Female Constable of Mico Layout Police Station committed suicide in Ramanagara| ರಾಮನಗರದಲ್ಲಿ ಮೈಕೋ ಲೇಔಟ್ ಪೋಲಿಸ್ ಠಾಣೆಯ ಮಹಿಳಾ ಪೇದೆ ಆತ್ಮಹತ್ಯೆ
ರಾಮನಗರ: ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾರೋಹಳ್ಳಿ ತಾಲೂಕಿನ ದ್ಯಾವಸಂದ್ರ ಗ್ರಾಮದಲ್ಲಿ ನಡೆದಿದೆ.
ಮಂಜುಳಾ (29) ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಪೇದೆ. ಬೆಂಗಳೂರಿನ ಮೈಕೋ ಲೇಔಟ್ ಪೋಲಿಸ್ ಠಾಣೆಯಲ್ಲಿ ಮಂಜುಳಾ ಕರ್ತವ್ಯ ನಿರ್ವಹಿಸುತ್ತಿದ್ದರು
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಹಾರೋಹಳ್ಳಿ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
