Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ‘ರಾಜಕೀಯ ಉದ್ದೇಶದ ಪ್ರತಿಭಟನೆಗಳಿಗೆ ಅರ್ಥವಿಲ್ಲ’
  • ಬೆಂಗಳೂರು ನಗರ

‘ರಾಜಕೀಯ ಉದ್ದೇಶದ ಪ್ರತಿಭಟನೆಗಳಿಗೆ ಅರ್ಥವಿಲ್ಲ’

The Bengaluru Live March 13, 2022 6:30 PM 1 minute read
Ulterior motive behind demonstrations- Dr.C.N.Ashwathnarayan

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಶ್ವತ್ಥನಗರದ ಪೂಜಾರಿ ಲೇಔಟ್ ನಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪಾದಯಾತ್ರೆ ಮಾಡಿ ಜನರ ಅಹವಾಲು ಆಲಿಸಿದರು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಮಲ್ಲೇಶ್ವರಂ ಕ್ಷೇತ್ರದಲ್ಲಿ ನಡೆಯುತ್ತಿರುವ ದೂರದೃಷ್ಟಿಯ ಅಭಿವೃದ್ಧಿ ಕಾಮಗಾರಿಗಳ ವಿರುದ್ಧ ಪ್ರತಿಭಟಿಸುತ್ತಿರುವ ಶಕ್ತಿಗಳ ಹಿಂದೆ ರಾಜಕೀಯ ದುರುದ್ದೇಶವಿದೆ. ಇದಕ್ಕೆ ಕ್ಷೇತ್ರದ ಜನರು ಸೊಪ್ಪು ಹಾಕಲ್ಲ’ ಎಂದು ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರಂನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಎಂದು ಭಾನುವಾರ ಕೆಲವರು ನಡೆಸಿರುವ ಪ್ರತಿಭಟನೆಯ ಸಂಬಂಧ ಅವರು ಹೀಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯ ಮಾಡಬೇಕೆನ್ನುವವರು ಪಕ್ಷದ ಬ್ಯಾನರ್ ಇಟ್ಟುಕೊಂಡೇ ಪ್ರತಿಭಟನೆ ಮಾಡಬಹುದಿತ್ತು. ಪಕ್ಷದ ಬಾವುಟವನ್ಜು ಪಕ್ಕಕ್ಕೆ ಸರಿಸಿ, ಸ್ಥಳೀಯ ನಿವಾಸಿಗಳ ಹೆಸರಿನಲ್ಲಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

Also Read: Malleswaram demonstrations ‘motivated’: Karnataka Minister

ಮಲ್ಲೇಶ್ವರಂ ಕ್ಷೇತ್ರ 15 ವರ್ಷಗಳ ಹಿಂದೆ ಹೇಗಿತ್ತು? ಈಗ ಹೇಗಾಗಿದೆ ಎನ್ನುವುದನ್ನು ಇತಿಹಾಸದ ಪುಟಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ಕುಡಿಯುವ ನೀರಿಗೆ ಬರ ಇತ್ತು, ಒಳಚರಂಡಿ ವ್ಯವಸ್ಥೆ ಹದಗೆಟ್ಟಿತ್ತು. ಇದ್ದ ಮೈದಾನಗಳು ಒಂದು ರೀತಿ ಡ್ರೈವಿಂಗ್ ಶಾಲೆಗಳಾಗಿದ್ದವು. ತಿಂಗಳುಗಟ್ಟಲೇ ವಸ್ತು ಪ್ರದರ್ಶನಗಳು ನಡೆಯುತ್ತಿದ್ದ ಮೈದಾನಗಳು ವರ್ಷದಲ್ಲಿ ಕೆಲ ದಿನ ಕೂಡ ಮಕ್ಕಳ ಆಟಕ್ಕೆ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ವಾಸ್ತವ ತಿಳಿಯದೆ ರಾಜಕೀಯ ದುರುದ್ದೇಶದ ಇಂತಹ ಪ್ರತಿಭಟನೆಗಳು ಜನ ವಿರೋಧಿಯಾಗಿವೆ’ ಎಂದು ಅವರು ಟೀಕಿಸಿದ್ದಾರೆ.

ನನ್ನ ಜನತೆಗೆ ಸಂಪೂರ್ಣ ಸೌಲಭ್ಯ ಕಲ್ಪಿಸುವ ಜತೆ ಅವರ ಸುರಕ್ಷತೆಯೇ ನಮ್ಮ ಆದ್ಯತೆ.

