Home Uncategorized ಮಾಜಿ ಕಾರ್ಪೊರೇಟರ್‌ಗಳ ಪ್ರತಿಭಟನೆ ಚುನಾವಣಾ ತಂತ್ರವಷ್ಟೇ: ಶಾಸಕಿ ಸೌಮ್ಯಾ ರೆಡ್ಡಿ

ಮಾಜಿ ಕಾರ್ಪೊರೇಟರ್‌ಗಳ ಪ್ರತಿಭಟನೆ ಚುನಾವಣಾ ತಂತ್ರವಷ್ಟೇ: ಶಾಸಕಿ ಸೌಮ್ಯಾ ರೆಡ್ಡಿ

19
0
Advertisement
bengaluru

ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 4 ವರ್ಷ 9 ತಿಂಗಳಿಂದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದಕ್ಕೆ ಶಾಸಕಿ ಸೌಮ್ಯಾ ರೆಡ್ಡಿಯೇ ಮೂಲ ಕಾರಣವೆಂದು ಬಿಜೆಪಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೆಂಗಳೂರು: ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 4 ವರ್ಷ 9 ತಿಂಗಳಿಂದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದಕ್ಕೆ ಶಾಸಕಿ ಸೌಮ್ಯಾ ರೆಡ್ಡಿಯೇ ಮೂಲ ಕಾರಣವೆಂದು ಬಿಜೆಪಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಯನಗರದ ವಿಜಯ ಕಾಲೇಜು ಮುಂಭಾಗದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕರು ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಸಿ.ಕೆ.ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸೌಮ್ಯ ರೆಡ್ಡಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

”ಜಯನಗರದ ವಾಣಿಜ್ಯ ಸಂಕೀರ್ಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಶಿಥಿಲಗೊಂಡಿದ್ದು, ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಅಲ್ಲದೆ, ಬೈರಸಂದ್ರ ವಾರ್ಡ್‌ನ ಭೋವಿ ಕಾಲೋನಿಯಲ್ಲಿ ಸಮುದಾಯ ಭವನಕ್ಕೆ 6 ಕೋಟಿ ರೂ. ಮಂಜೂರು ಮಾಡಲಾಗಿತ್ತು, ಆದರೆ ವರ್ಕ್ ಆರ್ಡರ್ ಇದ್ದರೂ ಕಾಮಗಾರಿ ನಡೆಯಲೇ ಇಲ್ಲ. ಸಾರಕ್ಕಿ ಮತ್ತು ಶಾಕಾಂಬರಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳಿಲ್ಲ’ ಎಂದು ರಾಮಮೂರ್ತಿ ಅವರು ಆರೋಪಿಸಿದರು.

ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸೌಮ್ಯಾ ರೆಡ್ಡಿಯವರು, ಚುನಾವಣೆಗಳು ಬರುತ್ತಿದ್ದಂತೆ ಪ್ರತಿಭಟನೆಗಳ ನಡೆಸುವುದು ಸಾಮಾನ್ಯ. ಈ ಪ್ರತಿಭಟನೆ ಕೂಡ ಚುನಾವಣಾ ತಂತ್ರವಷ್ಟೇ. ಜಯನಗರ ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ಶೇ.61ರಷ್ಟು ಹಣವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದಾಗ ಏಕೆ ಅವರು ಪ್ರತಿಭಟಿಸಲಿಲ್ಲ? ನನ್ನ ಬಳಿ ಇರುವ ಹಣದಿಂದ ನಾನು ಅಭಿವೃದ್ಧಿ ಕೆಲಸಗಳನ್ನು ಮಾಡಿಸಬೇಕಿದೆ. ಈ ಬಗ್ಗೆ ನಾಗರಿಕರನ್ನು ನೀವು ಕೇಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

bengaluru bengaluru

ಟೆಂಡರ್ ಶ್ಯೂರ್ ಮತ್ತು ಜಯನಗರ ಕಾಂಪ್ಲೆಕ್ಸ್ ನಂತಹ ವಿವಿಧ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆಂದು ತಿಳಿಸಿದರು.

ಬೈರಸಂದ್ರ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಎನ್.ನಾಗರಾಜ್ ಮಾತನಾಡಿ, ಜಯನಗರ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಿಸಿಕ ಕೆಲಸಗಳ ಮಾಡಿಸಿಕೊಡಲು ಶಾಸಕರು ಕೆಲವು ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆಂದು ಹೇಳಿದರು.


bengaluru

LEAVE A REPLY

Please enter your comment!
Please enter your name here