Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ರೋಗದ ಸಂಭವನೀಯತೆ ಹೇಳುವ ತಪಾಸಣಾ ವ್ಯವಸ್ಥೆ ಬೆಳೆಯಬೇಕಿದೆ:ಆರೋಗ್ಯ ಸಚಿವ
  • ಆರೋಗ್ಯ
  • ಬೆಂಗಳೂರು ನಗರ

ರೋಗದ ಸಂಭವನೀಯತೆ ಹೇಳುವ ತಪಾಸಣಾ ವ್ಯವಸ್ಥೆ ಬೆಳೆಯಬೇಕಿದೆ:ಆರೋಗ್ಯ ಸಚಿವ

The Bengaluru Live April 7, 2022 5:30 PM 1 minute read
diagnosis and screening systems can predict diseases at early stage Karnataka Health Minister

ರೋಗದ ಸಂಭವನೀಯತೆ ಹೇಳುವ ತಪಾಸಣಾ ವ್ಯವಸ್ಥೆ ಬೆಳೆಯಬೇಕಿದೆ:ಆರೋಗ್ಯ ಸಚಿವ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ವೃತ್ತಿ ಬದುಕಿನಲ್ಲಿ ವೈದ್ಯರು ರಾಜಿಯಾಗಬಾರದು

ಬೆಂಗಳೂರು:

ರೋಗ ಬಂದ ಬಳಿಕ ಚಿಕಿತ್ಸೆ ನೀಡುವ ಬದಲು, ರೋಗದ ಸಂಭವನೀಯತೆಯನ್ನು ಹೇಳುವ ತಪಾಸಣಾ ವ್ಯವಸ್ಥೆ ರಾಜ್ಯದಲ್ಲಿ ಬೆಳೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ‘ವಿಶ್ವ ಆರೋಗ್ಯ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶ್ವಾಸಕೋಶ ಸೇರಿದಂತೆ ದೇಹದ ಎಲ್ಲ ಭಾಗಗಳು ಉತ್ತಮವಾಗಿ ಕೆಲಸ ಮಾಡಲು ಶುದ್ಧ ಆಮ್ಲಜನಕ, ಶುದ್ಧ ಆಹಾರ ಬೇಕು. ಆದರೆ ವಾಯುಮಾಲಿನ್ಯದಿಂದಾಗಿ ಗಾಳಿ ಕಲುಷಿತವಾಗಿದೆ. ಕೂಲ್ ಡ್ರಿಂಕ್ಸ್, ಜಂಕ್ ಆಹಾರದಿಂದ ಬೊಜ್ಜು ಅತಿಯಾಗಿ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ಆದರೂ ರೋಗ ಬಂದ ಬಳಿಕ ಎಲ್ಲರೂ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರ ಬದಲು, ರೋಗದ ಸಂಭವನೀಯತೆಯನ್ನು ಹೇಳುವ ವೈದ್ಯಕೀಯ ತಪಾಸಣೆ ನಮ್ಮಲ್ಲಿ ಬೆಳೆಯಬೇಕಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ, ರೋಗ ಬರುವ ಮುನ್ನವೇ ಅದರ ಸಾಧ್ಯತೆಯನ್ನು ಹೇಳಲು ಸಾಧ್ಯವಿದೆ ಎಂದರು.