ಕ್ಷೇತ್ರದ ನಿವಾಸಿಗಳ ಅಗತ್ಯ ಸೌಲಭ್ಯಗಳ ಪರಿಶೀಲನೆಯ ಪಾದಯಾತ್ರೆಯ ಮುಂದುವರಿದ ಭಾಗವಾಗಿ ನಮ್ಮ ಮಲ್ಲೇಶ್ವರದ ಅಶ್ವಥ್ ನಗರಕ್ಕೆ ಭೇಟಿ ನೀಡಿ ಜನತೆಯ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವ ಭರವಸೆ ನೀಡಲಾಯಿತು.

ನಮ್ಮ ಮಲ್ಲೇಶ್ವರ, ನಮ್ಮ ಹೆಮ್ಮೆ. pic.twitter.com/wHIDbTppve

— Dr. Ashwathnarayan C. N. (@drashwathcn) March 13, 2022

ಕ್ಷೇತ್ರದಲ್ಲಿ ಒಳಚರಂಡಿ ಕೊಳವೆ 60-70 ವರ್ಷಗಳಷ್ಟು ಹಳೆಯದಾಗಿದ್ದು ಶಿಥಿಲವಾಗಿದ್ದವು. ಜತೆಗೆ, ಇಲ್ಲಿನ ಮ್ಯಾನ್ ಹೋಲುಗಳು ಕೂಡ ತೀರಾ ಹಳೆಯದಾಗಿದ್ದು, ಸರಾಗವಾಗಿ ತ್ಯಾಜ್ಯ ನೀರು ಹರಿದು ಹೋಗುತ್ತಿರಲಿಲ್ಲ. ಈಗ ಇವೆಲ್ಲವನ್ನೂ ಬದಲಿಸಿ, ಹೊಸ ಕೊಳವೆ ಮತ್ತು ಪ್ರೀಕಾಸ್ಟ್ ಮ್ಯಾನ್-ಹೋಲುಗಳನ್ನು ಇಡೀ ಕ್ಷೇತ್ರದಲ್ಲಿ ಅಳವಡಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಬೇಕೆಂದರೆ ರಸ್ತೆ ಅಗೆಯುವುದು ಅನಿವಾರ್ಯವಾಗುತ್ತದೆ. ಆದರೆ, ಕ್ಷೇತ್ರದಲ್ಲಿ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಕೂಡಲೇ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ಸ್ಪಷ್ಟನೆ ಕೊಟ್ಟಿದ್ದಾರೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸ್ಯಾಂಕಿ ಕೆರೆಯನ್ನು ವಾಯುವಿಹಾರಿಗಳ ಪಾಲಿಗೆ ಅತ್ಯುತ್ತಮ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇವೆಲ್ಲ ಚಟುವಟಿಕೆಗಳನ್ನು ಸ್ಯಾಂಕಿ ಟ್ಯಾಂಕ್ ವಾಯುವಿಹಾರಿಗಳ ಸಂಘವನ್ನು ವಿಶ್ವಾಸಕ್ಕೆ ತೆಗೆದು ಕೊಂಡೇ ಮಾಡಲಾಗುತ್ತಿದ್ದು, ಒಂದು ತಿಂಗಳಲ್ಲಿ ಬಹುತೇಕ ಕಾಮಗಾರಿ ಪೂರ್ಣ ಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: 15 ದಿನಗಳಿಗೊಮ್ಮೆ ಗಿಡ ನೆಡುವ ಅಭ್ಯಾಸ ನಮ್ಮದಾಗಬೇಕು : ಎಂ ಕೃಷ್ಣಪ್ಪ
Next: BJP: 2023 ರ ಚುನಾವಣೆಯಲ್ಲಿ ಬಿಜೆಪಿ ಶಕ್ತಿಯ ಮೇಲೆ ಬಹುಮತ ದೊರೆಯುವ ವಿಶ್ವಾಸ — ಸಿಎಂ ಬಸವರಾಜ ಬೊಮ್ಮಾಯಿ

Related Stories

ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್ ಮತ್ತು ಕಡತಗಳೊಂದಿಗೆ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು

The Bengaluru Live November 18, 2026 9:29 PM
ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

The Bengaluru Live November 18, 2026 9:08 PM
ಬೆಂಗಳೂರು ಟೆಕ್ ಸಮಿಟ್ ಪ್ರದರ್ಶನ ಸಭಾಂಗಣದಲ್ಲಿ ಎರಡು ಬಿಳಿ ಕೀಬೋರ್ಡ್‌ಗಳನ್ನು ಹಿಡಿದು ಕುಳಿತಿರುವ ವ್ಯಕ್ತಿ
  • ಕರ್ನಾಟಕ
  • ಬೆಂಗಳೂರು ನಗರ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

The Bengaluru Live November 18, 2026 9:00 PM

Latest Post

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್ ಕನ್ನಡ ರಾಜ್ಯೋತ್ಸವ ಬ್ಯಾನರ್ ಮುಂದೆ ವೇದಿಕೆಯಲ್ಲಿ ಹಳದಿ ಮತ್ತು ಕೆಂಪು ಉಡುಪಿನ ಮಕ್ಕಳು ಮಾನವ ಗೋಪುರ ರಚಿಸಿರುವುದು

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್

November 20, 2026 12:34 AM
ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ ರಾಜ್ಯದಲ್ಲಿ ಹೊಸ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆ ಎಂಬ ವಿಷಯದ ಕರ್ನಾಟಕ ಸರ್ಕಾರದ ಆದೇಶದ ಮೊದಲ ಪುಟ

ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ

November 19, 2026 11:37 PM
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್ ಶೈಕ್ಷಣಿಕ ಸಾರಥ್ಯ ಬ್ಯಾನರ್ ಅಡಿ ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್

November 19, 2026 9:36 PM
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ

November 19, 2026 9:15 PM
ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51 ಬ್ಯಾನರ್‌ಗಳಿರುವ ದೊಡ್ಡ ಪ್ರದರ್ಶನ ಸಭಾಂಗಣದಲ್ಲಿ ಸೋಫಾ ಮತ್ತು ಕುರ್ಚಿಗಳ ಮೇಲೆ ಕುಳಿತಿರುವ ಪ್ರತಿನಿಧಿಗಳ ಸಾಲುಗಳು

ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51

November 19, 2026 8:55 PM
ಬೆಂಗಳೂರಿನ 88 ರಸ್ತೆಗಳ ವೈಟ್ ಟಾಪಿಂಗ್‌ಗೆ 4ನೇ ಹಂತದಲ್ಲಿ ₹2,321 ಕೋಟಿ; ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರ ಒಆರ್‌ಆರ್‌ಗೆ ₹487 ಕೋಟಿ ಅನುಮೋದನೆ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ವೇಳೆ ನಿರ್ಮಾಣ ಹಂತದ ರಸ್ತೆಯ ಮೇಲೆ ನಿಂತಿರುವ ಅಧಿಕಾರಿಗಳು
  • Uncategorized

ಬೆಂಗಳೂರಿನ 88 ರಸ್ತೆಗಳ ವೈಟ್ ಟಾಪಿಂಗ್‌ಗೆ 4ನೇ ಹಂತದಲ್ಲಿ ₹2,321 ಕೋಟಿ; ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರ ಒಆರ್‌ಆರ್‌ಗೆ ₹487 ಕೋಟಿ ಅನುಮೋದನೆ

November 19, 2026 8:37 PM

ನೀವು ತಪ್ಪಿಸಿಕೊಂಡಿರಬಹುದು

ಕನ್ನಡ ರಾಜ್ಯೋತ್ಸವ ಬ್ಯಾನರ್ ಮುಂದೆ ವೇದಿಕೆಯಲ್ಲಿ ಹಳದಿ ಮತ್ತು ಕೆಂಪು ಉಡುಪಿನ ಮಕ್ಕಳು ಮಾನವ ಗೋಪುರ ರಚಿಸಿರುವುದು

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್

The Bengaluru Live November 20, 2026 12:34 AM
ರಾಜ್ಯದಲ್ಲಿ ಹೊಸ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆ ಎಂಬ ವಿಷಯದ ಕರ್ನಾಟಕ ಸರ್ಕಾರದ ಆದೇಶದ ಮೊದಲ ಪುಟ

ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ

The Bengaluru Live November 19, 2026 11:37 PM
ಶೈಕ್ಷಣಿಕ ಸಾರಥ್ಯ ಬ್ಯಾನರ್ ಅಡಿ ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್

The Bengaluru Live November 19, 2026 9:36 PM
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ

The Bengaluru Live November 19, 2026 9:15 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್
  • ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್
  • ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ
©Copyright 2025 The Bengaluru Live All rights reserved. | MoreNews by AF themes.