Home ದಕ್ಷಿಣ ಕನ್ನಡ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಅರಣ್ಯ ಬೆಳೆಸುವ ಕಾರ್ಯಕ್ರಮ – ಸಚಿವ ಅರವಿಂದ ಲಿಂಬಾವಳಿ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಅರಣ್ಯ ಬೆಳೆಸುವ ಕಾರ್ಯಕ್ರಮ – ಸಚಿವ ಅರವಿಂದ ಲಿಂಬಾವಳಿ

94
0

ಧರ್ಮಸ್ಥಳ:

ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಅರಣ್ಯ ಅಭಿವೃದ್ಧಿಗಾಗಿ ಮತ್ತು ವನ್ಯಜೀವಿಗಳ ಸಂತತಿ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಅವರು ಇಂದುಶ್ರೀಕ್ಷೇತ್ರ ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್ ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು , ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು.

Veerendra Hegde Arvind Limbavali1

ಸಭೆಯಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಅರಣ್ಯವನ್ನು ಹಾಗೂ ಅರಣ್ಯದಲ್ಲಿ ಹಣ್ಣು ಹಂಪಲುಗಳ ಲಭ್ಯತೆಯನ್ನು ಹೆಚ್ಚಿಸಿ, ಕಾಡು ಪ್ರಾಣಿಗಳ ಸಂತತಿಯನ್ನು ಹೆಚ್ಚಿಸುವುದು ಅಗತ್ಯ ಇದಕ್ಕೆ ಅರಣ್ಯ ಇಲಾಖೆ ಸಹಕಾರ ಅಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರ ಈ ಸಲಹೆಯ ಬಗ್ಗೆ ಚರ್ಚೆ ನಡೆಸಿದ ಸಚಿವರು, ಈ ಕುರಿತು ಅರಣ್ಯಾಧಿಕಾರಿಗಳು ಸಭೆ ನಡೆಸಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ “ಪೈಲೆಟ್ ಪ್ರಾಜೆಕ್ಟ್” ಕೈಗೊಳ್ಳಲು ಕೂಡಲೇ ಸಿದ್ಧತೆ ಆರಂಭಿಸಲು ಸೂಚಿಸಿದರು.

ಜೂನ್ 05 ರಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು, ಅದಕ್ಕೆ ಪೂರ್ವಭಾವಿಯಾಗಿ ಸ್ಥಳೀಯ ಸ್ವಯಂಸೇವಕರು, ಸಂಘ- ಸಂಸ್ಥೆಗಳನ್ನು ಗುರುತಿಸಬೇಕು, ಸಸಿಗಳನ್ನು ಕ್ರೋಡೀಕರಿಸುವುದು ಹಾಗೂ ಕನಿಷ್ಠ 100 ಎಕರೆ ಜಾಗವನ್ನು ಗುರುತಿಸಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಸೂಚಿಸಿದರು.

ಅಲ್ಲದೇ ಗಿಡ ನೆಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ಥಳೀಯರಿಗೆ ತರಬೇತಿ ನೀಡಲು ತಿಳಿಸಿದರು.

Veerendra Hegde Arvind Limbavali2

ಈ ಎಲ್ಲಾ ಕ್ರಮಗಳು ಪ್ರಾಣಿಗಳಿಗೆ ಆಹಾರ ಲಭ್ಯತೆ ಮತ್ರವಲ್ಲದೇ, ಮನುಷ್ಯರಿಗೆ ಆಮ್ಲಜನಕ ಲಭ್ಯವಾಗಲು ನೆರವಾಗುತ್ತದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮ ಅರಣ್ಯ ಇಲಾಖೆ ಹಾಗೂ ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಸಭೆಗೆ ಮುನ್ನ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಅವರ ಆಶೀರ್ವಾದ ಪಡೆಯಲಾಯಿತು.

LEAVE A REPLY

Please enter your comment!
Please enter your name here