ಜಗತ್ತಿನಲ್ಲಿ ಅನೇಕ ವೃತ್ತಿಗಳಿವೆ. ಆದರೆ ವೈದ್ಯ ವೃತ್ತಿಯಲ್ಲಿ ಹೆಚ್ಚು ಧನ್ಯತಾ ಭಾವ ಮೂಡುತ್ತದೆ. ಅನುಕಂಪ, ಪ್ರೀತಿ, ವಿಶ್ವಾಸವನ್ನು ಅಳವಡಿಸಿಕೊಂಡಾಗ ಮಾತ್ರ ಇದು ಸಾಧ್ಯ. ರಾಜ್ಯದಲ್ಲಿ 44 ಸಾವಿರ ಆಶಾ ಕಾರ್ಯಕರ್ತೆಯರು ಗೌರವಧನಕ್ಕಿಂತ ಹತ್ತು ಪಟ್ಟು ಅಧಿಕ ಕೆಲಸ ಮಾಡುತ್ತಿದ್ದಾರೆ. ಅವರ ಗೌರವಧನ ಬಹಳ ಕಡಿಮೆ ಇದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದು, ಅದಕ್ಕೆ ಅವರು ಸ್ಪಂದಿಸಿ ಮೊತ್ತ ಹೆಚ್ಚಳ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಎರಡು ವರ್ಷಗಳಲ್ಲಿ ಬಾಕಿ ಉಳಿದಿದ್ದ ಪದೋನ್ನತಿಯನ್ನು ಮಾಡಲಾಗಿದೆ. ನೌಕರರು, ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದರು.

diagnosis and screening systems can predict diseases at early stage Karnataka Health Minister

ವೃತ್ತಿ ಬದುಕಿನಲ್ಲಿ ವೈದ್ಯರು ರಾಜಿ ಆಗಬಾರದು. ಜನರ ಮುಂದೆ ತಲೆ ತಗ್ಗಿಸುವಂತಾಗಬಾರದು. ಐಎಎಸ್, ಕೆಎಎಸ್ ಅಧಿಕಾರಿಗಳು ಎಲ್ಲ ಬಗೆಯ ಆಡಳಿತದ ಕೆಲಸವನ್ನು ಮಾಡುತ್ತಾರೆ. ಹಾಗೆಯೇ ವೈದ್ಯರು ಕೂಡ ಆಡಳಿತ ನಡೆಸಬೇಕು. ಯಾವುದೇ ಆರೋಗ್ಯ ಸಂಸ್ಥೆ, ಆಸ್ಪತ್ರೆಯಲ್ಲಿ ಆಡಳಿತ ಲೋಪ ಉಂಟಾಗುವುದನ್ನು ತಡೆಯಲು ವೈದ್ಯರಿಗೆ ವಿಶೇಷ ತರಬೇತಿ ಅಗತ್ಯವಿದೆ. ಇದನ್ನು ಹಿಂದಿನ ಯಾವುದೇ ಸರ್ಕಾರ ಮಾಡಿರಲಿಲ್ಲ. ಈಗ ನಮ್ಮ ಸರ್ಕಾರ ಇದನ್ನು ಸೂಕ್ತವಾಗಿ ಮಾಡಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸಮನಾಗಿ ರಾಜ್ಯ ನೌಕರರಿಗೆ ವೇತನ ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಆರೋಗ್ಯ ಇಲಾಖೆಯ ನೌಕರರಿಗೆ ಈ ರೀತಿ ವೇತನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಇಲಾಖೆಯ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಕಣ್ಣಿನ ಆರೋಗ್ಯ ತಪಾಸಣೆಗಾಗಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಡವರಿಗಾಗಿ ಉಚಿತ ಡಯಾಲಿಸಿಸ್ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ ಎಂದರು.

ವಿಶ್ವ ಆರೋಗ್ಯ ದಿನ ಅಂಗವಾಗಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರಗಳಿಗೆ ಚಾಲನೆ ನೀಡಲಾಯಿತು.

ಆರೋಗ್ಯ ಕರ್ನಾಟಕ ನಿರ್ಮಿಸಲು ಶ್ರಮಿಸುತ್ತಿರುವ ಇಲಾಖೆಯ ಎಲ್ಲ ವೈದ್ಯರು, ಸಿಬ್ಬಂದಿಗಳಿಗೆ ವಿಶ್ವ ಆರೋಗ್ಯ ದಿನದ ಶುಭಾಶಯಗಳು.#WorldHealthDay pic.twitter.com/cEPcyauIVA

