Home Uncategorized ನಾಳೆ ಮಹಾ ಶಿವರಾತ್ರಿ: ಅಳಂದ ಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ನಾಳೆ ಮಹಾ ಶಿವರಾತ್ರಿ: ಅಳಂದ ಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

26
0
Advertisement
bengaluru

ನಾಳೆ ಶಿವರಾತ್ರಿ ಆಚರಣೆ, ಅದೇ ಹೊತ್ತಿಗೆ ಮುಸಲ್ಮಾನರ ಪವಿತ್ರ ಹಬ್ಬ ಉರುಸ್ ಆಚರಣೆ ಕೂಡ ಇದೆ. ಈ ಹಿನ್ನೆಲೆಯಲ್ಲಿ ಕಲಬುರಗಿಯ ಲಾಡಲ್ ಮಶಾಕ್ ದರ್ಗಾ ಮತ್ತು ರಾಘವ ಚೈತನ್ಯ ಶಿವಲಿಂಗದ ಉರುಸ್ ಮತ್ತು ಆಳಂದದ ಲಾಡ್ಲ್ ಮಶಾಕ್ ದರ್ಗಾದ ಒಳಗಿನ ಮಹಾಶಿವರಾತ್ರಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ.  ಕಲಬುರಗಿ: ನಾಳೆ ಶಿವರಾತ್ರಿ ಆಚರಣೆ, ಅದೇ ಹೊತ್ತಿಗೆ ಮುಸಲ್ಮಾನರ ಪವಿತ್ರ ಹಬ್ಬ ಉರುಸ್ ಆಚರಣೆ ಕೂಡ ಇದೆ. ಈ ಹಿನ್ನೆಲೆಯಲ್ಲಿ ಕಲಬುರಗಿಯ ಲಾಡಲ್ ಮಶಾಕ್ ದರ್ಗಾ ಮತ್ತು ರಾಘವ ಚೈತನ್ಯ ಶಿವಲಿಂಗದ ಉರುಸ್ ಮತ್ತು ಆಳಂದದ ಲಾಡ್ಲ್ ಮಶಾಕ್ ದರ್ಗಾದ ಒಳಗಿನ ಮಹಾಶಿವರಾತ್ರಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ. 

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ) ನೇತೃತ್ವದಲ್ಲಿ ಪೊಲೀಸರು ಮಾರ್ಗ ಮೆರವಣಿಗೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ನಿನ್ನೆ ಬೆಳಗ್ಗೆ ಆಳಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲೋಕ್ ಕುಮಾರ್ ಸಂಚಾರ ನಡೆಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಅಲೋಕ್ ಕುಮಾರ್, ಫೆಬ್ರವರಿ 18 ರಂದು ಆಳಂದ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 11 ಕೆಎಸ್‌ಆರ್‌ಪಿ ಪ್ಲಟೂನ್‌ಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುವುದು. ಆಳಂದ ಮತ್ತು ಸುತ್ತಮುತ್ತ ಒಟ್ಟು 11 ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು ಎಂದರು. ಫೆಬ್ರವರಿ 18 ರಂದು ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆಯೇ ಎಂಬ ಪ್ರಶ್ನೆಗೆ, ಅಲೋಕ್ ಕುಮಾರ್ ಅವರು ಈ ವಿಷಯವನ್ನು ಜಿಲ್ಲಾಡಳಿತ ನಿರ್ಧರಿಸುತ್ತದೆ ಎಂದು ಹೇಳಿದರು.

ಎಡಿಜಿಪಿ ಅಲೋಕ್ ಕುಮಾರ್, ಈಶಾನ್ಯ ವಲಯದ ಡಿಐಜಿ ಅನುಪಮ್ ಅಗರ್ವಾಲ್, ಕೆಎಸ್‌ಆರ್‌ಪಿ ಕಮಾಂಡೆಂಟ್ ಬಸವರಾಜ್ ಜಿಲ್ಲೆ ಮತ್ತು ಎಸ್‌ಪಿ ಇಶಾ ಪಂತ್ ಲಾಡಲ್ ಮಶಾಕ್ ದರ್ಗಾ ಮತ್ತು ರಾಘವ ಚೈತನ್ಯ ಶಿವಲಿಂಗಕ್ಕೆ ಭೇಟಿ ನೀಡಿದರು.

bengaluru bengaluru

bengaluru

LEAVE A REPLY

Please enter your comment!
Please enter your name here