Home ಬೆಂಗಳೂರು ನಗರ ದತ್ತಾತ್ರೇಯ ಹೊಸಬಾಳೆ ಅವರಿಗೆ ಮುಖ್ಯಮಂತ್ರಿ ಅಭಿನಂದನೆ

ದತ್ತಾತ್ರೇಯ ಹೊಸಬಾಳೆ ಅವರಿಗೆ ಮುಖ್ಯಮಂತ್ರಿ ಅಭಿನಂದನೆ

100
0

ಬೆಂಗಳೂರು:

ಆರ್ ಎಸ್ ಎಸ್ ನ ಎರಡನೇ ಅತ್ಯುನ್ನತ ಹುದ್ದೆಯಾದ ಅಖಿಲ ಭಾರತ ಸರಕಾರ್ಯವಾಹರಾಗಿ ನಿಯುಕ್ತಿ ಹೊಂದಿದ ಕರ್ನಾಟಕದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ, ನಿಷ್ಠಾವಂತ ಸ್ವಯಂ ಸೇವಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಉನ್ನತ ಸ್ಥಾನಕ್ಕೇರಿರುವುದು ಹೆಮ್ಮೆಯ ವಿಷಯ.

ಸಂಘಟನಾ ಚಾತುರ್ಯ, ಸಮಾಜದ ಆಗುಹೋಗುಗಳ ಕುರಿತ ಅರಿವು, ಸಂವೇದನಾಶೀಲತೆ ಹೊಂದಿರುವ ಅವರು ಬಹುವಿಧ ಆಸಕ್ತಿ ಹಾಗೂ ಬಹುಮುಖ ಪ್ರತಿಭೆಯ ಸಂಗಮ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೊಸಬಾಳೆಯವರು ಅಂದಿನ ಕರಾಳ ಅನುಭವದ ಚಿತ್ರಣ ನೀಡುವ ‘ಭುಗಿಲು’ ಸಂಪಾದನಾ ತಂಡದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂಡಿಯಾ ಪಾಲಿಸಿ ಫೌಂಡೇಷನ್ ನ ಸ್ಥಾಪಕ ಸದಸ್ಯರಾಗಿ, ‘ಅಸೀಮಾ’ ಮಾಸ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಗಮನ ಸೆಳೆದವರು ಎಂದು ಅವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಆರೆಸ್ಸೆಸ್ ನ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ https://kannada.thebengalurulive.com/kannadiga-dattatreya-hosabale-occupy-no-2-position-in-rss/

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಸರಕಾರ್ಯವಾಹರ ಹೊಣೆಗಾರಿಕೆ ಅವರ ಪ್ರತಿಭೆ, ಸಾಮರ್ಥ್ಯಕ್ಕೆ ಸಂದ ಗೌರವವಾಗಿದೆ. ಭಗವಂತನು ಅವರಿಗೆ ಆಯುರಾರೋಗ್ಯವನ್ನು ಕರುಣಿಸಿ, ಭಾರತಮಾತೆಯ ಸೇವೆಯಲ್ಲಿ ಇನ್ನಷ್ಟು ತತ್ಪರರಾಗಲು ಸ್ಫೂರ್ತಿ ನೀಡಲಿ ಎಂದು ಹಾರೈಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here