— Dr Sudhakar K (@mla_sudhakar) April 7, 2022

ಆರೋಗ್ಯ ದಿನಾಚರಣೆ

44 ಸಾವಿರ ಆಶಾ ಕಾರ್ಯಕರ್ತೆಯರನ್ನು ಮಧ್ಯ ಕರ್ನಾಟಕ ಭಾಗದಲ್ಲಿ ಒಂದೆಡೆ ಸೇರಿಸಿ ಆರೋಗ್ಯ ದಿನಾಚರಣೆಯನ್ನು ಆಚರಿಸುವ ಉದ್ದೇಶವಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವರನ್ನೂ ಕರೆತರಲಾಗುವುದು. ಹಾಗೆಯೇ ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಪುನೀತ್ ರಾಜ್ ಕುಮಾರ್ ಅವರು ನೇತ್ರದಾನ ಮಾಡಿದ್ದರಿಂದ ಅರಿವು ಹೆಚ್ಚಾಗಿದೆ. ಇದೇ ರೀತಿ ತಾರೆಯರ ಮೂಲಕ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.

ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ಎಲ್ಲಾ ನಾಗರಿಕರು ಕಾನೂನು ಪಾಲಿಸಬೇಕು. ಯಾವುದೇ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಕೆಲ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ ಎಂದು ಸಚಿವರು ಹೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ:ಡಾ.ಕೆ.ಸುಧಾಕರ್
Next: ಮೋಹನ್‌ದಾಸ್ ಪೈ ಅವರ ಆಕ್ರೋಶದ ನಂತರ, ಶೀಘ್ರದಲ್ಲೇ ಬೆಂಗಳೂರಿನಲ್ಲಿ ವ್ಯಾಪಕ ರಸ್ತೆ ದುರಸ್ತಿ ಕಾಮಗಾರಿಗೆ ಭರವಸೆ ನೀಡಿದ ಸಿಎಂ ಬೊಮ್ಮಾಯಿ

Related Stories

ಸಿಂಗಸಂದ್ರದಲ್ಲಿ ಕಟ್ಟಡದ ಮುಂದೆ ವ್ಯಕ್ತಿಯೊಬ್ಬರಿಗೆ ದಂಡದ ರಸೀದಿ ನೀಡುತ್ತಿರುವ ಸಮವಸ್ತ್ರಧಾರಿ ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್
  • ಬೆಂಗಳೂರು ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ: ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್‌ಗಳಿಂದ 68 ಪ್ರಕರಣ, ₹76,500 ದಂಡ ವಸೂಲಿ

The Bengaluru Live November 9, 2026 11:35 AM
ಇ-ಖಾತಾ ಮೇಳದ ವೇಳೆ ಜೆ.ಪಿ. ನಗರದ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿರುವ ಲ್ಯಾಪ್‌ಟಾಪ್ ಪರದೆಯನ್ನು ಮೂವರು ಅಧಿಕಾರಿಗಳು ನೋಡುತ್ತಿರುವುದು
  • ಬೆಂಗಳೂರು ನಗರ
  • ಬೆಂಗಳೂರು

ಇ-ಖಾತಾ ಮೇಳ: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಒಂದೇ ದಿನ 254 ಹೊಸ ಅರ್ಜಿ ಸ್ವೀಕೃತಿ, 93 ವಿಲೇವಾರಿ

The Bengaluru Live November 8, 2026 5:49 PM
ತಪಾಸಣೆಯ ವೇಳೆ ರಸಗುಲ್ಲಾ ಪಾತ್ರೆಗಳನ್ನು ಪರಿಶೀಲಿಸುತ್ತಿರುವ ಆಹಾರ ಸುರಕ್ಷತಾ ಅಧಿಕಾರಿ
  • ಆರೋಗ್ಯ
  • ರಾಷ್ಟ್ರೀಯ

ಎಫ್‌ಎಸ್‌ಎಸ್‌ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ

The Bengaluru Live November 8, 2026 1:11 PM

Latest Post

ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ, ಮುಂದಿನ ವಾರ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪ್ರತ್ಯೇಕ ಸಭೆ: ಸಿಎಂ ಡಿ.ಕೆ. ಶಿವಕುಮಾರ್ ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ, ಮುಂದಿನ ವಾರ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪ್ರತ್ಯೇಕ ಸಭೆ: ಸಿಎಂ ಡಿ.ಕೆ. ಶಿವಕುಮಾರ್

