Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಕರ್ನಾಟಕ ವಿಧಾನಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಮೊದಲನೇ ವರದಿ ಸರ್ಕಾರಕ್ಕೆ ಸಲ್ಲಿಕೆ: ಪಿ.ಎಂ.ನರೇಂದ್ರಸ್ವಾಮಿ
  • ರಾಜಕೀಯ
  • ಕರ್ನಾಟಕ
  • ಬೆಳಗಾವಿ

ಕರ್ನಾಟಕ ವಿಧಾನಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಮೊದಲನೇ ವರದಿ ಸರ್ಕಾರಕ್ಕೆ ಸಲ್ಲಿಕೆ: ಪಿ.ಎಂ.ನರೇಂದ್ರಸ್ವಾಮಿ

The Bengaluru Live December 13, 2024 1:10 PM 1 minute read
ಕರ್ನಾಟಕ ವಿಧಾನಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಮೊದಲನೇ ವರದಿ ಸರ್ಕಾರಕ್ಕೆ ಸಲ್ಲಿಕೆ: ಪಿ.ಎಂ.ನರೇಂದ್ರಸ್ವಾಮಿ

ಕರ್ನಾಟಕ ವಿಧಾನಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಮೊದಲನೇ ವರದಿ ಸರ್ಕಾರಕ್ಕೆ ಸಲ್ಲಿಕೆ: ಪಿ.ಎಂ.ನರೇಂದ್ರಸ್ವಾಮಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಳಗಾವಿ ಸುವರ್ಣಸೌಧ ಡಿ.13 (ಕ.ವಾ.): ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2024-25ನೇ ಸಾಲಿನ ಮೊದಲನೇ ವರದಿಯನ್ನು ಡಿಸೆಂಬರ್ 12ರಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನಗಳಲ್ಲಿ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಆಗಿರುವ ವಿಧಾನಸಭೆ ಸದಸ್ಯರಾದ ಪಿ.ಎಂ. ನರೇಂದ್ರಸ್ವಾಮಿ ಅವರು ಹೇಳಿದರು. ಸುವರ್ಣಸೌಧದ ಪಶ್ಚಿಮದ್ವಾರದ ಬಳಿ ಸಮಿತಿಯ ಸದಸ್ಯರೊಂದಿಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಈ ಮಾಹಿತಿ ನೀಡಿದರು.

ಸಮಿತಿಯು ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಗದಗ, ಧಾರವಾಡ, ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಮಾಡಿ ಅನೇಕ ಲೋಪದೋಷಗಳನ್ನು ಪರಿಶೀಲಿಸಿದೆ. ಒಂದೇ ಮನೆಯ ಮಕ್ಕಳಂತೆ ಎಲ್ಲ ಪಕ್ಷದವರು ಒಗ್ಗೂಡಿ ಈ ವರದಿಯನ್ನು ಸಿದ್ಧಪಡಿಸಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಹಾಗೂ ಅವರ ಭವಿಷ್ಯತ್ತನ್ನು ರೂಪಿಸುವುದಕ್ಕೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಆಗುವುದಕ್ಕೆ ಎಲ್ಲೆಲ್ಲಿ ಲೋಪಗಳಿದ್ದಾವೆ ಎಂಬುದನ್ನು ಪತ್ತೆ ಮಾಡಿ ಸಾಕಷ್ಟು ಶ್ರಮವಹಿಸಿ ಈ ವರದಿಯನ್ನು ತಯಾರಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಎಸ್‌ಸಿಎಸ್‌ಪಿ ಮತ್ತು ಟಿಎಸ್ಪಿ ಅನುದಾನವನ್ನು ಕಡ್ಡಾಯವಾಗಿ ಈ ಸಮುದಾಯವರಿಗೆ ಬಳಸಬೇಕು. ಹೊರಗುತ್ತಿಗೆಯಲ್ಲಿ ಮೀಸಲಾತಿಯನ್ನು ಕಡ್ಡಾಯ ಪಾಲಿಸಬೇಕು., ಎಲ್ಲಾ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಎಸ್ಸಿ ಮತ್ತು ಎಸ್ಟಿ ಸಮುದಾಯವರಿಗೆ 100 ದಿನಗಳ ಉದ್ಯೋಗ ಖಾತ್ರಿ ನೀಡಬೇಕು. ಸ್ಮಶಾನಭೂಮಿ ಇಲ್ಲದಿರುವ ಕಡೆಗಳಲ್ಲಿ ಕೂಡಲೇ ಒದಗಿಸಬೇಕು. ಭೂ ಒಡೆತನ ಯೋಜನೆಯಡಿ ಜಮೀನು ನೀಡಬೇಕು. ನಿವೇಶನ ವಸತಿ ರಹಿತರಿಗೆ ಕೂಡಲೇ ಸೌಕರ್ಯ ಒದಗಿಸಬೇಕು. ಪ್ರಾಧಿಕಾರಗಳಿಂದ ಬರುವ ಆದಾಯದಲ್ಲಿ ಎಸ್ಸಿ ಎಸ್ಟಿ ಹಾಸ್ಟೇಲಗಳಿಗೆ ಬೆಡ್, ಕಾಟ, ದಿಂಬು ಒದಗಿಸಬೇಕು., ಹೌಸಿಂಗ್ ಸೊಸೈಟಿಗಳ ಬಡಾವಣೆಗಳಲ್ಲಿ ಸೈಟಗಳ ಮೀಸಲಾತಿ ನೀಡಬೇಕು ಎಂಬುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಮಿತಿಯು ಪರಿಶೀಲಿಸಿ ವರದಿ ನೀಡಿದೆ ಎಂದು ಅವರು ತಿಳಿಸಿದರು.

