Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಎರಡು ಡೋಸ್ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಪಾತ್ರೆ ಕರ್ನಾಟಕ ಗಡಿ ಪ್ರವೇಶ: ಮುಖ್ಯಮಂತ್ರಿ
  • ಬೆಳಗಾವಿ
  • ಕರ್ನಾಟಕ
  • ಬೆಂಗಳೂರು ನಗರ

ಎರಡು ಡೋಸ್ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಪಾತ್ರೆ ಕರ್ನಾಟಕ ಗಡಿ ಪ್ರವೇಶ: ಮುಖ್ಯಮಂತ್ರಿ

The Bengaluru Live January 2, 2022 7:35 PM 1 minute read
CM Bommai at Belgaum Airport on Two-Dose Vaccine and RTPCR Certificate Mandatory to enter Karnataka Border Chief Minister

ಎರಡು ಡೋಸ್ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಪಾತ್ರೆ ಕರ್ನಾಟಕ ಗಡಿ ಪ್ರವೇಶ: ಮುಖ್ಯಮಂತ್ರಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಳಗಾವಿ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ – ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಕ್ರಮ

ಬೆಳಗಾವಿ/ಬೆಂಗಳೂರು:

ಕಳೆದ ಒಂದು ವಾರದಲ್ಲಿ ಕರೋನಾ, ಒಮಿಕ್ರಾನ್ ಕೇಸ್ ಹೆಚ್ಚಾಗ್ತಿದೆ. ಮಹಾರಾಷ್ಟ್ರ ಅದರಲ್ಲಿಯೂ ಮುಂಬೈಯಲ್ಲಿ ಪ್ರಕರಣಗಳು ಹೆಚ್ಚುತ್ತಿದೆ. ಮುಂಬೈ ಮತ್ತು ಕರ್ನಾಟಕದ ವಹಿವಾಟು ಜಾಸ್ತಿಯಿರುವ ಕಾರಣ ಗಡಿಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಎರಡು ಡೋಸ್ ಕಡ್ಡಾಯ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಪ್ರವೇಶಕ್ಕೆ ಅನುಮತಿಸಲಾಗುವುದು. ಬೆಳಗಾವಿ ಚೆಕ್ ಪೋಸ್ಟ್ ಜೊತೆಗೆ ಅಕ್ಕಪಕ್ಕದ ಚೆಕ್ ಪೋಸ್ಟ್ಗಳನ್ನೂ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸುಮಾರು 11 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಬೆಳಗಾವಿಯಲ್ಲೂ ಚೆಕ್ ಪೋಸ್ಟ್ ಗಳನ್ನು ಮಾಡಲಾಗುವುದು. ಪ್ರಯಾಣಿಕರಿಗೆ ಸಣ್ಣಪ್ರಮಾಣದ ತೊಂದರೆಯಾದರೂ ಬೆಳಗಾವಿ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಲಸಿಕಾ ಅಭಿಯಾನ

ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಲಸಿಕಾಕರಣ ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ ಶಿಸ್ತಿನಿಂದ ಕಾರ್ಯಗತಗೊಳಿಸಲು ಸೂಚನೆ ನೀಡಲಾಗಿದೆ. ಮಕ್ಕಳನ್ನು ಸುರಕ್ಷಾ ಚಕ್ರದೊಳಗೆ ತರುವ ಮಾನ್ಯ ಪ್ರಧಾನಮಂತ್ರಿಗಳ ಆಶಯದ ಈ ಕಾರ್ಯಕ್ರಮಕ್ಕೆ ಜನವರಿ 3 ರಂದು ಚಾಲನೆ ನೀಡಲಾಗುವುದು. ಜನವರಿ 10 ರಂದು ಕೊ -ಮಾರ್ಬಿಡಿಟಿ ಇರುವ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟಿರುವ ವ್ಯಕ್ತಿಗಳಿಗೆ ಲಸಿಕಾಕರಣವನ್ನು ಮಾಡಲಾಗುವುದು ಎಂದು ತಿಳಿಸಿದರು.

