Home ಸಿನಿಮಾ Yuvarathnaa: ಮುಂಗಡ ಟಿಕೆಟ್ ಬುಕ್ಕಿಂಗ್ ಶುರು

Yuvarathnaa: ಮುಂಗಡ ಟಿಕೆಟ್ ಬುಕ್ಕಿಂಗ್ ಶುರು

48
0

ಬೆಂಗಳೂರು:

ಕೊರೊನಾ, ಲಾಕ್ಡೌನ್ ಮುಂತಾದ ವಿಘ್ನಗಳನ್ನು ಕಳೆದುಕೊಂಡು ಬಹುದಿನಗಳ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಏ.1ಕ್ಕಾಗಿ ಕಾಯುತ್ತಿದ್ದಾರೆ. ಅಂದು ಬಹುನಿರೀಕ್ಷಿತ ಯುವರತ್ನ ಸಿನಿಮಾ ಬಿಡುಗಡೆ ಆಗಲಿದೆ.

ಬಿಡುಗಡೆ ಆಗುವುದಕ್ಕೂ ನಾಲ್ಕು ದಿನ ಮುನ್ನವೇ ಯುವರತ್ನನ ಅಬ್ಬರ ಶುರು ಆಗಿದೆ. ಮಾ.28ರ ಬೆಳಗ್ಗೆಯೇ ಆನ್ಲೈನ್ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಶುರು ಆಗಿದೆ.

ರಾಜ್ಯದ ಅನೇಕ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಯುವರತ್ನನ ಸ್ವಾಗತಕ್ಕೆ ಅದ್ದೂರಿಯಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ರಾಜಕುಮಾರ ಬಳಿಕ ಪುನೀತ್ ಜೊತೆ ಅವರು ಎರಡನೇ ಬಾರಿ ಕೈ ಜೋಡಿಸಿರುವುದರಿಂದ ಈ ಚಿತ್ರದ ಮೇಲೆ ಹೈಪ್ ಸೃಷ್ಟಿ ಆಗಿದೆ.

ಬಹು ವರ್ಷಗಳ ಬಳಿಕ ಪುನೀತ್ ರಾಜ್ಕುಮಾರ್ ಅವರು ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರಕ್ಕೆ ಬೇರೆ ಬೇರೆ ಶೇಡ್ಗಳು ಇವೆ ಎಂಬುದು ಕೂಡ ಟ್ರೇಲರ್ ಮೂಲಕ ಗೊತ್ತಾಗಿದೆ.

LEAVE A REPLY

Please enter your comment!
Please enter your name here