ಸಮಿತಿಯ ಅಧ್ಯಕ್ಷರಾದ ತಾವು ಮತ್ತು ಸಮಿತಿಯ ಎಲ್ಲ ಸದಸ್ಯರು ಸೇರಿ ಹಲವಾರು ತನಿಖೆಗಳನ್ನು ನಡೆಸಿ, ಹಲವಾರು ಜಿಲ್ಲೆಗಳ ಪ್ರವಾಸ ನಡೆಸಿ ಹಲವಾರು ಇಲಾಖೆಗಳನ್ನು ವಿಮರ್ಶೆ ಮಾಡಿ ಅಲ್ಲಿರುವ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಗಿರುವ ಲೋಪ ಮತ್ತು ಎಸ್ಸಿ ಎಸ್ಟಿ ಕಾಯ್ದೆಯನ್ನು ಸದ್ಬಳಕೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಆಗಿರುವ ಲೋಪಗಳನ್ನು ಹಾಗೂ ವಿಶೇಷವಾಗಿ ಹಾಸ್ಟೇಲ್ ಮತ್ತು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ದೊರಕಬೇಕಾದ ಸೌಲಭ್ಯಗಳಲ್ಲಿ ಆಗಿರುವಂತಹ ಕೊರತೆ ಬಗ್ಗೆ ಸಮಿತಿಯು ವಿಶೇಷವಾಗಿ ಈ ವರದಿಯನ್ನು ತಯಾರಿ ಮಾಡಿ ಹಲವಾರು ಮಾರ್ಪಾಟುಗಳನ್ನು ಸೂಚಿಸಿದೆ.
ಎಸ್ಸಿಪಿ ಟಿಎಸ್ಪಿ ಕಾಯ್ದೆಯಡಿ ಬರುವ ರೀತಿಯಲ್ಲಿ ಹೊರಗುತ್ತಿಗೆ ಮೀಸಲಾತಿ ಇರಬೇಕು, ಹೊರಗುತ್ತಿಗೆ ಸಿಬ್ಬಂದಿಗೆ ನೀಡುವ ವೇತನದ ಬಗ್ಗೆ ಜೊತೆಗೆ ಹಾಸ್ಟೇಲ್ ಮತ್ತು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಸಮಿತಿಯು ತೀಕ್ಷ÷್ಣವಾಗಿ ಪರಿಶೀಲನೆ ನಡೆಸಿ ಮಾರ್ಗೋಪಾಯ ಕಂಡು ಹಿಡಿದು ವರದಿಯಲ್ಲಿ ನೀಡಿದೆ ಎಂದು ಅವರು ತಿಳಿಸಿದರು.

