Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಪೊಲೀಸ್ ಶಾಲೆಗಳನ್ನು ಆತ್ಮರಕ್ಷಣಾ ತರಬೇತಿಗೆ ಬಳಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಬೆಂಗಳೂರು ನಗರ

ಪೊಲೀಸ್ ಶಾಲೆಗಳನ್ನು ಆತ್ಮರಕ್ಷಣಾ ತರಬೇತಿಗೆ ಬಳಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

The Bengaluru Live February 6, 2022 2:00 PM 1 minute read
Use Police Schools to provide self defence training for women

ಪೊಲೀಸ್ ಶಾಲೆಗಳನ್ನು ಆತ್ಮರಕ್ಷಣಾ ತರಬೇತಿಗೆ ