರಿ. ಪುನೀತ್ ಜೀವಕ್ಕೇನಾದರೂ ಆದರೆ ಈ ಪಾಪಿಷ್ಟ ಸರಕಾರವೇ ಹೊಣೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 140 ದಿನಗಳು ಕಳೆದಿವೆ. ಕೋಮುವಾದಿ ಶಕ್ತಿಗಳು ಸಾರ್ವಜನಿಕವಾಗಿ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಿದ್ದೇ ಈ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಬಹುಶಃ ಋಣ ತೀರಿಸುವ ದೃಷ್ಟಿಯಿಂದ ತಾಲಿಬಾನಿಗಳನ್ನು ಬೆಂಬಲಿಸುವ ಕೆಟ್ಟ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಈ ಸರಕಾರದ ನಡೆ ಅನುಮಾನಾಸ್ಪದ ಮತ್ತು ದುರುದ್ದೇಶದ ಹಿನ್ನೆಲೆಯಿಂದ ಕೂಡಿದೆ ಎಂದು ಟೀಕಿಸಿದರು.

ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಸಂದರ್ಭದಲ್ಲಿ ಬೆಳವಾವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಭಟ್ಕಳದಲ್ಲಿ ಹಿಂದೂಗಳ ಹೆಣ ಎತ್ತಲು ಕೂಡ ಜನ ಇರಬಾರದು ಎಂದು ಮುಸ್ಲಿಮರೊಬ್ಬರು ಬರಹ ಬರೆದಿದ್ದರು. ಬೆಳಗಾವಿಯಲ್ಲಿ ಜೈನಮುನಿಯ ಭೀಕರ ಹತ್ಯೆ ಆಗಿದೆ. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ನಡೆದಿದೆ. ಫಲಿತಾಂಶ ಬಂದ ಮರುದಿನವೇ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ ಎಂದು ವಿವರಿಸಿದರು.

ಧಾರವಾಡದಲ್ಲಿ ಚುನಾವಣಾ ವಿಜಯೋತ್ಸವದ ಸಂದರ್ಭದಲ್ಲಿ ಚೂರಿ ಇರಿತ, ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಿಂದೂಗಳ ಬೈಕಿಗೆ ಬೆಂಕಿ ಹಾಕಿದ್ದಾರೆ. ಹಾಸನದಲ್ಲಿ ಪಿಸ್ತೂಲ್ ಹಿಡಿದು ಓಡಾಡಿ ಭಯ ಹುಟ್ಟಿಸುವ ಕೆಲಸ ನಡೆದಿದೆ. ಸಕಲೇಶಪುರದಲ್ಲಿ ಪರವಾನಗಿ ಇಲ್ಲದ ಬಂದೂಕು ಇಟ್ಟುಕೊಂಡು ಹಸುವಿನ ತಲೆ ಸೀಳಿ ಹತ್ಯೆ ಮಾಡಿದ್ದಾರೆ. ಕಡೂರಿನಲ್ಲಿ ವಿಘ್ನೇಶ್ ಎಂಬ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ನಂಜನಗೂಡಿನಲ್ಲಿ ಚಾಕುವಿನಿಂದ ಇರಿದು ಪರಾರಿ, ಬಾಗಲಕೋಟೆ ನವನಗರದಲ್ಲಿ ಬೀದಿ ದೀಪ ಬಂದ್ ಮಾಡಿ ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆದಿದೆ. ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಆದರೆ, ಅವರ ತವರು ಜಿಲ್ಲೆಯಲ್ಲಿ ಮತಾಂಧರ ಅಟ್ಟಹಾಸ ಮೆರೆಯಲು ಅವಕಾಶ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಮೊದಲ ಅವಧಿಯ ಸಿಎಂ ಆಗಿದ್ದಾಗ ಟಿಪ್ಪುವಿನ ಓಲೈಕೆ, ಸರಕಾರದಿಂದ ಟಿಪ್ಪು ಜಯಂತಿ ಆರಂಭಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರ ಸ್ಪರ್ಧೆಯಲ್ಲಿ ಈಗ ಸರ್ವ ಜನಾಂಗದ ಶಾಂತಿಯ ತೋಟದ ಶಾಂತಿ ಹಾಳು ಮಾಡಲು ಒಬ್ಬ ಟಿಪ್ಪು ಸಾಕಾಗುವುದಿಲ್ಲ ಎಂದು ಟಿಪ್ಪು ಜೊತೆ ಔರಂಗಜೇಬನ ವಿಜೃಂಭಣೆಗೆ ಅವಕಾಶ ಕೊಡುತ್ತಿದ್ದಾರೆ. ಮತಾಂಧರ ಮೆರೆಸುವ ಕೆಲಸಕ್ಕೆ ಈ ಸರಕಾರ ಬೆನ್ನೆಲುಬಾಗಿ ನಿಂತಿದೆ. ಪೊಲೀಸರ ಮೇಲೆ ಕಲ್ಲೆಸೆತ ಆದಾಗ ಎಸ್ಪಿಯೇ ಓಡಿಬರಬೇಕಾದ ಸ್ಥಿತಿ ಬರುತ್ತದೆ. ಗೃಹ ಸಚಿವ ಪರಮೇಶ್ವರರವರು ಇದೆಲ್ಲ ಸಾಮಾನ್ಯ ಎಂದು ಲಘುವಾಗಿ ತಳ್ಳಿ ಹಾಕುತ್ತಾರೆ ಎಂದು ಟೀಕಿಸಿದರು.

ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ಹಲವು ಮನೆಗಳು ಮತ್ತು ನೂರಾರು ವಾಹನಗಳಿಗೆ ಬೆಂಕಿ ಹಾಕಿದ್ದರು. ಪೊಲೀಸ್ ಸ್ಟೇಷನ್ ಮೇಲೆ ಬೆಂಕಿ ಹಾಕಿದ್ದರು. ಅಂಥ ಗಂಭೀರ ಪ್ರಕರಣದ ಕೇಸು ವಾಪಸ್ ಪಡೆಯಲು ತನ್ವೀರ್ ಸೇಠ್ ಅವರು ಸರಕಾರಕ್ಕೆ ಪತ್ರ ಬರೆದಿದ್ದರು. ಆ ಸಾಲಿನಲ್ಲೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ದಾಳಿ ಸೇರಿ 12 ಪ್ರಕರಣಗಳಲ್ಲಿ ಆರೋಪಿಗಳಾಗಿರುವವರ ಕೇಸು ಹಿಂಪಡೆಯಲು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರು ಪತ್ರ ಬರೆಯತ್ತಾರೆ. ಮತಾಂಧತೆಗೆ ಈ ಸರಕಾರ ಕುಮ್ಮಕ್ಕು ಕೊಡುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ ಎಂದರು.

ಸನಾತನ ಧರ್ಮದ ಅವಹೇಳನ ಮಾಡುವವರು ಇಲ್ಲಿ ಗಲಭೆ ಹುಟ್ಟಿಸುವವರು ಎನಿಸುತ್ತಿಲ್ಲ. ಅವಹೇಳನ ಮಾಡುವವರ ಮುಂಚೂಣಿಯಲ್ಲಿ ಪ್ರಿಯಾಂಕ್ ಖರ್ಗೆ ಅವರೇ ನಿಂತುಕೊಳ್ಳುತ್ತಾರೆ. ಅವಹೇಳನ ಮಾಡಿ ಉದಯನಿಧಿ ಸ್ಟಾಲಿನ್ ಪರ ನಿಲ್ಲುತ್ತಾರೆ ಎಂದು ವಿವರಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರ ಋಣ ತೀರಿಸುವ ಮಾತನಾಡಿದ್ದಾರೆ. ರಾಜ್ಯದ ಋಣ ತೀರಿಸಬೇಕೆಂದು ಅವರು ಹೇಳಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಯ ಚಿತ್ರಣವನ್ನೂ ಜನರ ಮುಂದಿಟ್ಟಿಲ್ಲ. ಮುಸ್ಲಿಮರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಕೊಡುವ ಮಾತನಾಡುತ್ತಾರೆ. ನಿಮಗೆ ಮುಸಲ್ಮಾನರು ಮಾತ್ರ ಮತ ಹಾಕಿದ್ದಾರಾ? ಜಾತ್ಯತೀತತೆ ಎಂದರೆ ಮುಸಲ್ಮಾನರ ಓಲೈಕೆಯೇ? ಕೋಮುವಾದಿ ರಾಜಕಾರಣ ನಿಮ್ಮದಲ್ಲವೇ? ಎಂದು ಕೇಳಿದರು.