ವಿಶೇಷವಾಗಿ ಉತ್ತರ ಕರ್ನಾಟಕ ಏಳೆಂಟು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದಾಗ ಶೋಚನೀಯ ಅಂಶವೊAದು ಸಮಿತಿಯ ಗಮನಕ್ಕೆ ಬಂದಿತು. ಮಾಜಿ ದೇವದಾಸಿಯರಿಗೆ ಪೂರ್ಣ ಪ್ರಮಾಣದಲ್ಲಿ ಪುನರ್ವಸತಿಯನ್ನು ಕಲ್ಪಿಸದೇ ಇರುವುದನ್ನು ಗಮನಿಸಿ ಈ ಬಗ್ಗೆ ತೀಕ್ಷ÷್ಣವಾಗಿ ಪ್ರತಿಕ್ರಿಯೆ ನೀಡಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸೂಕ್ತವಾದ ಮಾರ್ಗದರ್ಶನವನ್ನು ಮಾಡಿದ್ದೇವೆ. ಸಾವಿರಾರು ಜನ ಮಾಜಿ ದೇವದಾಸಿಯರು ವಸತಿ ಇಲ್ಲದೇ ನಿವೇಶನ ಇಲ್ಲದೇ ಹಳೆಯ ಪದ್ಧತಿಯಂತೆಯೇ ಬದುಕುತ್ತಿರುವುದರ ಬಗ್ಗೆ ನಾವು ವರದಿಯಲ್ಲಿ ಬೆಳಕು ಚೆಲ್ಲಿದ್ದೇವೆ. ಈ ಬಗ್ಗೆ ಸ್ಪಷ್ಟವಾದ ವಿಚಾರಗಳನ್ನು ಮತ್ತು ದತ್ತಾಂಶಗಳನ್ನು ಕ್ರೋಢೀಕರಿಸಿ ವರದಿಯಲ್ಲಿ ನೀಡಿದ್ದೇವೆ ಎಂದರು.

ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವುದಕ್ಕೆ ಸಮಿತಿಯು ಸಲಹೆ ಮಾಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆಗೂ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆಗೂ ಅಂತರ ಇರಬಾರದು. ಈ ನಿಟ್ಟಿನಲ್ಲಿ ಇನ್ಮುಂದೆ ಕಂಪ್ಯೂಟರ್ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಎಸ್‌ಡಿಎಂಸಿಗಳ ಭಾಗವಹಿಸುವಿಕೆಯ ಜೊತೆಗೆ ಸ್ಥಳೀಯ ಅನುದಾನವನ್ನು ಕ್ರೋಢೀಕರಿಸಿ ಟ್ಯಾಬ್ ಗಳನ್ನು ನೀಡುವುದು ಮತ್ತು ಸಿಎಸ್‌ಆರ್ ಅನುದಾನ ಲಭ್ಯತೆವಿರುವ ಕಡೆಗಳಲ್ಲಿ ಅದನ್ನು ಬಳಸಿಕೊಂಡು ಗ್ರಾಮೀಣ ಶಿಕ್ಷಣವನ್ನು ಮೇಲೆತ್ತಬೇಕು ಎಂದು ಸಮಿತಿಯು ಸಲಹೆ ಮಾಡಿದೆ ಎಂದರು.

ಸಮಿತಿಯ ಸದಸ್ಯರು ಜಿಲ್ಲೆಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಮಾಹಿತಿ ಪಡೆದಾಗ ಅಲ್ಲಿ ವಿದ್ಯಾಭ್ಯಾಸ ಮಾಡುವ ಒಟ್ಟು ಮಕ್ಕಳ ಪೈಕಿ ಶೇ.50ಕ್ಕಿಂತ ಹೆಚ್ಚು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆಂಬ ಅಂಶ ತಿಳಿದು ಬಂದಿರುವುದರಿAದ ಸೌಲಭ್ಯ ಕಲ್ಪಿಸುವುದರ ಬಗ್ಗೆ ಸಮಿತಿಯು ಕೆಲವು ಮಾರ್ಪಾಟುಗಳಿಗೆ ವರದಿಯಲ್ಲಿ ಅವಕಾಶ ಮಾಡಿದೆ ಎಂದು ತಿಳಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ಪಡೆದುಕೊಳ್ಳುವ ವ್ಯವಸ್ಥೆಯ ಬಗ್ಗೆ ಸಮಿತಿಯು ಪರಿಶೀಲಿಸಿದೆ. ಸಿಬ್ಬಂದಿಗೆ ಸಿಗಬೇಕಾದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಏಜೆನ್ಸಿಯವರು ಉಳಿಸಿಕೊಳ್ಳುವುದು ತಪ್ಪಬೇಕು. ಹೊರಗುತ್ತಿಗೆ ನೌಕರರಿಗೆ ಏಜೆನ್ಸಿ ಮೂಲಕ ಹಣ ನೀಡುವ ಬದಲು ನೇರವಾಗಿ ಇಲಾಖೆಗಳೇ ಸಿಬ್ಬಂದಿಯನ್ನು ನೇಮಿಸಿಕೊಂಡು ವೇತನ ಪಾವತಿಸುವುದರಿಂದ ನೌಕರರಿಗೆ ಹೆಚ್ಚುವರಿ ಹಣ ಸಿಗುತ್ತದೆ ಎಂಬುದಾಗಿ ಸಮಿತಿಯು ವರದಿಯಲ್ಲಿ ತಿಳಿಸಿದೆ ಎಂದರು.