November 9, 2026 9:13 PM
ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ ಬಿಳಿಚೋಡಿನಲ್ಲಿ ಹೂಗಳೊಂದಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಮುಖಂಡರು
  • ರಾಜಕೀಯ

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ

November 9, 2026 8:14 PM
ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕ ಸರ್ಕಾರದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮೇಜಿನ ಮುಂಭಾಗದಲ್ಲಿ ಕುಳಿತಿರುವ ಸಚಿವರು
  • ರಾಜಕೀಯ

ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ

November 9, 2026 8:14 PM
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ ನಾಮಫಲಕದ ಬಳಿ ಸಚಿವರು ಹಾಗೂ ಅಧಿಕಾರಿಗಳು ನಡೆದು ಬರುತ್ತಿರುವ ದೃಶ್ಯ
  • ಕರ್ನಾಟಕ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ

November 9, 2026 7:22 PM
ಲಾಲ್‌ಬಾಗ್ ಬಳಿ ಸುರಂಗ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ: ದೊಡ್ಡ ಹಳ್ಳ ಇದೆ ಎಂದ ಸಿಎಂ ಶಿವಕುಮಾರ್; ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸುರಂಗ ಯೋಜನೆಗೆ ವಿರೋಧದ ನಡುವೆ ಬಸ್ ನಿಲ್ದಾಣದ ಬಳಿ ಮೈಕ್ರೋಫೋನ್‌ಗಳ ಮುಂದೆ ಮಾತನಾಡುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಲಾಲ್‌ಬಾಗ್ ಬಳಿ ಸುರಂಗ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ: ದೊಡ್ಡ ಹಳ್ಳ ಇದೆ ಎಂದ ಸಿಎಂ ಶಿವಕುಮಾರ್; ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸುರಂಗ ಯೋಜನೆಗೆ ವಿರೋಧದ ನಡುವೆ

November 9, 2026 7:04 PM
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಬಿಳಿ ಉಡುಪಿನಲ್ಲಿರುವ ಡಿ.ಕೆ. ಶಿವಕುಮಾರ್ ಹಳದಿ ಗುಲಾಬಿ ಹೂಗುಚ್ಛವನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್

November 9, 2026 6:53 PM

ನೀವು ತಪ್ಪಿಸಿಕೊಂಡಿರಬಹುದು

ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ, ಮುಂದಿನ ವಾರ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪ್ರತ್ಯೇಕ ಸಭೆ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 9:13 PM
ಬಿಳಿಚೋಡಿನಲ್ಲಿ ಹೂಗಳೊಂದಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಮುಖಂಡರು
  • ರಾಜಕೀಯ

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ

The Bengaluru Live November 9, 2026 8:14 PM
ಕರ್ನಾಟಕ ಸರ್ಕಾರದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮೇಜಿನ ಮುಂಭಾಗದಲ್ಲಿ ಕುಳಿತಿರುವ ಸಚಿವರು
  • ರಾಜಕೀಯ

ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ

The Bengaluru Live November 9, 2026 8:14 PM
ನಾಮಫಲಕದ ಬಳಿ ಸಚಿವರು ಹಾಗೂ ಅಧಿಕಾರಿಗಳು ನಡೆದು ಬರುತ್ತಿರುವ ದೃಶ್ಯ
  • ಕರ್ನಾಟಕ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ

The Bengaluru Live November 9, 2026 7:22 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ, ಮುಂದಿನ ವಾರ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪ್ರತ್ಯೇಕ ಸಭೆ: ಸಿಎಂ ಡಿ.ಕೆ. ಶಿವಕುಮಾರ್
  • ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ
  • ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ
  • ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ
©Copyright 2025 The Bengaluru Live All rights reserved. | MoreNews by AF themes.