Home ಕರ್ನಾಟಕ Madikeri | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೆರೆಯೊಂದರಲ್ಲಿ ಹುಲಿ ಮೃತದೇಹ ಪತ್ತೆ

Madikeri | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೆರೆಯೊಂದರಲ್ಲಿ ಹುಲಿ ಮೃತದೇಹ ಪತ್ತೆ

17
0

ಮಡಿಕೇರಿ : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ಗಣಗೂರು ಎಂಬಲ್ಲಿನ ಕೆರೆಯೊಂದರಲ್ಲಿ ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. 6 ರಿಂದ 7 ವರ್ಷದ ಹುಲಿಯೊಂದು, ಮತ್ತೊಂದು ವನ್ಯಪ್ರಾಣಿಯೊಂದಿಗಿನ ಕಾದಾಟದಲ್ಲಿ ಸಾವನ್ನಪ್ಪಿರಬೇಕೆಂದು ಊಹಿಸಲಾಗಿದೆ.

ಘಟನಾ ಸ್ಥಳಕ್ಕೆ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್, ಹುಣಸೂರು ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್ ಡಿ.ಎಸ್., ಪಶು ವೈದ್ಯಾಧಿಕಾರಿಗಳಾದ ರಮೇಶ್, ಬಾಳೆಲೆಯ ಪಶು ವೈದ್ಯಾಧಿಕಾರಿ ಭವಿಷ್ಯ ಕುಮಾರ್, ರಾಷ್ಟ್ರೀಯ ಹುಲಿ ಪ್ರಾಧಿಕಾರದ ನಾಮ ನಿರ್ದೇಶನ ಸದಸ್ಯರಾದ ಬೋಸ್ ಮಾದಪ್ಪ, ಮುಖ್ಯ ವನ್ಯಜೀವಿ ಪರಿಪಾಲಕರ ನಾಮ ನಿರ್ದೇಶಿತರಾದ ತಮ್ಮಯ್ಯ, ಗ್ರಾಪಂ ಸದಸ್ಯರಾದ ನವೀನ್, ಚಲಯ ಅರಣ್ಯಾಧಿಕಾರಿ ದೇವರಾಜು ಡಿ. ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

LEAVE A REPLY

Please enter your comment!
Please enter your name here