ನಾನು ಅಧ್ಯಕ್ಷರಾದಂತಹ ಪ್ರತಿಯೊಂದು ಸಂದರ್ಭದಲ್ಲಿ ನೀಡಿದ ವರದಿಗಳು ಪರಿಣಾಮಕಾರಿಯಾಗಿ ಜಾರಿಯಾಗಿವೆ. ಬಜೆಟ್‌ನಲ್ಲಿ ಮತ್ತು ಕಾರ್ಯಕ್ರಮ ಅನುಷ್ಠಾನದಲ್ಲಿ ಸರ್ಕಾರವು ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. 2013ರ ಎಸ್ಸಿಪಿ ಟಿಎಸ್ಪಿ ಕಾಯ್ದೆಯಡಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತಹ ಶಿಫಾರಸ್ಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಥಾವತ್ತಾಗಿ ಜಾರಿಗೊಳಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರು ಮತ್ತು ಶಾಸಕರಾದ ದುರ್ಯೋದನ ಎಂ ಐಹೊಳೆ, ಕೃಷ್ಣ ನಾಯ್ಕ ಸೇರಿದಂತೆ ಇನ್ನೀತರ ಸದಸ್ಯರು ಇದ್ದರು.

About the Author

The Bengaluru Live

Administrator

Visit Website View All Posts

Post navigation

Previous: ದೇವದಾಸಿ ಮಹಿಳೆಯರಿಗೂ ಗೃಹಲಕ್ಷ್ಮೀ ನೆರವು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Next: 50 ಸ್ಥಳೀಯ ಸಂಸ್ಥೆಗಳ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ ಸ್ವೀಕಾರ; ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ: ಸಚಿವ ಬಿ.ಎಸ್.ಸುರೇಶ್

Related Stories

ಉದ್ದನೆಯ ಮೇಜಿನ ಎದುರು ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳ ಜೊತೆ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಒಬ್ಬ ಸಚಿವ
  • ಕರ್ನಾಟಕ

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು

The Bengaluru Live November 19, 2026 5:38 PM
ಮೈಕ್‌ಗಳಿರುವ ವೇದಿಕೆಯ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಮೇಕೆದಾಟು ವಿಚಾರದಲ್ಲಿ ಇಡೀ ರಾಜ್ಯ ಒಂದಾಗಿದೆ, ಕುಡಿಯುವ ನೀರಿಗೆ ಮಾತ್ರ ಬಳಕೆ, ವ್ಯವಸಾಯಕ್ಕಲ್ಲ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 19, 2026 3:36 PM
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೈದ್ಯಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಫಲಕದ ಮುಂದೆ ಬೆಳಗಿದ ದೀಪದ ಸುತ್ತ ನಿಂತಿರುವ ಎಂಟು ಮಂದಿ
  • ಕರ್ನಾಟಕ

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು

The Bengaluru Live November 19, 2026 2:37 PM

Latest Post

ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ ನೀಲಿ ಆಕಾಶದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದ ಬಳಿ ಇರುವ ಬಸವಣ್ಣನವರ ಕಂಚಿನ ಅಶ್ವಾರೂಢ ಪ್ರತಿಮೆ
  • Uncategorized

ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ

November 20, 2026 10:39 AM
ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

November 20, 2026 9:46 AM
ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

November 20, 2026 9:44 AM
ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

November 20, 2026 9:30 AM
ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು ಬೆಂಗಳೂರು ಟೆಕ್ ಸಮ್ಮಿಟ್‌ನ ಹಿನ್ನೆಲೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಐವರು ಭಾಷಣಕಾರರು

ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು

November 20, 2026 9:18 AM
ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ ಬೆಂಗಳೂರು ಟೆಕ್ ಸಮ್ಮಿಟ್‌ನ ಸಂವಾದ ಗೋಷ್ಠಿಯ ಪರದೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಆರು ಮಂದಿ ಭಾಗವಹಿಸಿದವರು

ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ

November 20, 2026 9:16 AM

ನೀವು ತಪ್ಪಿಸಿಕೊಂಡಿರಬಹುದು

ನೀಲಿ ಆಕಾಶದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದ ಬಳಿ ಇರುವ ಬಸವಣ್ಣನವರ ಕಂಚಿನ ಅಶ್ವಾರೂಢ ಪ್ರತಿಮೆ
  • Uncategorized

ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ

The Bengaluru Live November 20, 2026 10:39 AM
ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

The Bengaluru Live November 20, 2026 9:46 AM
ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

The Bengaluru Live November 20, 2026 9:44 AM
ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

The Bengaluru Live November 20, 2026 9:30 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ
  • ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ
  • ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ
  • ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ
©Copyright 2025 The Bengaluru Live All rights reserved. | MoreNews by AF themes.