ಶಿವಮೊಗ್ಗ ಮತ್ತು ಕೋಲಾರದಲ್ಲಿ ಪ್ರಚೋದನಕಾರಿ ಬರಹ, ಪ್ರಚೋದನಕಾರಿ ಕಟೌಟ್‍ಗಳು, ಟಿಪ್ಪು ಖಡ್ಗ ಮೆರೆಸಿದ ಹಿನ್ನೆಲೆಯನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಕಾಫಿರರ ರಕ್ತಕ್ಕಾಗಿ ನನ್ನ ಖಡ್ಗ ತಹತಹಿಸುತ್ತಿದೆ ಎಂಬ ಬರೆಹ ಟಿಪ್ಪು ಖಡ್ಗದಲ್ಲಿದೆ. ಇಸ್ಲಾಮನ್ನು ನಂಬದಿರುವವರೆಲ್ಲರೂ ಕಾಫಿರರು. ಯಹೂದಿ, ಕ್ರಿಶ್ಚಿಯನ್, ಬೌದ್ಧ, ಸಿಕ್ಖ, ಪಾರ್ಸಿ, ಹಿಂದೂ- ಇವರೆಲ್ಲರೂ ಕಾಫಿರರು. ನಿಮ್ಮ ರಕ್ತ ಕುಡಿಯುವ ಮಾತು ಕೂಡ ಆ ಟಿಪ್ಪುವಿನ ಖಡ್ಗದ ಮೇಲಿನ ಬರಹ ಸೂಚಿಸುತ್ತದೆ ಎಂದು ಎಚ್ಚರಿಸಿದರು. ಅಂಥ ಖಡ್ಗ ಹಾಕಲು ಯಾಕೆ ಮತ್ತು ಹೇಗೆ ಅವಕಾಶ ಕೊಟ್ಟಿದ್ದೀರಿ? ಎಂದರಲ್ಲದೆ, ಉಡುಪಿಯಲ್ಲಿ ಭಗವಾಧ್ವಜ ಹಾಕಲು ಮತ್ತು ಬಂಟಿಂಗ್ಸ್ ಕಟ್ಟಿದಾಗ ತೆಗೆಸುತ್ತೀರಿ ಎಂದು ಆಕ್ಷೇಪಿಸಿದರು.

ಇಲ್ಲಿ ಟಿಪ್ಪುವಿನ ಖಡ್ಗ, ಔರಂಗಜೇಬನ ಫೋಟೊ ಹಾಕಲು ಯಾಕೆ ಅವಕಾಶ ಕೊಟ್ಟಿದ್ದೀರಿ. ಇತಿಹಾಸದಲ್ಲಿ ಔರಂಗಜೇಬ್ ಒಬ್ಬ ಮತಾಂಧನಲ್ಲವೇ? ಗುರು ತೇಜ್ ಬಹದ್ದೂರರÀನ್ನು ಹತ್ಯೆ ಮಾಡಿದ ಕ್ರೂರಿ ಯಾರು? ಕಾಶಿ ವಿಶ್ವನಾಥ ಮಂದಿರವನ್ನು ಧ್ವಂಸ ಮಾಡಿದ ವಿಧ್ವಂಸಕ ಯಾರು? ಮಥುರಾದ ಕೃಷ್ಣ ಮಂದಿರವನ್ನು ಮತ್ತೆ 3ನೇ ಬಾರಿ ಧ್ವಂಸ ಮಾಡಿದ ಕಿರಾತಕ ಯಾರು? ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ನಿಮ್ಮ ಔರಂಗಜೇಬ್ ಅಲ್ಲವೇ? ಅವನನ್ನು ಮೆರೆಸುವ ಉದ್ದೇಶ ಏನು? ಪೈಗಂಬರರ ಶಾಂತಿಯ ಸಂದೇಶ ಇದೇನಾ? ಎಂದರು.

ಮುಸ್ಲಿಮೇತರರ ಮೇಲೆ ಜಜಿಯ ತಲೆಗಂದಾಯ ಹೇರಿದ ಒಬ್ಬ ಪಾಪಿಯನ್ನು ಪ್ರಜಾಪ್ರಭುತ್ವದಲ್ಲಿ ಡಾ.ಅಂಬೇಡ್ಕರರು ಕೊಟ್ಟ ಸಂವಿಧಾನಕ್ಕೆ ಅಪಮಾನ ಮಾಡುವಂತೆ ಪ್ರತಿಷ್ಠಾಪಿಸಲು ಅವಕಾಶ ಕೊಟ್ಟಿದ್ದೀರಾ? ಇದಕ್ಕೆಲ್ಲ ಹೊಣೆ ಯಾರು? ನೀವೇ ಹೊಣೆ ಹೊರಬೇಕಲ್ಲವೇ? ಎಂದರಲ್ಲದೆ, ಭವಿಷ್ಯದಲ್ಲಿ ಅಫಜಲ್ ಗುರು, ಬಿನ್ ಲಾಡೆನ್, ಸದ್ದಾಂ ಹುಸೇನ್, ಮಹಮ್ಮದ್ ಆಲಿ ಜಿನ್ನಾನ ವೈಭವೀಕರಣ ನಡೆದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು.

