Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಮಂಡ್ಯ
  • Karnataka: Vote for Congress to teach BJP a lesson for its betrayal: Chief Minister Siddaramaiah| ಬಿಜೆಪಿ ಮಾಡಿರುವ ದ್ರೋಹಕ್ಕೆ ಪಾಠ ಕಲಿಸಲು ಕಾಂಗ್ರೆಸ್ ಗೆ ಮತ ನೀಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ
  • ಮಂಡ್ಯ

Karnataka: Vote for Congress to teach BJP a lesson for its betrayal: Chief Minister Siddaramaiah| ಬಿಜೆಪಿ ಮಾಡಿರುವ ದ್ರೋಹಕ್ಕೆ ಪಾಠ ಕಲಿಸಲು ಕಾಂಗ್ರೆಸ್ ಗೆ ಮತ ನೀಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ

The Bengaluru Live February 18, 2024 6:46 PM 1 minute read
Karnataka Vote for Congress to teach BJP a lesson for its betrayal Chief Minister Siddaramaiah

Karnataka: Vote for Congress to teach BJP a lesson for its betrayal: Chief Minister Siddaramaiah| ಬಿಜೆಪಿ ಮಾಡಿರುವ ದ್ರೋಹಕ್ಕೆ ಪಾಠ ಕಲಿಸಲು ಕಾಂಗ್ರೆಸ್ ಗೆ ಮತ ನೀಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಮಂಡ್ಯ, (ಮಳವಳ್ಳಿ) ಫೆಬ್ರವರಿ 18: ಕರ್ನಾಟಕಕ್ಕೆ ತೆರಿಗೆಯ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು ಹೇಳುತ್ತಾರೆ. ಈ ದ್ರೋಹದ ವಿರುದ್ಧ ಅವರಿಗೆ ಪಾಠ ಕಲಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅವರು ಇಂದು ಮಳವಳ್ಳಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಸರ್ಕಾರದ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು .

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನವರು ಏನೇ ಆಮಿಷಗಳನ್ನು ತೋರಿಸಿದರೂ ಕೂಡ ಅದಕ್ಕೆ ಮಣಿಯದೇ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಮಳವಳ್ಳಿಯಲ್ಲಿ ನೀಡಿದ್ದ ಭಾರವಸೆಯಂತೆ 470 ಕೋಟಿ ರೂ.ಗಳ ಅಂದಾಜು ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ನೈತಿಕ ಹಕ್ಕಿಲ್ಲ

ಕಳೆದ ಚುನಾವಣೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಗಳನ್ನು ಎಂಟು ತಿಂಗಳಲ್ಲಿ ಜಾರಿ ಮಾಡಿ ಭರವಸೆ ಈಡೇರಿಸಿದ್ದೇವೆ ಎಂದರು. ಬಿಜೆಪಿ, ಜೆಡಿಎಸ್ ನಂತೆ ನಾವು ಮಾತಿಗೆ ತಪ್ಪುವವರಲ್ಲ. ಬಿಜೆಪಿ, ಜೆಡಿಎಸ್ ಈಗ ಒಂದಾಗಿದ್ದಾರೆ. ಆದರೆ ಹಿಂದೊಮ್ಮೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನ ನಾಗಿ ಹುಟ್ಟು ತ್ತೇನೆ ಎಂದಿದ್ದರು. ಈಗ ಕೋಮುವಾದಿ ಬಿಜೆಪಿ ಯವರ ಜೊತೆಗೆ ಸೇರಿದ್ದಾರೆ. ಈಗ ನಾನೇ ಮಗನನ್ನು ಬಿಜೆಪಿ ಗೆ ಕಳುಹಿಸಿದೆ ಎನ್ನುತ್ತಾರೆ. ನಿಮ್ಮ ಜನತಾದಳ ಜಾತ್ಯಾತೀತ ದಲ್ಲಿ ಜಾತ್ಯಾತೀತ ಎನ್ನುವ ಪದ ತೆಗೆಯಿರಿ.ಹಾಗೆ ಇಟ್ಟುಕೊಳ್ಳಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದರು.

ಮುಖ್ಯಮಂತ್ರಿ @siddaramaiah ಅವರು ಮಳವಳ್ಳಿ ತಾಲ್ಲೂಕಿನ ಮಂಚನಹಳ್ಳಿಯಲ್ಲಿ ಕನಕದಾಸರ ಪುತ್ಥಳಿ ಅನಾವರಣಗೊಳಿಸಿ, ಕನಕದಾಸರ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಳವಳ್ಳಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ… pic.twitter.com/hxbDllLHfp

— CM of Karnataka (@CMofKarnataka) February 18, 2024

20 ಸ್ಥಾನಗಳನ್ನು ಗೆಲ್ಲಲಿದೆ

ಬಿಜೆಪಿ ಢೋಂಗಿತನದ ಮಾತುಗಳನ್ನು ಆಡುತ್ತಾರೆ. 28 ಕ್ಕೆ 28 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ. ನೀವು ಆಶೀರ್ವಾದ ಮಾಡುತ್ತೀರಿ ಎಂದು ನಂಬಿಕೆ ಇದೆ ಎಂದರು.

