Home Uncategorized ISRO: ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿ 1,100 ಕೋಟಿ ರೂ. ಗಳಿಸಿದ ಇಸ್ರೋ

ISRO: ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿ 1,100 ಕೋಟಿ ರೂ. ಗಳಿಸಿದ ಇಸ್ರೋ

8
0
bengaluru

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) 2018ರ ಜನವರಿಯಿಂದ ಈವರೆಗೆ 19 ದೇಶಗಳ 177 ಉಪಗ್ರಹಗಳನ್ನು (Satellites) ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಸುಮಾರು 1,100 ಕೋಟಿ ರೂ. ಗಳಿಸಿದೆ. ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಕೊಲಂಬಿಯಾ, ಫಿನ್​ಲ್ಯಾಂಡ್, ಫ್ರಾನ್ಸ್, ಇಸ್ರೇಲ್, ಇಟಲಿ, ಜಪಾನ್, ಲಿಥುವೇನಿಯಾ, ಲುಕ್ಸೆಂಬರ್ಗ್, ಮಲೇಷ್ಯಾ, ನೆದರ್ಲೆಂಡ್ಸ್, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ, ಸ್ಪೇನ್, ಸ್ವಿಜರ್ಲೆಂಡ್, ಯುನೈಟೆಡ್ ಕಿಂಗ್ಡಂ ಹಾಗೂ ಅಮೆರಿಕದ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ.

ವಿದೇಶಗಳೊಂದಿಗೆ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದ ಅನ್ವಯ ಆ ದೇಶಗಳ ಉಪಗ್ರಹಗಳನ್ನು ಪಿಎಸ್​ಎಲ್​​ವಿ ಹಾಗೂ ಜಿಎಸ್​ಎಲ್​​ವಿ-ಎಂಕೆIII ಮೂಲಕ ಉಡಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ಮತ್ತೆ ಮಂಗಳಯಾನಕ್ಕೆ ಇಸ್ರೋ ಪ್ಲಾನ್; ಜಪಾನ್​ನೊಂದಿಗೆ ಚಂದ್ರ ಗ್ರಹದಲ್ಲಿ ಅನ್ವೇಷಣೆಗೆ ಚಿಂತನೆ

2018ರ ಜನವರಿಯಿಂದ 2022ರ ನವೆಂಬರ್​​ವರೆಗೆ ಇಸ್ರೋ 177 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ವಿದೇಶಿ ವಿನಿಯಮದ ಮೂಲಕ 94 ದಶಲಕ್ಷ ಅಮೆರಿಕನ್ ಡಾಲರ್ ಮತ್ತು 46 ದಶಲಕ್ಷ ಯುರೋ ಗಳಿಸಿದೆ. ಈ ವಿಚಾರವಾಗಿ ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

bengaluru

ಬಾಹ್ಯಾಕಾಶ ಕ್ಷೇತ್ರದಲ್ಲಿ ದೂರದೃಷ್ಟಿಯಿಂದ ಕೂಡಿದ ಅನೇಕ ಸುಧಾರಣೆಗಳಿಗೆ ಸರ್ಕಾರವು 2020ರ ಜೂನ್​ನಲ್ಲಿ ಕ್ರಮ ಕೈಗೊಂಡಿತ್ತು. ಸರ್ಕಾರೇತರ ಸಂಸ್ಥೆಗಳೂ ವಾಣಿಜ್ಯ ಉದ್ದೇಶದೊಂದಿಗೆ ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ವಾಣಿಜ್ಯ ಉದ್ದೇಶದ 36 ಉಪಗ್ರಹಗಳನ್ನೊಳಗೊಂಡ ಎಲ್​ವಿಎಂ3 ಉಡಾವಣೆಗೆ ಕಾರಣವಾಯಿತು. ಇತ್ತೀಚೆಗೆ ಖಾಸಗಿ ಕ್ಷೇತ್ರದ ಸ್ಕೈರೂಟ್ ಏರೋಸ್ಪೇಸ್ ಕೂಡ ಉಪಗ್ರಹ ಉಡಾವಣೆ ಮಾಡಲು ಅನುವು ಮಾಡಿಕೊಟ್ಟಿತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಉಡಾವಣೆ ಯಶಸ್ವಿ: 36 ಉಪಗ್ರಹ ಹೊತ್ತು ಆಕಾಶಕ್ಕೆ ಹಾರಿದ GSLV MkIII

36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳ ಮೊದಲ ವಾಣಿಜ್ಯ ಉಡಾವಣೆಯನ್ನು ಇಸ್ರೋ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿಸಿತ್ತು. ಅತ್ಯಂತ ಭಾರವಾದ ರಾಕೆಟ್ ಜಿಎಸ್​ಎಲ್​​ವಿ-ಎಂಕೆIII ಉಡಾವಣೆ ಯಶಸ್ವಿಯಾಗಿತ್ತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಜಿಎಸ್​​ಎಲ್​ವಿ ರಾಕೆಟ್ ಅನ್ನು ವಾಣಿಜ್ಯ ಉಡಾವಣೆಗೆ ಬಳಸಲಾಗಿತ್ತು.

ಇನ್-ಸ್ಪೇಸ್ ಏಕಗವಾಕ್ಷಿ ವ್ಯವಸ್ಥೆ ಮೂಲಕ ಸರ್ಕಾರೇತರ ಸಂಸ್ಥೆಗಳ ಬಾಹ್ಯಾಕಾಶ ಚಟುವಟಿಕೆಗಳಿಗೆ ಅನುಮತಿ ನೀಡಲು ಕ್ರಮಕೈಗೊಳ್ಳಲಾಗಿತ್ತು. ಇದರಿಂದ ಸ್ಟಾರ್ಟಪ್​ಗಳಿಗೆ ನೆರವಾಗಿದೆ. ಈ ವ್ಯವಸ್ಥೆಯಡಿ ಸುಮಾರು 111 ಸ್ಟಾರ್ಟಪ್​ಗಳು ನೋಂದಣಿ ಮಾಡಿಕೊಂಡಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here