Protest; ಕುಡಿಯುವ ನೀರಿಗಾಗಿ ಹಾಹಾಕಾರ, ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆಯಿಂದ ಪ್ರೊಟೆಸ್ಟ್
ಬೆಳಗಾವಿ;- ಜಿಲ್ಲೆಯ ರಾಯಬಾಗ ತಾಲೂಕೂ ಹಿಂದುಳಿದ ಪ್ರದೇಶ ಆಗಿದ್ದು ಅಭಿವೃದ್ಧಿಯಲ್ಲಿ ತೀರ ಕಡಿಮೆ ಅದರಲ್ಲೂ ಈ ಸಲ್ ಮುಂಗಾರು ಮಳೆ ಇಲ್ಲದೆ
ರಾಯಬಾಗ ತಾಲೂಕಿನ ಹಳ್ಳಿಗಳು ಕುಡಿಯಲು ನೀರು ಇಲ್ಲದೆ ನಲುಗಿ ಹೋಗಿವೆ.
ರಾಜ್ಯಕಾರಣಿಗಳ ಇಚ್ಚಾ ಶಕ್ತಿ ಕೊರತೆ ಹಿನ್ನೆಲೆ ರಾಯಭಾಗವನ್ನು ಸಂಪೂರ್ಣವಾಗಿ ಬರಗಾಲದ ಛಾಯೆನ್ನಾಗಿ ಮಾಡಿಬಿಟ್ಟಿದ್ದಾರೆ ಘಟಪ್ರಭಾ ಬಲದಂಡೆ ಕಾಲುವೆಯ ಮುಖಾಂತರ ಹುಳ್ಯಲ ಕೇರಿಗೆ ಬರುವಂತಹ ನೀರನ್ನು ಚಿಕ್ಕೋಡಿಯ ರಾಜಕೀಯ ನಾಯಕರು ಲಾಭಿಯನ್ನ ಬಳಸಿಕೊಂಡು ಚಿಕ್ಕೋಡಿ ನನದಿವಾಡಿವರೆಗೂ ಕಾಲುವೆ ಮುಖಾಂತರ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಆದರೆ ರಾಯಬಾಗ ತಾಲೂಕಿನ ರೈತರನ್ನ ಕಡೆಗಣಿಸುತ್ತಿದ್ದಾರೆ ಎಂದು ರಾಯಬಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಶೋಕ್ ಅಂಗಡಿ ಹಾಗೂ ರಾಯಬಾಗ್ ವಕೀಲರ ಸಂಘ ಇವತ್ತು ರಾಯಭಾಗ ಸರ್ಕಲನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಎಚ್ಚರಿಕೆ ಕೊಟ್ಟಿದ್ದಾರೆ
ಸತತವಾಗಿ ಹರಿಯಬೇಕಿದ್ದ ಘಟಪ್ರಭಾ ರಾಯಬಾಗ್ ಬಲದಂಡೆ ಕಾಲುವೆ ಮುಖಾಂತರ ನೀರನ್ನು ಹರಿಸಿ ಇಲ್ಲವಾದರೆ ಸಂಪೂರ್ಣವಾಗಿ ರಾಯಭಾಗ ಬಂದ್ ಮಾಡಿ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡುತ್ತೇವೆ ಎಂದು ಹೇಳಿದರು
The post Protest; ಕುಡಿಯುವ ನೀರಿಗಾಗಿ ಹಾಹಾಕಾರ, ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆಯಿಂದ ಪ್ರೊಟೆಸ್ಟ್ appeared first on Ain Live News.