ಬೆಂಗಳೂರು:
ಮೈಸೂರು ಜಿಲ್ಲಾಧಿಕಾರಿಯಾಗಿ ಬಿ. ಶರತ್ ಅವರನ್ನು ಮರುನೇಮಕ ಮಾಡುವಂತೆ ಸರ್ಕಾರಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ಸೂಚನೆ ನೀಡಿದೆ.
ಈ ಸಂಬಂಧ ಡಿ. 22ರೊಳಗೆ ಈ ಸಂಬಂಧ ಆದೇಶ ಹೊರಡಿಸಲು ರಾಜ್ಯ ಸರಕಾರಕ್ಕೆ ಸೂಚಿಸಿ ಎಂದು ಅಡ್ವೊಕೇಟ್ ಜನರಲ್‌ಗೆ ನ್ಯಾಯಾಧಿಕರಣ ನಿರ್ದೇಶಿಸಿದೆ.
ಈ ಆದೇಶ ಪಾಲಿಸಲು ಸರ್ಕಾರ ವಿಫಲವಾದಲ್ಲಿ ಡಿ. 22 ರಂದು ಸಿಎಟಿ ಈ ಬಗ್ಗೆ ಆದೇಶ ಹೊರಡಿಸಲಿದೆ ಎಂದಿದೆ.
ಮಂಗಳವಾರ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ ಈ ಕುರಿತು ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದನ್ನು ಶರತ್ ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು. UNI