ಕರೋನಾ ಎದುರಿಸಲು ಸಕಲ ಸಿದ್ಧತೆ:

ಕರೋನಾ ವನ್ನು ನಿರ್ಬಂಧಿಸುವ ಜೊತೆಗೆ ಕರೋನಾವನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಸಂಭವಿಸಿದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಂಬಂಧಪಟ್ಟ ಆಕ್ಸಿಜನ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜಿಸಿ ಸಮರ್ಪಕ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮತ್ತು ಹೆಚ್ಚುವರಿ ಬೆಡ್, 4000 ಐಸಿಯುಗಳನ್ನು ಇಡೀ ರಾಜ್ಯದಲ್ಲಿ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ. ಸಮರ್ಪಕ ಔಷಧಿಪೂರೈಕೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ :

ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಸಿ ತೀರ್ಮಾನ ಕೈಗೊಳ್ಳಲಾಗುವುದು. ಕರೋನಾ ಸ್ಥಿತಿಗತಿ, ಬೆಂಗಳೂರು ನಗರದಲ್ಲಿ ಕರೋನಾ ಬೆಳವಣಿಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಜನ ಮಾರ್ಗಸೂಚಿಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದರೆ ಲಾಕ್ ಡೌನ್ ಘೋಷಿಸುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜನರು ಇದನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವ ಮೂಲಕ ಲಾಕ್ ಡೌನ್ ಹೇರುವ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಬಾರದು. ಸಧ್ಯದಲ್ಲಿಯೇ ಕರೋನಾ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಪಿಎಂ ಕಿಸಾನ್ ಕರ್ನಾಟಕ: ವರ್ಷದ ಎರಡನೇ ಕಂತಿನ ನೆರವು- 1007.18 ಕೋಟಿ ರೂ. ಬಿಡುಗಡೆ
Next: ಬೆಂಗಳೂರು ನಗರ ಅಭಿವೃದ್ಧಿ- ವಿವಿಧ ಇಲಾಖೆಗಳ ಸಮನ್ವಯಕ್ಕೆ ಸಮಿತಿ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Related Stories

ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

The Bengaluru Live November 11, 2026 10:40 PM
ಮೈಸೂರಿನ ಬಿಡುಗಡೆ ಸಮಾರಂಭದಲ್ಲಿ ನಾಲ್ಕನೇ ಸಂಪುಟದ ಪ್ರತಿಗಳನ್ನು ಹಿಡಿದ ಡಿ.ಕೆ. ಶಿವಕುಮಾರ್, ವೀರಪ್ಪ ಮೊಯಿಲಿ ಮತ್ತು ಗಣ್ಯರು
  • ಕರ್ನಾಟಕ
  • ಮೈಸೂರು

ಮೈಸೂರಿನಲ್ಲಿ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ ನಾಲ್ಕನೇ ಸಂಪುಟ ಬಿಡುಗಡೆ

The Bengaluru Live November 11, 2026 5:04 PM
ಬಿಳಿ ಕುರ್ತಾ ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮೇಜಿನ ಮೇಲಿನ ಅಂಗಾಂಶ ಕೃಷಿ ಜಾರ್‌ಗಳು ಮತ್ತು ಪೆಟ್ರಿ ಡಿಶ್‌ಗಳನ್ನು ಸಿಬ್ಬಂದಿಯೊಂದಿಗೆ ಪರಿಶೀಲಿಸುತ್ತಿರುವುದು
  • ಕರ್ನಾಟಕ

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ

The Bengaluru Live November 11, 2026 3:02 PM

Latest Post

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

November 11, 2026 11:57 PM
ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

November 11, 2026 10:40 PM
ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

November 11, 2026 10:23 PM
ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

November 11, 2026 10:15 PM
ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ ಕಸದ ವಾಹನದ ಸುತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದು, ಚೆಕ್ಸ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ವಾಹನದ ಒಳಭಾಗವನ್ನು ಪರಿಶೀಲಿಸುತ್ತಿರುವುದು
  • ಬೆಂಗಳೂರು

ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ

November 11, 2026 9:59 PM
ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್ ಎಡಭಾಗದಲ್ಲಿ ಹಳದಿ ಕುರ್ತಾ ಧರಿಸಿರುವ ಲೋಕಮಾತ ಡಿ.ಎಸ್. ಮತ್ತು ಬಲಭಾಗದಲ್ಲಿ ನಾಮಫಲಕವಿರುವ ಮೇಜಿನ ಬಳಿ ಕುಳಿತಿರುವ ಬಸವರಾಜ ಮಾಗಿ ಅವರ ಎರಡು ಚಿತ್ರಗಳ ಕೊಲಾಜ್
  • ಬೆಂಗಳೂರು

ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್

November 11, 2026 9:08 PM

ನೀವು ತಪ್ಪಿಸಿಕೊಂಡಿರಬಹುದು

ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

The Bengaluru Live November 11, 2026 11:57 PM
ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

The Bengaluru Live November 11, 2026 10:40 PM
ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

The Bengaluru Live November 11, 2026 10:23 PM
ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

The Bengaluru Live November 11, 2026 10:15 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ
  • ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ
  • ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ
  • ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು
©Copyright 2025 The Bengaluru Live All rights reserved. | MoreNews by AF themes.