ಶಕ್ತಿ ಯೋಜನೆ: 155 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ
ಜೂನ್ 11 ರಿಂದ ಈವರೆಗೆ ಶಕ್ತಿ ಯೋಜನೆಯಡಿ 155 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರತಿದಿನ 60 ಲಕ್ಷ ಮಹಿಳೆಯರು ಓಡಾಡುತ್ತಿದ್ದಾರೆ ಎಂದು ವಿವರಿಸಿದರು.

ಬಡವರಿಗೆ ಕೇಂದ್ರ ಅಕ್ಕಿ ನೀಡಲಿಲ್ಲ

ಜನರು ಹಸಿದು ಮಲಗಬಾರದು, ರಾಜ್ಯ ಹಸಿವುಮುಕ್ತವಾಗಬೇಕೆಂದು ಅನ್ನಭಾಗ್ಯ ಜಾರಿ ಮಾಡಲಾಯಿತು. ಬಡವರಿಗೆ ಅಕ್ಕಿ ನೀಡದ ಕೇಂದ್ರದ ಬಿಜೆಪಿ ಪಕ್ಷಕ್ಕೆ ಜನರು ಮತ ಹಾಕಬಾರದು.ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದ್ದರು. ನಾನು ಮಂಡಿಸಿದ ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ಇಡಲಾಗಿದೆ. 8 ತಿಂಗಳ ಅವಧಿಯಲ್ಲಿ ಎಲ್ಲ 5 ಗ್ಯಾರಂಟಿಗಳನ್ನು ಸರ್ಕಾರ ಜಾರಿ ಮಾಡಿದೆ ಎಂದರು

ಜಾತ್ಯಾತೀತ ಜೆಡಿಎಸ್ ಜಾತಿವಾದಿಗಳ ಜೊತೆ ಮೈತ್ರಿ

ಜೆಡಿಎಸ್ ಪಕ್ಷದವರು ತಮ್ಮ ಪಕ್ಷ ಸೋಲುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಜಾತ್ಯಾತೀತ ಪಕ್ಷ ಎಂದು ಹೇಳಿಕೊಂಡ ಜೆಡಿಎಸ್ ಅವರು ಜಾತಿವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಎಂಬ ವಿಶ್ವಾಸವಿದೆ. 2013-18 ರವರೆಗಿನ ನಮ್ಮ ಅವಧಿಯಲ್ಲಿ ಹೆಚ್ಚಿನ ಭರವಸೆಗಳನ್ನು ಈಡೇರಿಸಿದ್ದೆವು. ಬಿಜೆಪಿ ಹಾಗೂ ಜೆಡಿಎಸ್ ನಂತೆ ಸುಳ್ಳು ಹೇಳದೆ, ಕಾಂಗ್ರೆಸ್ ಪಕ್ಷ ಜನರಿಗಾಗಿ ಕೈಗೊಂಡಿರುವ ಕಾರ್ಯಕ್ರಮದ ಸತ್ಯದ ಆಧಾರದ ಮೇಲೆ ಮತ ಕೇಳಿ ಎಂದು ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದರು.

ಬಿಜೆಪಿ ಅನ್ವರ್ಥನಾಮ ‘ಸುಳ್ಳಿನ ಪಕ್ಷ’

ರಾಜ್ಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕೊಡುಗೆ ಏನು? ಆದರೆ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ಜನರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಬಿಜೆಪಿಯ ಅನ್ವರ್ಥ ನಾಮವೆಂದರೆ ಸುಳ್ಳಿನ ಪಕ್ಷ. ಸ್ವತಂತ್ರ ಭಾರತದಲ್ಲಿ ಪ್ರಧಾನಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಮತ್ತೊಬ್ಬರಿಲ್ಲ. 15 ಲಕ್ಷ ದೇಶದ ಜನರ ಖಾತೆಗೆ ಹಾಕುವ , ರೈತರ ಆದಾಯ ದುಪ್ಪಟ್ಟು, 7 ಕೋಟಿ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆಯನ್ನು ನೀಡಿ, ಈಡೇರಿಸಲಿಲ್ಲ ಎಂದರು.

