Home Uncategorized ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆಯಂತೆ! ಬಿಜೆಪಿ ವಿರುದ್ಧ ಟ್ವೀಟ್ ದಾಳಿ ಮುಂದುವರೆಸಿದ ಕಾಂಗ್ರೆಸ್

ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆಯಂತೆ! ಬಿಜೆಪಿ ವಿರುದ್ಧ ಟ್ವೀಟ್ ದಾಳಿ ಮುಂದುವರೆಸಿದ ಕಾಂಗ್ರೆಸ್

12
0
bengaluru

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಯಾತ್ರೆಗಳ ಮೂಲಕ ಜನರನ್ನು ತಲುಪುವ ಪ್ರಯತ್ನಗಳನ್ನು ಮಾಡುತ್ತಿವೆ. ಆದ್ರೆ ಬಿಜೆಪಿ ನಾಯಕರು ರೌಡಿಶೀಟರ್​ಗಳೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡ ವಿಚಾರ ಭಾರೀ ಚರ್ಚೆಗೆ ಎಡೆ ಮಾಡಿದೆ. ಇದೇ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಬಿಜೆಪಿ ಕಾಂಗ್ರೆಸ್ ನಡುವೆ ಕೆಸರೆರೆಚಾಟ ನಡೆಯುತ್ತಿದೆ. ಇಂದು ಕೂಡ ಕಾಂಗ್ರೆಸ್ ಈ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.

ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ

ಮುಂಬರುವ ಚುನಾವಣೆಗೆ ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ. ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ. ಬಿಜೆಪಿ ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ? ಉದ್ಘಾಟನೆಗೆ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ? ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಆಶಯಗಳನ್ನು ಮುಗಿಸಲೆಂದೇ ಬಿಜೆಪಿ ರೌಡಿ ಮೋರ್ಚಾ ಕಟ್ಟುತ್ತಿದೆ. ಸಾಂವಿಧಾನಿಕ ಆಶಯದ ಮಾದರಿಯಲ್ಲಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಬಿಜೆಪಿಯ ರೌಡಿ ಮೋರ್ಚಾ ಪಡೆ ಮುಂದಾಗಿದೆ. ಇಂತಹ ಹಲ್ಲೆಗಳನ್ನು ಹೆಚ್ಚಿಸಲೆಂದೇ ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ?

bengaluru

ರೌಡಿಗಳನ್ನು ರೌಡಿಗಳೆನ್ನಬೇಡಿ. ಇದು ಮಾಜಿ ರೌಡಿ ಶೀಟರ್ ಸಿಟಿ ರವಿ ಫಾರ್ಮಾನು. ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ, ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ. “ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ರೌಡಿಗಳನ್ನು ರೌಡಿಗಳೆನ್ನಬೇಡಿ – ಇದು ಮಾಜಿ ರೌಡಿ ಶೀಟರ್ @CTRavi_BJP ಫಾರ್ಮಾನು!

ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ, ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ!

“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು
ಬಿಜೆಪಿಯ ಹೊಸ ದ್ಯೇಯವಾಕ್ಯ. pic.twitter.com/oFGAfPyOvT

— Karnataka Congress (@INCKarnataka) December 4, 2022

ಪರೋಡಿಗಳಿಂದ ರೌಡಿಗಳ ಸಮರ್ಥನೆ

ಬಿಜೆಪಿ ಸೇರಿದರೆ ಸಮಾಜಘಾತುಕರಿಗೂ ಸಮಾಜ ಸೇವಕರ ಬಿರುದು ನೀಡಲಾಗುತ್ತದೆ ಎಂಬುದಕ್ಕೆ ಸಂಸದ ಪ್ರತಾಪ್ ಸಿಂಹ ಅವರ ರೌಡಿಗಳ ಪರ ಸಮರ್ಥನೆಯೇ ಸಾಕ್ಷಿ. ಕೊಲೆ, ಸುಲಿಗೆ, ದರೋಡೆ ಮಾಡಿದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಬಿಜೆಪಿ ನಿರ್ಲಜ್ಜತನದ ಪರಮಾವಧಿಯನ್ನು ತಲುಪಿದೆ. ಬಿಜೆಪಿಯ ಅಸಲಿ ಸಂಸ್ಕೃತಿ ಬೆತ್ತಲಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಬಿಜೆಪಿ ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಳ್ಳಲಿದೆ

ಇನ್ನು ಮತ್ತೊಂದೆಡೆ ಬಿಜೆಪಿಗೆ ರೌಡಿ ಶೀಟರ್‌ಗಳ ಸೇರ್ಪಡೆ ಆರೋಪ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಡಾ ಎಚ್​ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಳ್ಳಲಿದೆ ಎಂದು ಟ್ವೀಟ್ ಮೂಲಕ ಗಂಭೀರ ಅರೋಪ ಮಾಡಿದ್ದಾರೆ.

ಬಿಜೆಪಿ ಏನೇನೂ ಸಮರ್ಥನೆ ನೀಡಿ 30 – 40 ಕೊಲೆ ಮಾಡಿರುವ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಭಯೋತ್ಪಾದಕರನ್ನು ಪಕ್ಷಕ್ಕೆ ಸೇರಿಸಿಕೊಂಡು ದೇಶಪ್ರೇಮಿಗಳು ಅನ್ನಬಹುದು. ಸಿ.ಟಿ. ರವಿ ಪದೇ ಪದೇ ಇಸ್ಲಾಂಬಾದ್‌ನಲ್ಲಿ ನಮ್ಮ ಧ್ವಜ ಹಾರಿಸುತ್ತೇವೆ ಅನ್ನುತ್ತಾರೆ. ಇದೆಲ್ಲಾ ನೋಡಿದರೆ ಭಯೋತ್ಪಾದಕರನ್ನು ಸೇರಿಸಿಕೊಳ್ಳೋದು ಖಚಿತ ಎಂದು ಟ್ವೀಟ್ ಮಾಡಿದ್ದಾರೆ.

bengaluru

LEAVE A REPLY

Please enter your comment!
Please enter your name here