Purnima Srinivas; ಹಿಂದುತ್ವ ಅನ್ನೋದು ಒಂದು ಪಕ್ಷಕ್ಕೆ ಸೀಮಿತವಲ್ಲ – ಪೂರ್ಣಿಮಾ ಶ್ರೀನಿವಾಸ್
ತುಮಕೂರು;- ಹಿಂದುತ್ವ ಅನ್ನೋದು ಒಂದು ಪಕ್ಷಕ್ಕೆ ಸೀಮಿತ ಆಗಿರೋದಲ್ಲ ಎಂದು ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪ್ರತಿಯೊಬ್ಬರು ಕೂಡ ಹಿಂದೂಗಳಾಗಿ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಅದು ಯಾವುದೋ ಒಂದು ಪಕ್ಷದ ಸ್ವತ್ತಲ್ಲ. ನಾನು ಐದು ವರ್ಷ ಬಿಜೆಪಿ ಎಂಎಲ್ಎ ಆಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಕಾರ್ಪೋರೇಟರ್ ಆಗಿ ಕೆಲಸ ಮಾಡಿದ್ದೇನೆ. ಹಾಗಂತ ಹಿಂದುತ್ವ ಅಜೆಂಡಾದಲ್ಲೇ ನಾವು ಗೆದ್ದಿಲ್ಲ. ಹಿಂದುತ್ವ ಅಜೆಂಡಾದಲ್ಲೇ ನಾವ್ಯಾರು ಕೆಲಸ ಮಾಡಿಲ್ಲ. ಎಲ್ಲಾ ಧರ್ಮಗಳನ್ನು ಗೌರವಿಸಿದ್ದೇವೆ, ಎಲ್ಲಾ ಧರ್ಮಗಳ ಕೆಲಸ ಮಾಡಿದ್ದೇವೆ ಎಂದರು.
ಇನ್ನೂ ಹಿಂದುತ್ವ ಅನ್ನೋದು ಭಾರತ ದೇಶದ ಪ್ರತಿಯೊಬ್ಬರಿಗೂ ಇದೆ. ಹಿಂದುತ್ವ ಅದು ಪಕ್ಷಕ್ಕೆ ಸೀಮಿತವಲ್ಲ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತುಮಕೂರಿನಲ್ಲಿ ಹೇಳಿಕೆ. ನೀಡಿದ್ದಾರೆ.
The post Purnima Srinivas; ಹಿಂದುತ್ವ ಅನ್ನೋದು ಒಂದು ಪಕ್ಷಕ್ಕೆ ಸೀಮಿತವಲ್ಲ – ಪೂರ್ಣಿಮಾ ಶ್ರೀನಿವಾಸ್ appeared first on Ain Live News.