ಸಂಗ್ರಹ ಚಿತ್ರ: ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ. ಚಿತ್ರ: ಜಿಬಿಎ
ಬೆಂಗಳೂರು: ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ. ಡಿಸೆಂಬರ್ 5ರಿಂದ ಪ್ರತಿ ಶನಿವಾರ ಪುನರಾರಂಭವಾಗಲಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ, ನವೆಂಬರ್ 28ರಂದು ಸಾರ್ವಜನಿಕ ರಜೆ ಇರುವ ಹಿನ್ನೆಲೆಯಲ್ಲಿ ಅಂದು ಜಿಬಿಎ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಇ-ಖಾತಾ ಮೇಳವನ್ನು ನಡೆಸಲಾಗುವುದಿಲ್ಲ.
ಇ-ಖಾತಾ ಸಂಬಂಧಿತ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವುದು, ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸುವುದು ಹಾಗೂ ಅರ್ಜಿದಾರರಿಗೆ ಅಗತ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಪ್ರತಿ ಶನಿವಾರ ಮೇಳ ಆಯೋಜಿಸಲಾಗುತ್ತಿದೆ. ನವೆಂಬರ್ 28ರ ಕಾರ್ಯಕ್ರಮವನ್ನು ಹೊರತುಪಡಿಸಿ, ಡಿಸೆಂಬರ್ 5ರಿಂದ ಇ-ಖಾತಾ ಓಪನ್ ಹೌಸ್ ಜಿಬಿಎ ವ್ಯಾಪ್ತಿಯ 62 ಎಆರ್‌ಒ ಕಚೇರಿಗಳಲ್ಲಿ ಪ್ರತಿ ಶನಿವಾರ ಎಂದಿನಂತೆ ಪುನರಾರಂಭವಾಗಲಿದೆ.
ಇದನ್ನೂ ಓದಿ:
