Home ಮಂಡ್ಯ ನಾಗಮಂಗಲ ಗಲಭೆ | ಯಾವುದೇ ಜಾತಿ, ಧರ್ಮದವರ ಆಗಿದ್ದರೂ ಕ್ರಮ: ಸಿದ್ದರಾಮಯ್ಯ

ನಾಗಮಂಗಲ ಗಲಭೆ | ಯಾವುದೇ ಜಾತಿ, ಧರ್ಮದವರ ಆಗಿದ್ದರೂ ಕ್ರಮ: ಸಿದ್ದರಾಮಯ್ಯ

18
0
Nagamangala Riot Mandya

ಬೆಂಗಳೂರು: ನಾಗಮಂಗಲ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಮುಸ್ಲೀಂ, ಹಿಂದೂ ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದು, ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಆರೋಪಿಗಳು ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

LEAVE A REPLY

Please enter your comment!
Please enter your name here