Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

The Bengaluru Live November 19, 2026 2:24 AM
ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು

ನವೆಂಬರ್ 17ರ ರಾತ್ರಿ ಬೆಂಗಳೂರಿನ ವಸಂತನಗರದಲ್ಲಿ ನಡೆದ ಗಸ್ತು; ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಂಚಿಕೊಂಡ ಚಿತ್ರ. ಚಿತ್ರ: ಬೆಂಗಳೂರು ಕೇಂದ್ರ ನಗರ ಪಾಲಿಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಸ್ವಚ್ಛತಾ ನಿಯಮ ಉಲ್ಲಂಘನೆ ಮತ್ತು ಪಾದಚಾರಿ ಮಾರ್ಗ ಒತ್ತುವರಿ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಒಟ್ಟು ₹36,700 ದಂಡ ವಿಧಿಸಿದೆ ಎಂದು ಪಾಲಿಕೆ ಆಯುಕ್ತ ಜಗದೀಶ್ ಜಿ ಬುಧವಾರ ತಿಳಿಸಿದ್ದಾರೆ.

ಸ್ವಚ್ಛತಾ ನಿಯಮಗಳ ಉಲ್ಲಂಘನೆ, ತ್ಯಾಜ್ಯ ವಿಂಗಡಣೆ ಮಾಡದೆ ವಿಲೇವಾರಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಹಾಗೂ ಪಾದಚಾರಿ ಮಾರ್ಗಗಳ ಒತ್ತುವರಿ ವಿರುದ್ಧ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾರ್ಷಲ್‌ಗಳು ವಿವಿಧ ವಿಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದು ಅವರು ಹೇಳಿದರು.

ಗಾಂಧಿನಗರ ವಿಭಾಗದ ಕಾಟನ್ ಪೇಟೆ ಪ್ರದೇಶದಲ್ಲಿ ಮೆಡಿಕಲ್ ಮತ್ತು ಫಾರ್ಮ ಸಿಬ್ಬಂದಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಕಂಡುಬಂದಿತು. ಸಂಬಂಧಪಟ್ಟ ಅಂಗಡಿಯ ವಿಳಾಸ ಪತ್ತೆ ಹಚ್ಚಿ ಮಾಲೀಕರಿಗೆ ₹20,000 ದಂಡ ವಿಧಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯದಂತೆ ಹಾಗೂ ನಿಗದಿತ ನಿಯಮಗಳಂತೆ ತ್ಯಾಜ್ಯ ವಿಲೇವಾರಿ ಮಾಡುವಂತೆ ಸಿಬ್ಬಂದಿಗೆ ಜಾಗೃತಿ ಮೂಡಿಸಲಾಯಿತು.

ಶಿವಾಜಿನಗರ ವಿಭಾಗದ ಭಾರತಿನಗರ ವಾರ್ಡ್‌ನ ರಸೆಲ್ ಮಾರ್ಕೆಟ್ ಸುತ್ತಮುತ್ತ ಮಾರ್ಷಲ್ ಮೇಲ್ವಿಚಾರಕರು, ಮಾರ್ಷಲ್ ಪೆಟ್ರೋಲ್ ವಾಹನದ ಸಿಬ್ಬಂದಿ ಹಾಗೂ ವಾರ್ಡ್ ಮಾರ್ಷಲ್‌ಗಳು ರಾತ್ರಿ ಗಸ್ತು ನಡೆಸಿದರು. ತ್ಯಾಜ್ಯ ವಿಂಗಡಣೆ ಮಾಡದೆ ವಿಲೇವಾರಿ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಮಾರಾಟ ಪತ್ತೆಯಾಗಿದ್ದು, ಒಟ್ಟು 3 ಪ್ರಕರಣಗಳಲ್ಲಿ ₹5,700 ದಂಡ ವಿಧಿಸಿ 5 ಕೆ.ಜಿ. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.

ಇದೇ ವಿಭಾಗದ ವಸಂತನಗರ ವಾರ್ಡ್‌ನ ಆರ್.ಎಂ.ಜೆ ಪ್ರದೇಶದ 1ನೇ ಮುಖ್ಯರಸ್ತೆಯಲ್ಲಿರುವ ವಾಟ್ಸನ್ಸ್ ಬಾರ್‌ನಲ್ಲಿ ಪರಿಶೀಲನೆ ನಡೆಸಿದಾಗ ಪಾದಚಾರಿ ಮಾರ್ಗ ಒತ್ತುವರಿ ಮಾಡಿರುವುದು, ಕಸದ ಬುಟ್ಟಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಹಾಗೂ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸದಿರುವುದು ಕಂಡುಬಂದಿತು. ಮಾರ್ಷಲ್ ಮೇಲ್ವಿಚಾರಕರು ಮಾಲೀಕರಿಗೆ ಎಚ್ಚರಿಕೆ ನೀಡಿ ₹5,000 ದಂಡ ವಿಧಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುತ್ತಿದ್ದವರಿಗೆ ಮಾರ್ಷಲ್‌ಗಳು ಒಟ್ಟು ₹6,000 ದಂಡ ವಿಧಿಸಿದ್ದಾರೆ: ಶಾಂತಿನಗರ ವಿಭಾಗದ ಶಾಂತಲಾನಗರ ವಾರ್ಡ್‌ನ ಮಾರ್ಕಮ್ ರಸ್ತೆಯಲ್ಲಿ ₹5,000 ಹಾಗೂ ಗಾಂಧಿನಗರ ವಿಭಾಗದ ಓಕಳಿಪುರಂ ಪ್ರದೇಶದಲ್ಲಿ ₹1,000. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಂತೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಂಬಂಧಪಟ್ಟವರಿಗೆ ಜಾಗೃತಿ ಮೂಡಿಸಲಾಯಿತು.

ನಗರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತ್ಯಾಜ್ಯವನ್ನು ಹಸಿ ಮತ್ತು ಒಣ ಎಂದು ವಿಂಗಡಿಸಿ ವಿಲೇವಾರಿ ಮಾಡಬೇಕು, ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಬಾರದು ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಸಬಾರದು ಎಂದು ಜಗದೀಶ್ ಜಿ ತಿಳಿಸಿದರು. ಮುಂದಿನ ದಿನಗಳಲ್ಲೂ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಗಸ್ತು ಮತ್ತು ತಪಾಸಣೆ ನಡೆಸಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಜೊತೆಗೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ತಿಂಗಳ ಆರಂಭದಲ್ಲಿ ಪಾಲಿಕೆ ಚಿಕ್ಕಪೇಟೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಯಮ ಉಲ್ಲಂಘಿಸಿದ ಜೆಪ್ಟೋಗೆ ₹25,000 ದಂಡ ವಿಧಿಸಿತ್ತು.

About the Author

The Bengaluru Live

Administrator

Visit Website View All Posts

Post navigation

Previous: ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ
Next: ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

Related Stories

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಮಾಣಪತ್ರ ಹಿಡಿದ ಮಕ್ಕಳು ಮತ್ತು ಗಣ್ಯರು
  • ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ

The Bengaluru Live November 18, 2026 11:11 PM
ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್ ಮತ್ತು ಕಡತಗಳೊಂದಿಗೆ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು

The Bengaluru Live November 18, 2026 9:29 PM

Latest Post

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

November 19, 2026 2:28 AM
ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000 ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

November 19, 2026 2:24 AM
ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

November 19, 2026 2:18 AM
ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯ ಮೇಲೆ ಒಬ್ಬರು ಮತ್ತೊಬ್ಬರಿಗೆ ದಾಖಲೆ ನೀಡುತ್ತಿರುವ ಪುರುಷರು ಮತ್ತು ಮಹಿಳೆಯರು
  • ಕರ್ನಾಟಕ

ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ

November 19, 2026 2:16 AM
ಕ್ಲೌಡ್ ಕಂಪ್ಯೂಟಿಂಗ್‌ನಿಂದ 2ನೇ, 3ನೇ ಹಂತದ ನಗರಗಳಿಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಎಸ್‌ಟಿಪಿಐ ನಿರ್ದೇಶಕ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಕ್ಲೌಡ್ ಕಂಪ್ಯೂಟಿಂಗ್‌ನಿಂದ 2ನೇ, 3ನೇ ಹಂತದ ನಗರಗಳಿಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಎಸ್‌ಟಿಪಿಐ ನಿರ್ದೇಶಕ

November 19, 2026 2:13 AM
ಆಧುನಿಕ ಯುದ್ಧತಂತ್ರದಲ್ಲಿ ಸೆಮಿಕಂಡಕ್ಟರ್‌ಗಳೇ ಪ್ರಬಲ ಅಸ್ತ್ರ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಡಿಆರ್‌ಡಿಒ ಡಾ. ಬಿ.ಕೆ. ದಾಸ್ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯ ಮೇಲೆ ಒಬ್ಬರು ಮತ್ತೊಬ್ಬರಿಗೆ ದಾಖಲೆ ನೀಡುತ್ತಿರುವ ಪುರುಷರು ಮತ್ತು ಮಹಿಳೆಯರು
  • ಕರ್ನಾಟಕ

ಆಧುನಿಕ ಯುದ್ಧತಂತ್ರದಲ್ಲಿ ಸೆಮಿಕಂಡಕ್ಟರ್‌ಗಳೇ ಪ್ರಬಲ ಅಸ್ತ್ರ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಡಿಆರ್‌ಡಿಒ ಡಾ. ಬಿ.ಕೆ. ದಾಸ್

November 19, 2026 2:09 AM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM
ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

The Bengaluru Live November 19, 2026 2:24 AM
ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

The Bengaluru Live November 19, 2026 2:18 AM
ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯ ಮೇಲೆ ಒಬ್ಬರು ಮತ್ತೊಬ್ಬರಿಗೆ ದಾಖಲೆ ನೀಡುತ್ತಿರುವ ಪುರುಷರು ಮತ್ತು ಮಹಿಳೆಯರು
  • ಕರ್ನಾಟಕ

ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ

The Bengaluru Live November 19, 2026 2:16 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್
  • ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000
  • ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ
  • ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ
©Copyright 2025 The Bengaluru Live All rights reserved. | MoreNews by AF themes.