Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • 50 ಸ್ಥಳೀಯ ಸಂಸ್ಥೆಗಳ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ ಸ್ವೀಕಾರ; ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ: ಸಚಿವ ಬಿ.ಎಸ್.ಸುರೇಶ್
  • ಬೆಳಗಾವಿ
  • ಕರ್ನಾಟಕ

50 ಸ್ಥಳೀಯ ಸಂಸ್ಥೆಗಳ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ ಸ್ವೀಕಾರ; ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ: ಸಚಿವ ಬಿ.ಎಸ್.ಸುರೇಶ್

The Bengaluru Live December 13, 2024 1:15 PM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಳಗಾವಿ ಸುವರ್ಣಸೌಧ,ಡಿ.13(ಕರ್ನಾಟಕ ವಾರ್ತೆ): ರಾಜ್ಯದ ವಿವಿಧ ಕಡೆಗಳಿಂದ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ, ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ, ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ 50ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದ ವೇಳೆ ಅವರು ಸದನಕ್ಕೆ ಮಾಹಿತಿ ನೀಡಿದರು.
20,000 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದರೆ ಮಾತ್ರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬಹುದು. ಇದರೊಂದಿಗೆ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾದ ಮೇಲೆ ಅಗತ್ಯ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಅನುದಾನವನ್ನು ಸಹ ನೀಡಬೇಕು. ಸ್ವೀಕೃತವಾದ ಎಲ್ಲ ಪ್ರಸ್ತಾವನೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ಭರವಸೆ ನೀಡಿದರು.

ಗೋಕರ್ಣ ಪಟ್ಟಣ ಪಂಚಾಯಿತಿ ರಚನೆಗೆ ಮನವಿ ಕುಮುಟ ಕ್ಷೇತ್ರದ ಶಾಸಕ ದಿನಕರ್ ಕೇಶವ್ ಶೆಟ್ಟಿಯವರು ಧಾರ್ಮಿಕ ಶ್ರದ್ಧಾ ಕ್ಷೇತ್ರವಾದ ಗೋಕರ್ಣ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆ ಏರಿಸುವಂತೆ ಕೋರಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರಲ್ಲಿ ಕೋರಿದರು.

ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಮಾತಿಗೆ ಧ್ವನಿಗೂಡಿಸಿದ ಶಾಸಕರುಗಳಾದ ವಿಜಯೇಂದ್ರ, ಡಾ.ಅಶ್ವತ್ ನಾರಾಯಣ, ಸುನೀಲ್ ಕುಮಾರ್, ಭೈರತಿ ಬಸವರಾಜ್ ಅವರು ಗೋಕರ್ಣ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಸರ್ಕಾರ ಕೂಡಲೇ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು. ಲಕ್ಷಾಂತರ ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಾರೆ. ಆದ್ದರಿಂದ ಸರ್ಕಾರ ಸ್ವಚ್ಛತೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. 2011 ರ ಜನಗಣತಿಯಂತೆ ಗೋಕರ್ಣದಲ್ಲಿ 13,539 ಜನಸಂಖ್ಯೆ ಇದೆ. ವಿಸ್ತೀರ್ಣ 33.1 ಚದರ ಕಿ.ಮೀ. ಇದ್ದು, ಜನಸಾಂದ್ರತೆ ಪ್ರತೀ ಚದರ ಕಿ.ಮೀ.ಗೆ 409 ಇದೆ. 2015ರಲ್ಲಿ ಸಚಿವ ಸಂಪುಟ ಸಭೆಯಲ್ಲಿ 2011ರ ಜನಗಣತಿಯಲ್ಲಿ 15,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪಂಚಾಯಿತಿಗಳನ್ನು ಮಾತ್ರ ಮೇಲ್ದರ್ಜೆಗೆ ಏರಿಸಲು ಪರಿಗಣಿಸಲು ನಿರ್ಧರಿಸಲಾಗಿದೆ. ಆದಾಗ್ಯೂ ಗೋಕರ್ಣದ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಶಾಸಕರು, ಅಧಿಕಾರಿಗಳೊಂದಗೆ ಸಭೆ ನಡೆಸಿ ಸಕಾರಾತ್ಮವಾಗಿ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಭರವಸೆ ನೀಡಿದರು.

