Home Uncategorized ಬೆಂಗಳೂರು: ಮ್ಯೂಸಿಯಂ ರಸ್ತೆಯಲ್ಲಿ 'ಸಂಜೆ ಅಂಚೆ ಕಚೇರಿ' ಆರಂಭ

ಬೆಂಗಳೂರು: ಮ್ಯೂಸಿಯಂ ರಸ್ತೆಯಲ್ಲಿ 'ಸಂಜೆ ಅಂಚೆ ಕಚೇರಿ' ಆರಂಭ

26
0
Advertisement
bengaluru

ಗ್ರಾಹಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಉಪ ಅಂಚೆ ಕಚೇರಿಯನ್ನು ‘ಸಂಜೆ ಅಂಚೆ ಕಚೇರಿ’ಯನ್ನಾಗಿ ಪರಿವರ್ತಿಸಲಾಗಿದ್ದು, ಈ ಕಚೇರಿಯನ್ನು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಅವರು ಸೋಮವಾರ ಸಂಜೆ ಉದ್ಘಾಟಿಸಿದರು. ಬೆಂಗಳೂರು: ಗ್ರಾಹಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಉಪ ಅಂಚೆ ಕಚೇರಿಯನ್ನು ‘ಸಂಜೆ ಅಂಚೆ ಕಚೇರಿ’ಯನ್ನಾಗಿ ಪರಿವರ್ತಿಸಲಾಗಿದ್ದು, ಈ ಕಚೇರಿಯನ್ನು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಅವರು ಸೋಮವಾರ ಸಂಜೆ ಉದ್ಘಾಟಿಸಿದರು.

2022ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಧಾರವಾಡದಲ್ಲಿ ‘ಸಂಜೆ ಅಂಚೆ ಕಚೇರಿ’ಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದು ರಾಜ್ಯದಲ್ಲಿ ಅಂತಹ ಎರಡನೇ ಕಚೇರಿಯಾಗಿದೆ.

ಧಾರವಾಡದಲ್ಲಿ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ತೆರೆದಾಗ ಸಾರ್ವಜನಿಕರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ, ಬೆಂಗಳೂರಿನಲ್ಲಿಯೂ ಪ್ರಾಯೋಗಿಕವಾಗಿ ಈ ಯೋಜನೆ ತರಲಾಗಿದೆ. ಸಂಜೆ ಅಂಚೆ ಕಚೇರಿಯ ಸಮಯ ಮಾತ್ರ ವಿಸ್ತರಿಸಲಾಗಿದೆ. ಪ್ರತ್ಯೇಕ ಘಟಕ ಅಥವಾ ಬ್ರಾಂಡ್ ಅಲ್ಲ ಎಂದು ಎಸ್‌. ರಾಜೇಂದ್ರ ಕುಮಾರ್ ಸ್ಪಷ್ಟಪಡಿಸಿದರು.

ಪಾರಂಪರಿಕ ಕಟ್ಟಡದಲ್ಲಿ ಈ ಕಟ್ಟಡವಿದ್ದು, ಕಚೇರಿಯು ಸ್ಪೀಡ್ ಪೋಸ್ಟ್, ನೋಂದಾಯಿತ ಪೋಸ್ಟ್, ಹಣದ ಆದೇಶಗಳು ಮತ್ತು ಪಾರ್ಸೆಲ್ ಬುಕಿಂಗ್ ಸೇವೆಗಳನ್ನು ಈ ಕಚೇರಿ ನೀಡುತ್ತದೆ.

bengaluru bengaluru

ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯು ಸಾರ್ವಜನಿಕ ವಹಿವಾಟುಗಳಿಗೆ ಮಧ್ಯಾಹ್ನ 3.30 ಕ್ಕೆ ಬಂದ್ ಆಗುತ್ತದೆ ಎಂದು ಅಂಚೆ ಸಹಾಯಕ ಸಿ ಎಸ್ ವಿನಯ್ ಅವರು ಹೇಳಿದ್ದಾರೆ.

ಸಹಾಯಕ ಪೋಸ್ಟ್‌ಮಾಸ್ಟರ್ ಜನರಲ್, ವ್ಯವಹಾರ ಅಭಿವೃದ್ಧಿ, ವಿ ತಾರಾ ಅವರು ಮಾತನಾಡಿ, “ಇದು ಪ್ರತ್ಯೇಕ ಘಟಕವಾಗಿದ್ದು, ಮಧ್ಯಾಹ್ನ 1 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಸಾರ್ವಜನಿಕರಿಂದ ಬೇಡಿಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಜೆ ಅಂಚೆ ಕಚೇರಿಯನ್ನು ತೆರೆಯಲಾಗಿದೆ. ಸಿಬ್ಬಂದಿಗಳು ಇಂಡಿಯಾ ಪೋಸ್ಟ್ ಲಾಂಛನದೊಂದಿಗೆ ಕ್ರೀಮ್ ಸ್ಲೀವ್‌ಲೆಸ್ ಜಾಕೆಟ್‌ಗಳನ್ನು ಧರಿಸಿರುತ್ತಾರೆ ಎಂದು ತಿಳಿಸಿದ್ದಾರೆ.

“ಇದು ನಮಗೆ, ವಿಶೇಷವಾಗಿ ಕೆಲಸ ಮಾಡುವ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ಆರಂಭಿಸಲಾಗಿದೆ ಎಂದರು.

ಇಂತಹ ಹೆಚ್ಚಿನ ಕಚೇರಿಗಳನ್ನು ಪ್ರಾರಂಭಿಸುವ ಸಾಧ್ಯತೆಯ ಕುರಿತು ಪ್ರಶ್ನಗೆ ಉತ್ತರಿಸಿದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್, ಈ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ನೋಡೋಣ. ಯುವಕರನ್ನು ಅಂಚೆ ಕಚೇರಿಗಳಿಗೆ ಸೆಳೆಯಲು ನಾವು ಉತ್ಸುಕರಾಗಿದ್ದೇವೆ. ಆದ್ದರಿಂದ ಅಂಚೆಚೀಟಿಗಳ ಸಂಗ್ರಹಕ್ಕೆ ಸಂಬಂಧಿಸಿದ ವಸ್ತುಗಳು ಲಭ್ಯವಿರುತ್ತವೆ ಎಂದು ತಿಳಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here