ಕಡತ ಚಿತ್ರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ. ಚಿತ್ರ: ಕೆಇಎ.
ಬೆಂಗಳೂರು: ಎಂಬಿಎ, ಎಂಸಿಎ ಮತ್ತು ಎಂ.ಟೆಕ್ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಅಂತಿಮ ವಿಸ್ತೃತ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನವೆಂಬರ್ 11ರೊಳಗೆ ಶುಲ್ಕ ಪಾವತಿಸಿ, ನವೆಂಬರ್ 12ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಇದು ಅಂತಿಮ ಸುತ್ತಾಗಿರುವುದರಿಂದ ಈ ಸುತ್ತಿನಲ್ಲಿ ಯಾವುದೇ ಚಾಯ್ಸ್ ದಾಖಲಿಸಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ಈ ಸುತ್ತಿನ ಪ್ರವೇಶಕ್ಕೆ ನವೆಂಬರ್ 12 ಕೊನೆಯ ದಿನವಾಗಿದೆ.
ಕೆಇಎ ಈ ಹಿಂದೆ ಈ ಕೋರ್ಸ್ಗಳ ಅಂತಿಮ ಪಿಜಿಸಿಇಟಿ ಕೌನ್ಸೆಲಿಂಗ್ ಸುತ್ತನ್ನು ಅಕ್ಟೋಬರ್ 31ರಿಂದ ಆರಂಭಿಸುವುದಾಗಿ ಪ್ರಕಟಿಸಿತ್ತು. ಹೊಸ ಆಯ್ಕೆಗಳನ್ನು ನವೆಂಬರ್ 4ರ ಮಧ್ಯಾಹ್ನ 2 ಗಂಟೆಯವರೆಗೆ ದಾಖಲಿಸಲು ಅವಕಾಶ ನೀಡಲಾಗಿತ್ತು.
