Home ಬೆಂಗಳೂರು ನಗರ ಪತ್ರಕರ್ತ ಗಂಗಾಧರ ಮೂರ್ತಿ ನಿಧನಕ್ಕೆ ಸಿಎಂ ಸವರಾಜ ಬೊಮ್ಮಾಯಿ ಸಂತಾಪ

ಪತ್ರಕರ್ತ ಗಂಗಾಧರ ಮೂರ್ತಿ ನಿಧನಕ್ಕೆ ಸಿಎಂ ಸವರಾಜ ಬೊಮ್ಮಾಯಿ ಸಂತಾಪ

754
0
Karnataka CM Basavaraj Bommai condoles death of journalist Gangadhar Murthy
bengaluru

ಬೆಂಗಳೂರು:

ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ವಿಜಯವಾಣಿ ದಿನಪತ್ರಿಕೆಯ ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯಾಹ್ನ ಕಚೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಇದು ನಿಜಕ್ಕೂ ಆಘಾತಕಾರಿ ಘಟನೆ. ದೇವರು ಗಂಗಾಧರ ಮೂರ್ತಿ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ವನ್ನು ತಡೆಯುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ನೀಡಲಿ ಎಂದು‌ ಸಿಎಂ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲಾರಿ‌ ಪಲ್ಟಿ; ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ ಸಾವು

bengaluru

ಗಂಗಾಧರ ಮೂರ್ತಿ ಒಬ್ಬ ಸೃಜನಶೀಲ ಪತ್ರಕರ್ತರಾಗಿದ್ದರು. ತಮ್ಮ ಕರ್ತವ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರ ಸಾವು ನನಗೆ ಆಘಾತವುಂಟು ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here