ದೇಶ ಕಟ್ಟುವ ಕೆಲಸ ಮಾಡಿದ ಅಲ್ಪಸಂಖ್ಯಾತರು ಬಹಳ ಜನ ಇದ್ದಾರೆ. ಸ್ವಾತಂತ್ರ್ಯ ವೀರ ಅಶ್ಫಕುಲ್ಲ ಖಾನ್, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಫೋಟೊ ಹಾಕಿದ್ದರೆ ಸಂತಸ ಪಡುತ್ತಿದ್ದೆವು. ಆದರೆ, ಮತಾಂಧರ ಫೋಟೊ ಹಾಕಿದ್ದರ ಉದ್ದೇಶ ಏನು? ಭಾರತ ವಿಭಜನೆ ಮಾಡಿದ್ದರಿಂದ ನೀವು ಸಂತೃಪ್ತರಾಗಿಲ್ಲ; ಆಗುವುದೂ ಇಲ್ಲವೆಂದು ಡಾ.ಅಂಬೇಡ್ಕರರು ಹೇಳಿದ ಮಾತನ್ನು ಸತ್ಯ ಮಾಡಲು ಹೊರಟಿದ್ದೀರಾ? ಎಂದು ಕೇಳಿದರು.

ಔರಂಗಜೇಬ್, ಟಿಪ್ಪು ವೈಭವೀಕರಣದ ಉದ್ದೇಶ ಭಾರತದಲ್ಲಿ ಮತ್ತೊಂದು ವಿಭಜನೆಯ ಸಂಚಿಗೆ ಪ್ರೋತ್ಸಾಹವಲ್ಲವೇ? ಬಾಲ ಬಿಚ್ಚಿದರೆ ಬಾಲ ಕಟ್ ಮಾಡುವುದಾಗಿ ಮರಿ ಖರ್ಗೆಯವರು ಹೇಳುತ್ತಿದ್ದರು. ಬಾಲ ಕಟ್ ಮಾಡುವ ಪೌರುಷ ಎಲ್ಲಿ ಹೋಯಿತು? ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ನಿಮ್ಮ ಪೌರುಷವೇ? ನೀವೆಲ್ಲಿ ಅಡಗಿದ್ದೀರಿ? ಎಂದು ಕೇಳಿದರು.

ಹಿಂದೂಗಳ ಮನೆಗೆ ನುಗ್ಗಿ ಹಲ್ಲೆ ಮಾಡಿದರೆ ಅದೊಂದು ಸಣ್ಣ ಘಟನೆಯಾಗಿ ಗೃಹ ಸಚಿವರಿಗೆ ಕಾಣುತ್ತದೆ. ಬಹಳ ವರ್ಷಗಳ ರಾಜಕೀಯ ಅನುಭವ ಇರುವ ಡಾ. ಪರಮೇಶ್ವರರನ್ನು ಯಾವ ದುರ್ಬಲತೆ ಕಾಡುತ್ತಿದೆ? ಎಂದು ಕೇಳಿದರು. 35 ಡಿಎಸ್ಪಿಗಳು, 138 ಇನ್‍ಸ್ಪೆಕ್ಟರ್‍ಗಳನ್ನು ವರ್ಗಾವಣೆ ಮಾಡುವ ಮೂಲಕ ನಾನೂ ಸಕ್ರಿಯ ಎಂದು ತೋರಿಸುವ ಕೆಲಸ ಮಾಡಿದ್ದಿರಿ. ಐಸಿಸ್‍ನವರು ಇದನ್ನೊಂದು ಲಾಂಚಿಂಗ್ ಪ್ಯಾಡ್ ಮಾಡಲು ಕರ್ನಾಟಕ- ಕೇರಳವನ್ನು ಉಪಯೋಗಿಸುತ್ತಿದ್ದಾರೆ ಎಂದು ಎನ್‍ಐಎ ಬಂಧಿತ ಉಗ್ರರಿಂದ ಸಿಕ್ಕಿದ ಮಾಹಿತಿ ನಿಮಗೆ ತಿಳಿದಿಲ್ಲವೇ? ಎಂದು ಪ್ರಶ್ನೆ ಮಾಡಿದರು.

