Home ಕರ್ನಾಟಕ ಅಧಿಕಾರಿ ವಲಯದಲ್ಲೇ ಕನ್ನಡ ವಿರೋಧಿ ನಿಲುವು: ಪ್ರಾಧಿಕಾರ ಅಧ್ಯಕ್ಷರ ಬೇಸರ

ಅಧಿಕಾರಿ ವಲಯದಲ್ಲೇ ಕನ್ನಡ ವಿರೋಧಿ ನಿಲುವು: ಪ್ರಾಧಿಕಾರ ಅಧ್ಯಕ್ಷರ ಬೇಸರ

202
0

ಬೆಂಗಳೂರು:

ಆಡಳಿತ ವಲಯದ ಅಧಿಕಾರಿ ವಲಯದಲ್ಲೇ ಕನ್ನಡಿ ವಿರೋಧಿ ನಿಲುವುಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕ್ರಮವಹಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಯವರಾದ ಪಿ. ರವಿಕುಮಾರ್ ಅವರನ್ನು ಆಗ್ರಹಿಸಿದ್ದಾರೆ.

ಕರ್ನಾಟಕ ಸರ್ಕಾರದ ರಾಜ್ಯಭಾಷಾ ಅಧಿನಿಯಮ 1963ರ ಅನ್ವಯ ರಾಜ್ಯ ಆಡಳಿತದ ಎಲ್ಲ ಹಂತದಲ್ಲೂ ಕನ್ನಡವನ್ನು ಅನುಷ್ಠಾನಗೊಳಿಸುವುದು ಆಡಳಿತ ವಲಯದ ಹಿರಿಯ ಅಧಿಕಾರಿಗಳ ಕರ್ತವ್ಯವಾಗಿದ್ದರೂ ಸಹ ಪದೇ ಪದೇ ಆಂಗ್ಲಭಾಷೆಯಲ್ಲಿಯೇ ಸುತ್ತೋಲೆಗಳು, ಆದೇಶಗಳು ಹಂಚಿಕೆಯಾಗುತ್ತಿದ್ದು ಕೂಡಲೇ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು  ಮುಖ್ಯಕಾರ್ಯದರ್ಶಿಗಳಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Bureaucrats Anti Kannada stance in Karnataka

ಆಡಳಿತ ವಲಯದ ಹಿರಿಯ ಅಧಿಕಾರಿಗಳು ಪದೇ ಪದೇ ಒಳಾಡಳಿತಕ್ಕೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ಕನ್ನಡ ವಿರೋಧಿ ನಡೆಯನ್ನು ಗಮನಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದಲೂ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳು ಬರುತ್ತಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ರಾಜ್ಯ ಸರ್ಕಾರದ ಆಡಳಿತದಲ್ಲಿ ಕೆಲವೊಂದು ಇಲಾಖೆಗಳು ಆಂಗ್ಲಭಾಷೆಯನ್ನು ಬಳಸುತ್ತಿರುವ ಬಗ್ಗೆ ಗಂಭೀರ ಚರ್ಚೆಗಳು, ವಿರೋಧಗಳು ವ್ಯಕ್ತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಆಡಳಿತದಲ್ಲಿ ಲೋಪವೆಸಗುವ ಕಾರಣಕ್ಕೆ ಪ್ರಜಾ ಸರ್ಕಾರ, ಪ್ರಾಧಿಕಾರ ಸಾರ್ವಜನಿಕ ಟೀಕೆಗೆ ಗುರಿಯಾಗಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ಸರ್ಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರುಗಳು, ನಿರ್ದೇಶಕರುಗಳು ಶೇ.100ಕ್ಕೆ 100ರಷ್ಟು ಕನ್ನಡವನ್ನು ಅನುಷ್ಠಾನಗೊಳಿಸಲು ಸುತ್ತೋಲೆ ಹೊರಡಿಸುವಂತೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here