About the Author

The Bengaluru Live

Administrator

Visit Website View All Posts

Post navigation

Previous: Despite constant injustice from the Centre, the state is financially sound: Chief Minister Siddaramaiah| ಕೇಂದ್ರದಿಂದ ನಿರಂತರ ಅನ್ಯಾಯ, ನಮ್ಮ ಪಾಲಿನ ನ್ಯಾಯಯುತ ಪಾಲು ಬರದಿದ್ದರೂ ರಾಜ್ಯ ಆರ್ಥಿಕವಾಗಿ ಸುಭದ್ರ : ಮುಖ್ಯಮಂತ್ರಿ ಸಿದ್ದರಾಮಯ್ಯ
Next: Rajya Sabha election: All three Congress candidates will win: CM Siddaramaiah | ಕಾಂಗ್ರೆಸ್ ನ ಮೂರೂ ಅಭ್ಯರ್ಥಿ ಗಳು ಗೆಲ್ಲುತ್ತಾರೆ: ಸಿಎಂ ಸಿದ್ದರಾಮಯ್ಯ

Related Stories

ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆ ಪ್ರತಿಮೆಯ ಬಳಿ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ಮಂಡ್ಯ

ಬರ ನಿವಾರಣೆಗಾಗಿ ಕಾವೇರಿ ಮಾತೆಗೆ ಪ್ರಾರ್ಥನೆ; ಕೆಆರ್‌ಎಸ್‌ನಲ್ಲಿ ಭಕ್ತಿಭಾವ ಮೂಡಿಸಿದ ದಕ್ಷಿಣ ಭಾರತೀಯ ಹಾಗೂ ಗಂಗಾರತಿ ಶೈಲಿಯ ಕಾವೇರಿ ಆರತಿ

The Bengaluru Live October 16, 2026 11:20 PM
ಕೆಆರ್‌ಎಸ್ ಬೃಂದಾವನ ಉದ್ಯಾನದಲ್ಲಿ ಕಾವೇರಿ ಆರತಿ ವೇಳೆ ಡಿ.ಕೆ. ಶಿವಕುಮಾರ್ ಮತ್ತು ಉಷಾ ಪೂಜೆ ಸಲ್ಲಿಸುತ್ತಿರುವುದು
  • ಕರ್ನಾಟಕ
  • ಮಂಡ್ಯ

ಕೆಆರ್‌ಎಸ್ ಬೃಂದಾವನ ಉದ್ಯಾನದಲ್ಲಿ ಕಾವೇರಿ ಆರತಿಗೆ ಚಾಲನೆ; ಪತ್ನಿ ಉಷಾ ಸಮೇತ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಡಿ.ಕೆ. ಶಿವಕುಮಾರ್

The Bengaluru Live October 16, 2026 11:15 PM 1
ಮುತ್ತತ್ತಿ ದುರಂತ: ಜಲಸಮಾಧಿಯಾಗುವ ಕೆಲವೇ ಕ್ಷಣಗಳ ಮುನ್ನದ ಕೊನೆಯ ವಿಡಿಯೋ ವೈರಲ್; ರಕ್ಷಿಸಲು ಹೋಗಿ ಐವರ ದಾರುಣ ಸಾವು
  • ಅಪರಾಧ
  • ಮಂಡ್ಯ

ಮುತ್ತತ್ತಿ ದುರಂತ: ಜಲಸಮಾಧಿಯಾಗುವ ಕೆಲವೇ ಕ್ಷಣಗಳ ಮುನ್ನದ ಕೊನೆಯ ವಿಡಿಯೋ ವೈರಲ್; ರಕ್ಷಿಸಲು ಹೋಗಿ ಐವರ ದಾರುಣ ಸಾವು

The Bengaluru Live June 25, 2026 2:08 PM

Latest Post

ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರೊಂದಿಗೆ ಹಸ್ತಲಾಘವ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ

November 25, 2026 10:58 AM
ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ ಮಳೆಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಾಹನ ಹಾಗೂ ಕೊಡೆ ಹಿಡಿದ ಮಹಿಳೆ; ಸಾಂದರ್ಭಿಕ ಸಂಗ್ರಹ ಚಿತ್ರ
  • ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ

November 25, 2026 10:01 AM
ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

November 24, 2026 10:00 PM
ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

November 24, 2026 9:49 PM
ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್ ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

November 24, 2026 9:28 PM
ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ ಜಪಾನ್ ಪ್ರವಾಸದ ವೇಳೆ ರೈಲಿನಲ್ಲಿ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ

November 24, 2026 9:09 PM

ನೀವು ತಪ್ಪಿಸಿಕೊಂಡಿರಬಹುದು

ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರೊಂದಿಗೆ ಹಸ್ತಲಾಘವ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ

The Bengaluru Live November 25, 2026 10:58 AM
ಮಳೆಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಾಹನ ಹಾಗೂ ಕೊಡೆ ಹಿಡಿದ ಮಹಿಳೆ; ಸಾಂದರ್ಭಿಕ ಸಂಗ್ರಹ ಚಿತ್ರ
  • ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ

The Bengaluru Live November 25, 2026 10:01 AM
ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

The Bengaluru Live November 24, 2026 10:00 PM
ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

The Bengaluru Live November 24, 2026 9:49 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಜಪಾನ್‌ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಭೇಟಿ ಮಾಡಿದ ಸಿಎಂ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಆಹ್ವಾನ
  • ಬೆಂಗಳೂರಿನಲ್ಲಿ ನವೆಂಬರ್ 25ರಿಂದ 27ರವರೆಗೆ ಹಗುರ ಮಳೆ ಸಾಧ್ಯತೆ: ಐಎಂಡಿ
  • ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ
  • ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ
©Copyright 2025 The Bengaluru Live All rights reserved. | MoreNews by AF themes.