Home Uncategorized ಬೆಂಗಳೂರು: ಮದುವೆಗೆ ನಿರಾಕರಿಸಿದ ವಿಧವೆಗೆ ಚೂರಿ ಇರಿದ ಆರೋಪಿ, ಬಂಧನ

ಬೆಂಗಳೂರು: ಮದುವೆಗೆ ನಿರಾಕರಿಸಿದ ವಿಧವೆಗೆ ಚೂರಿ ಇರಿದ ಆರೋಪಿ, ಬಂಧನ

15
0
bengaluru

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ 31 ವರ್ಷದ ವಿಧವೆಯೊಬ್ಬಳಿಗೆ ಚಾಕುವಿನಿಂದ ಇರಿದಿರುವ ಘಟನೆಯೊಂದು ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಟದಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ 31 ವರ್ಷದ ವಿಧವೆಯೊಬ್ಬಳಿಗೆ ಚಾಕುವಿನಿಂದ ಇರಿದಿರುವ ಘಟನೆಯೊಂದು ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಟದಹಳ್ಳಿಯಲ್ಲಿ ನಡೆದಿದೆ.

ಮಡದಹಳ್ಳಿಯ ಆದಿ ಕಬೀರ್ ಆಶ್ರಮ ರಸ್ತೆಯ ನಿವಾಸಿ ಹಬೀಬಾ ತಾಜ್ ಚೂರಿ ಇರಿತಕ್ಕೊಳಗಾದ ಮಹಿಳೆಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಡಿಜೆ ಹಳ್ಳಿ ನಿವಾಸಿ ಶೇಖ್ ಮೆಹಬೂಬ್’ನನ್ನು ಬಂಧನಕ್ಕೊಳಪಡಿಸಿದ್ದಾರೆ.

ಹಬೀಬಾ ತಾಜ್ ಅವರ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಪತಿ ನಿಧನದ ಬಳಿಕ ಹಬೀಬಾ ತಮ್ಮ ಇಬ್ಬರು ಪುತ್ರರೊಂದಿಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಹಬೀಬಾ ಅವರ ಬೆನ್ನುಬಿದ್ದಿದ್ದ ಮೆಹಬೂಬ್ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಈಗಾಗಲೇ ತನಗೆ ಇಬ್ಬರು ಮಕ್ಕಳಿದ್ದು, ಎರಡನೇ ಮದುವೆಯಾದರೆ ಯಾವುದೇ ಪ್ರಯೋಜನವಿಲ್ಲ ಎಂದು ಹಬೀಬಾ ನಿರಾಕರಿಸಿದ್ದಾಳೆ. ಇಷ್ಟಾದರೂ ಸುಮ್ಮನಿದರ ಮೆಹಬೂಬ್ ಪದೇ ಪದೇ ಹಬೀಬಾಳನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಬಳಿಕ ಹಬೀಬಾ ಅವರ ಸಹೋದರ ಕೂಡ ಮೆಹಬೂಬ್ ಬಳಿ ಮಾತನಾಡಿ ಆಕೆಯಿಂದ ದೂರ ಇರುವಂತೆ ಎಚ್ಚರಿಸಿದ್ದಾನೆ.

“ಕೆಲವು ದಿನಗಳ ಹಿಂದೆ ಹಬೀಬಾ ಬಳಿ ಬಂದಿರುವ ಮೆಹಬೂಬ್ ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳದಿದ್ದರೆ ಭೀಕರ ಪರಿಣಾಮಗಳ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಹಬೀಬಾ ತನ್ನ ಸಹೋದನಿಗೆ ಬಳಿ ಹೇಳಿಕೊಂಡಿದ್ದಾರೆ.

bengaluru

ಇದರಂತೆ ಭಾನುವಾರ ರಾತ್ರಿ ಮೆಹಬೂಬ್ ಹಬೀಬಾ ಮನೆಗೆ ನುಗ್ಗಿದ್ದು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಕೂಡಲೇ ಈ ಬಗ್ಗೆ ಮನೆಯ ಮಾಲೀಕರು ಹತ್ತಿರದಲ್ಲೇ ವಾಸಿಸುತ್ತಿದ್ದ ಹಬೀಬಾ ಅವರ ಸಹೋದನಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಬೀಬಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಹಬೀಬಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here