Home Uncategorized ಮಂಡ್ಯದ ಗೆಜ್ಜಲಗೆರೆಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ಮೆಗಾ ಡೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ಮಂಡ್ಯದ ಗೆಜ್ಜಲಗೆರೆಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ಮೆಗಾ ಡೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

17
0

ಕರ್ನಾಟಕಲ್ಲೀಗ ಎಲೆಕ್ಷನ್ ಸಮಯ. ಇನ್ನು ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಬಿಜೆಪಿ ಹೈಕಮಾಂಡ್ ಅಮಿತ್ ಶಾ ಆಗಮನ ಕರ್ನಾಟಕಕ್ಕೆ ಆಗಿದೆ.  ಎಲೆಕ್ಷನ್​​​​ಗೆ ಬಿಜೆಪಿ ರಣಕಹಳೆ ಜೋರಾಗಿದ್ದು, ಅಮಿತ್​ ಶಾ ಅವರು ಮಂಡ್ಯದಿಂದಲೇ ರಣತಂತ್ರ ಆರಂಭಿಸಿದ್ದಾರೆ. ಮಂಡ್ಯ: ಕರ್ನಾಟಕಲ್ಲೀಗ ಎಲೆಕ್ಷನ್ ಸಮಯ. ಇನ್ನು ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಬಿಜೆಪಿ ಹೈಕಮಾಂಡ್ ಅಮಿತ್ ಶಾ ಆಗಮನ ಕರ್ನಾಟಕಕ್ಕೆ ಆಗಿದೆ.  ಎಲೆಕ್ಷನ್​​​​ಗೆ ಬಿಜೆಪಿ ರಣಕಹಳೆ ಜೋರಾಗಿದ್ದು, ಅಮಿತ್​ ಶಾ ಅವರು ಮಂಡ್ಯದಿಂದಲೇ ರಣತಂತ್ರ ಆರಂಭಿಸಿದ್ದಾರೆ.  ಅಮಿತ್​ ಶಾ ಮಂಡ್ಯದ ಮೆಗಾ ಡೈರಿ ಉದ್ಘಾಟಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಬೊಮ್ಮಾಯಿ ಉಪಸ್ಥಿತರಿದ್ದರು. 

ಮೆಗಾ ಡೈರಿಯ ವಿಶೇಷತೆ: ಮದ್ದೂರಿನ ಗೆಜ್ಜಲಗೆರೆಯಲ್ಲಿರುವ ಮನ್ಮುಲ್ ಮೆಗಾ ಡೈರಿ, 47 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದ್ದು, ಸುಮಾರು 260.9 ಕೋಟಿ ವೆಚ್ಚದ ಹಾಲು ಉತ್ಪಾದಕ ಘಟಕವಾಗಿದೆ. ಒಂದು ದಿನಕ್ಕೆ 30 ಮೆಟ್ರಿಕ್ ಟನ್ ಹಾಲಿನ ಪೌಡರ್, 4 ಮೆಟ್ರಿಕ್ ಟನ್ ಕೋವಾ, 2 ಮೆಟ್ರಿಕ್ ಟನ್ ಪನ್ನೀರ್, 12 ಮೆಟ್ರಿಕ್ ಟನ್ ತುಪ್ಪ, 10 ಮೆಟ್ರಿಕ್ ಟನ್ ಬೆಣ್ಣೆ, 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಈ ಮೆಗಾ ಡೈರಿಯಿಂದ ಒಂದು ವರ್ಷಕ್ಕೆ 6 ಕೋಟಿ ಹಣ ಉಳಿತಾಯವಾಗಲಿದೆ. 

ಡೇರಿ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಆಗಮಿಸಿದ್ದರು. ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಎಸ್​.ಟಿ. ಸೋಮಶೇಖರ್​​​ ಸೇರಿದಂತೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್​ ಮತ್ತಿತರರು ಭಾಗಿಯಾಗಿದ್ದರು.ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ‌ @AmitShah ಅವರು ಮಂಡ್ಯ ಜಿಲ್ಲೆ ಗೆಜ್ಜಲಗೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಮನ್ ಮುಲ್ “ಮೆಗಾ ಡೇರಿ ” ಉದ್ಘಾಟನಾ ಕಾರ್ಯಕ್ರಮದಲ್ಲಿ ” ಡೇರಿಯ ಕಾರ್ಯ ನಿರ್ವಹಣೆ ಹಾಗೂ ಡೇರಿ ಉತ್ಪನ್ನಗಳನ್ನು ವೀಕ್ಷಿಸಿದರು. pic.twitter.com/hije9uF2he— PIB in Karnataka (@PIBBengaluru) December 30, 2022

LEAVE A REPLY

Please enter your comment!
Please enter your name here