Bagalkot: 25 thousand rupees penalty to the elder brother for the mistake of giving the bike to his minor brother | ಅಪ್ರಾಪ್ತ ಸಹೋದರನಿಗೆ ಬೈಕ್ ಚಲಾಯಿಸಲು ನೀಡಿದ್ದ ತಪ್ಪಿಗೆ ಅಣ್ಣನಿಗೆ 25 ಸಾವಿರ ರೂ. ದಂಡತಮ್ಮನಿಗೆ ಬೈಕ್ ಕೊಟ್ಟಿದ್ದಕ್ಕೆ ಅಣ್ಣನಿಗೆ ಬಿತ್ತು 25 ಸಾವಿರ ದಂಡ – ಕಾರಣ ಇಲ್ಲಿದೆ
ಬಾಗಲಕೋಟೆ:
ಅಪ್ರಾಪ್ತ ಸಹೋದರನಿಗೆ ಬೈಕ್ ಚಲಾಯಿಸಲು ನೀಡಿದ್ದ ತಪ್ಪಿಗೆ ಅಣ್ಣನಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ಜೆಎಂಎಫ್ಸಿ ಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸದೆ.
ಹುಲ್ಯಾಳದಿಂದ ಜಮಖಂಡಿ ಬರುವ ವೇಳೆ ಅಪ್ರಾಪ್ತ ತಮ್ಮನಿಗೆ ಅಣ್ಣ ಬೈಕ್ ಚಲಾಯಿಸಲು ನೀಡಿದ್ದಾರೆ. ಈ ವೇಳೆ ಮಾರ್ಗಮಧ್ಯೆ ವಾಹನ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಹೀಗಾಗಿ 25 ಸಾವಿರ ರೂ. ದಂಡ ವಿಧಿಸಲಾಗಿತ್ತು.
ಫೆಬ್ರವರಿ 23ರಂದು ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಿಸಲಾಗಿದ್ದು, ಬೈಕ್ ಮಾಲೀಕ ಸಚಿನ್ಗೆ 25,000 ರೂ. ದಂಡ ವಿಧಿಸಿದೆ ಎನ್ನಲಾಗಿದೆ.
