Home Uncategorized Heart Attack: ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತದೆ

Heart Attack: ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತದೆ

2
0
bengaluru

ಚಳಿಗಾಲ(Winter)ದ ಶೀತ ವಾತಾವರಣವು ದೇಹ ತಣ್ಣಗಾಗಿರುತ್ತದೆ. ಇದರಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಅಪಧಮನಿಗಳು ಸಂಕುಚಿತಗೊಳ್ಳುವುದರಿಂದ ಎದೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಸಾಮಾನ್ಯವಾಗಿ ಈ ಋತುವಿನಲ್ಲಿ ರಕ್ತ ಹೆಪ್ಪು ಗಟ್ಟುವಿಕೆ, ಸ್ಥೂಲಕಾಯತೆ, ದೈಹಿಕ ನಿಷ್ಕ್ರಿಯತೆ ಮುಂತಾದ ಕಾಯಿಲೆಗಳು ಕಂಡುಬರುತ್ತದೆ. ಪ್ರಮುಖವಾಗಿ ರಕ್ತ ನಾಳದ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯ ವೈಫಲ್ಯ, ಹಠಾತ್ ಹೃದಯಾಘಾತ, ಮಯೋಕಾರ್ಡಿಯಲ್ ಇನ್ಫಾರ್ಕ್ಷನ್, ಮಹಾಪಧಮನಿಯಲ್ಲಿ ನೋವು ಮುಂತಾದದವುಗಳು ಕಂಡುಬರುತ್ತದೆ.

ಚಳಿಗಾಲ ಮತ್ತು ಹೃದ್ರೋಗಗಳ ನಡುವಿನ ಸ್ಪಷ್ಟವಾದ ಸಂಬಂಧ ಇನ್ನೂ ತಿಳಿದಿಲ್ಲ. ಆದರೆ ಇತರ ಋತುವಿನ ಕಾಲಕ್ಕೆ ಸಂಬಂಧಿಸಿದಂತೆ ಚಳಿಗಾಲದಲ್ಲಿ ಹೆಚ್ಚಾಗಿ ಹೃದಯಾಘಾತಗಳು ಸಂಭವಿಸುತ್ತದೆ. ವಿಶೇಷವಾಗಿ ವಯಸ್ಸಾದವರಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಅಪಾಯವು ಹೆಚ್ಚಾಗಿರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ 2ನೇ ಸ್ಧಾನ

ಹೊರಗಿನ ತಾಪಮಾನವು ದೇಹದ ಉಷ್ಣತೆಗಿಂತ ಕಡಿಮೆ ಇದ್ದಾಗ, ವಿಶೇಷವಾಗಿ 25 ಡಿಗ್ರಿಗಿಂತ ಕಡಿಮೆ ಇದ್ದಾಗ, ದೇಹದ ಮೇಲ್ಮೈ ನಿಮ್ಮನ್ನು ಬೆಚ್ಚಗಾಗಲು ಪ್ರಯತ್ನಿಸುತ್ತದೆ. ಈ ಸಮಯದಲ್ಲಿ ರಕ್ತನಾಳಗಳ ಸಂಕುಚಿತ ಹೆಚ್ಚಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಜನರು ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸಿದಾಗ ವಿಶೇಷವಾಗಿ ಹಬ್ಬಗಳು ಮತ್ತು ಮದುವೆಗಳ ಸಮಯದಲ್ಲಿ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚಿದೆ ಎಂದು ಅಪೋಲೋ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ ಜಯೇಶ್ ಪ್ರಜಾಪತಿ ಹೇಳಿದ್ದಾರೆ.

bengaluru

ಇದನ್ನೂ ಓದಿ: ಸಂಜೆಯ ಚಹಾದೊಂದಿಗೆ ರಸ್ಕ್ ಸೇವಿಸುವ ಅಭ್ಯಾಸವಿದ್ದರೆ ಈ ಸ್ಟೋರಿ ನೀವು ಓದಲೇಬೇಕು

ಹೃದಯಾಘಾತ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಜನರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಜೊತೆಗೆ ಹೆಚ್ಚಿನ ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯಿರುವವರು ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

bengaluru

LEAVE A REPLY

Please enter your comment!
Please enter your name here