ಮಂಗಳೂರಲ್ಲಿ ಬ್ಲಾಸ್ಟ್ ಆದ ಕುಕ್ಕರನ್ನು ತೀರ್ಥಹಳ್ಳಿಯಲ್ಲೇ ತಯಾರಿಸಿದ್ದು ನಿಮಗೆ ತಿಳಿದಿಲ್ಲವೇ? ಘನತೆವೆತ್ತ ಡಿಸಿಎಂ ಅವತ್ತು ‘ದೆ ಆರ್ ಅವರ್ ಬ್ರದರ್ಸ್’ ಎಂದಿದ್ದರಲ್ಲವೇ? ಬಾಂಬ್ ಇಡುವವರು, ಔರಂಗಜೇಬನನ್ನು ಓಲೈಸುವವರು, ಮತಾಂಧರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಬೆಂಕಿ ಹಾಕಿದವರು ನಿಮ್ಮ ಬ್ರದರ್ಸಾ ಎಂದು ಕೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಅ. ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

About the Author

Vighnesh Pawar

Subscriber

View All Posts

Post navigation

Previous: Drought in Karnataka | ಅಕ್ಟೋಬರ್ 5 ರಿಂದ ರಾಜ್ಯದಲ್ಲಿ ಕೇಂದ್ರದ ಬರ ಅಧ್ಯಯನ
Next: Karnataka DCM DK Shivakumar | ನನಗೆ ಜಾತಿ ರಾಜಕಾರಣ ಗೊತ್ತಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

Related Stories

ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

The Bengaluru Live November 24, 2026 10:00 PM
ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

The Bengaluru Live November 24, 2026 9:49 PM
ಆರ್‌ಎಂವಿ 2ನೇ ಹಂತದಲ್ಲಿ ಸೀಲ್ ಮಾಡಿದ ವಾಣಿಜ್ಯ ಸಂಸ್ಥೆಯ ಗೇಟ್ ಮೇಲೆ ಜಾರಿ ನೋಟಿಸ್
  • ಬೆಂಗಳೂರು ನಗರ

ಆರ್‌ಎಂವಿ 2ನೇ ಹಂತದಲ್ಲಿ ವಸತಿ ಕಟ್ಟಡಗಳಲ್ಲಿ ನಡೆಯುತ್ತಿದ್ದ 15 ವಾಣಿಜ್ಯ ಸಂಸ್ಥೆಗಳಿಗೆ ಉತ್ತರ ನಗರ ಪಾಲಿಕೆಯಿಂದ ಸೀಲ್

The Bengaluru Live November 24, 2026 9:08 PM

Latest Post

ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರೊಂದಿಗೆ ಹಸ್ತಲಾಘವ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ

November 25, 2026 10:58 AM
ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ ಮಳೆಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಾಹನ ಹಾಗೂ ಕೊಡೆ ಹಿಡಿದ ಮಹಿಳೆ; ಸಾಂದರ್ಭಿಕ ಸಂಗ್ರಹ ಚಿತ್ರ
  • ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ

November 25, 2026 10:01 AM
ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

November 24, 2026 10:00 PM
ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

November 24, 2026 9:49 PM
ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್ ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

November 24, 2026 9:28 PM
ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ ಜಪಾನ್ ಪ್ರವಾಸದ ವೇಳೆ ರೈಲಿನಲ್ಲಿ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ

November 24, 2026 9:09 PM

ನೀವು ತಪ್ಪಿಸಿಕೊಂಡಿರಬಹುದು

ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರೊಂದಿಗೆ ಹಸ್ತಲಾಘವ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ

The Bengaluru Live November 25, 2026 10:58 AM
ಮಳೆಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಾಹನ ಹಾಗೂ ಕೊಡೆ ಹಿಡಿದ ಮಹಿಳೆ; ಸಾಂದರ್ಭಿಕ ಸಂಗ್ರಹ ಚಿತ್ರ
  • ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ

The Bengaluru Live November 25, 2026 10:01 AM
ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

The Bengaluru Live November 24, 2026 10:00 PM
ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

The Bengaluru Live November 24, 2026 9:49 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ
  • ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ
  • ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ
  • ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ
©Copyright 2025 The Bengaluru Live All rights reserved. | MoreNews by AF themes.