ಇದೇ ವೇಳೆ ಶಾಸಕ ಪ್ರಭು ಚವ್ಹಾಣ್ ಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಹಾಗೂ ಕಮಲ್‌ನಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವ ರಹೀಂ ಖಾನ್ ಅವರಲ್ಲಿ ಮನವಿ ಮಾಡಿದರು. 

About the Author

The Bengaluru Live

Administrator

Visit Website View All Posts

Post navigation

Previous: ಕರ್ನಾಟಕ ವಿಧಾನಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಮೊದಲನೇ ವರದಿ ಸರ್ಕಾರಕ್ಕೆ ಸಲ್ಲಿಕೆ: ಪಿ.ಎಂ.ನರೇಂದ್ರಸ್ವಾಮಿ
Next: ಗ್ರಾಮ ಪಂಚಾಯತ್ ಸದಸ್ಯರ ಮಾಸಿಕ ಗೌರವ ಧನ ಹೆಚ್ಚಳ ಬಗ್ಗೆ ಸಿಎಂ ಬಳಿ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ

Related Stories

ಉದ್ದನೆಯ ಮೇಜಿನ ಎದುರು ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳ ಜೊತೆ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಒಬ್ಬ ಸಚಿವ
  • ಕರ್ನಾಟಕ

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು

The Bengaluru Live November 19, 2026 5:38 PM
ಮೈಕ್‌ಗಳಿರುವ ವೇದಿಕೆಯ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಮೇಕೆದಾಟು ವಿಚಾರದಲ್ಲಿ ಇಡೀ ರಾಜ್ಯ ಒಂದಾಗಿದೆ, ಕುಡಿಯುವ ನೀರಿಗೆ ಮಾತ್ರ ಬಳಕೆ, ವ್ಯವಸಾಯಕ್ಕಲ್ಲ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 19, 2026 3:36 PM
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೈದ್ಯಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಫಲಕದ ಮುಂದೆ ಬೆಳಗಿದ ದೀಪದ ಸುತ್ತ ನಿಂತಿರುವ ಎಂಟು ಮಂದಿ
  • ಕರ್ನಾಟಕ

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು

The Bengaluru Live November 19, 2026 2:37 PM

Latest Post

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

November 20, 2026 9:46 AM
ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

November 20, 2026 9:44 AM
ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

November 20, 2026 9:30 AM
ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು ಬೆಂಗಳೂರು ಟೆಕ್ ಸಮ್ಮಿಟ್‌ನ ಹಿನ್ನೆಲೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಐವರು ಭಾಷಣಕಾರರು

ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು

November 20, 2026 9:18 AM
ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ ಬೆಂಗಳೂರು ಟೆಕ್ ಸಮ್ಮಿಟ್‌ನ ಸಂವಾದ ಗೋಷ್ಠಿಯ ಪರದೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಆರು ಮಂದಿ ಭಾಗವಹಿಸಿದವರು

ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ

November 20, 2026 9:16 AM
ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್ ಕನ್ನಡ ರಾಜ್ಯೋತ್ಸವ ಬ್ಯಾನರ್ ಮುಂದೆ ವೇದಿಕೆಯಲ್ಲಿ ಹಳದಿ ಮತ್ತು ಕೆಂಪು ಉಡುಪಿನ ಮಕ್ಕಳು ಮಾನವ ಗೋಪುರ ರಚಿಸಿರುವುದು

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್

November 20, 2026 12:34 AM

ನೀವು ತಪ್ಪಿಸಿಕೊಂಡಿರಬಹುದು

ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

The Bengaluru Live November 20, 2026 9:46 AM
ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

The Bengaluru Live November 20, 2026 9:44 AM
ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

The Bengaluru Live November 20, 2026 9:30 AM
ಬೆಂಗಳೂರು ಟೆಕ್ ಸಮ್ಮಿಟ್‌ನ ಹಿನ್ನೆಲೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಐವರು ಭಾಷಣಕಾರರು

ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು

The Bengaluru Live November 20, 2026 9:18 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ
  • ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ
  • ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ
  • ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು
©Copyright 2025 The Bengaluru Live All rights reserved. | MoreNews by AF themes.