Home ರಾಜಕೀಯ ಗುರುವಾರಕ್ಕೆ ಚಳಿಗಾಲದ ಅಧಿವೇಶನ ಮೊಟಕು

ಗುರುವಾರಕ್ಕೆ ಚಳಿಗಾಲದ ಅಧಿವೇಶನ ಮೊಟಕು

5
0
bengaluru

ಕಲಾಪ‌ ಸಲಹಾ ಸಮಿತಿ ತೀರ್ಮಾನ

ಬೆಂಗಳೂರು:

ಚಳಿಗಾಲದ ಅಧಿವೇಶನವನ್ನು ಗುರುವಾರಕ್ಕೆ ಮೊಟಕುಗೊಳಿಸಲು ಕಲಾ ಸಲಹಾ‌ ಸಮಿತಿ ತೀರ್ಮಾನಿಸಿದೆ.

ಸ್ಪೀಕರ್ ನೇತೃತ್ವದಲ್ಲಿ ನಡೆದ ಕಲಾಪ‌ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆ ಅಧಿವೇಶನವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.ಈ ಮುಂಚೆ ಡಿ15ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಚುನಾವಣೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸದನ ಮೊಟಕುಗೊಳಿಸಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ,ಗುರುವಾರ ಅಧಿವೇಶನ ಅಂತ್ಯಗೊಳಿಸಲು ತೀರ್ಮಾನ ಮಾಡಿ ದ್ದೇವೆ.ಒಂದು ದೇಶ ಒಂದು ಚುನಾವಣೆ ಕುರಿತು ಮುಂದಿನ ಸದನದಲ್ಲಿ ಚರ್ಚೆಗೆ ತೀರ್ಮಾನ ಮಾಡಲಾಗಿದೆ ಎಂದರು.

ಹೀಗಾಗಿ ಗೋ ಹತ್ಯೆ ನಿಷೇಧ ಕಾನೂನು ಜಾರಿ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸುವುದು ಅನುಮಾನವಾಗಿದೆ.ಈಗಾಗಲೇ ಸಂಪುಟ ಸಭೆ ಯಲ್ಲಿ ನಿರ್ಧಾರವಾಗಿದೆ.ಇನ್ನೊಮ್ಮೆ ಸ್ಕ್ರೂಟಿನಿ‌ ಕಮಿಟಿ ಮುಂದೆ ಚರ್ಚೆ ನಡೆಸಿ,ಅಲ್ಲಿಂದ ಚರ್ಚೆ ಮಾಡಿ ನೇರವಾಗಿ ಸದನದಲ್ಲಿ ಮಂಡಿಸಬಹು ದಾಗಿದೆ ಎಂದರು.ಆಮೂಲಕ ಈ ಭಾರೀಯ ವಿಧಾನ ಸಭೆ ಕಾಟಾಚಾರಕ್ಕೆ,ಕೆಲವು ತುರ್ತು ವಿಧೇಯಕಗಳನ್ನು ಪಾಸ್ ಮಾಡಿಕೊಳ್ಳುವ ಉದ್ದೇಶಕ್ಕಷ್ಟೇ ಸೀಮಿತವಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here