ಬೆಂಗಳೂರು:
ಬಹು ಚರ್ಚಿತ ಎಪಿಎಂಸಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ.
ಬಹುಹೊತ್ತಿನ ತನಕ ನಡೆದ ಚರ್ಚೆ ನಂತರ ಪ್ರತಿಪಕ್ಷಗಳ ವಿರೋಧದ ನಡುವೆ ಮಸೂದೆ ಅಂಗೀಕಾರ ಪಡೆಯಿತು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಎಪಿಎಂಸಿ ತಿದ್ದುಪಡಿ ವಿಧೇಯಕ ಮಂಡಿಸಿ ಮಸೂದೆ ಉದ್ದೇಶವನ್ನು ವಿವರಿಸಿದರು. ಎಪಿಎಂಸಿ ಕಾಯ್ದೆಯಲ್ಲಿ ರೈತರಿಗೆ ಅನುಕೂಲ ಆಗುವ ಮಹತ್ವದ ಎರಡು ಬದಲಾವಣೆ ಮಾಡಿ ತಿದ್ದುಪಡಿ ತರಲಾಗಿದೆ. ವಿಸ್ತ್ರತ ಚರ್ಚೆ ನಡೆಸಿದ ನಂತರವೇ ಈ ತಿದ್ದುಪಡಿ ತರಲಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ಸಂಚರಿಸಿ ಎಲ್ಲಾ ಎಪಿಎಂಸಿ ಗಳಿಗೆ ಭೇಟಿ ನೀಡಿ ರೈತರ ಜತೆ ಚರ್ಚಿಸಿದ್ದೇನೆ. ರೈತರು ಕಳೆದ ಮೂರು ವರ್ಷದಲ್ಲಿ 25 ಕೋಟಿಮೊತ್ತದಷ್ಟು ದಂಡ ತುಂಬಿದ್ದಾರೆ. ಇದನ್ನು ತಪ್ಪಿಸುವುದು ಸಹ ನಮ್ಮ ಉದ್ದೇಶ ಎಂದರು. ಪ್ರತಿಪಕ್ಷಗಳ ವಿರೋಧ ನಡುವೆ ಮಸೂದೆಗೆ ಅಂಗೀಕಾರ ದೊರೆಯಿತು.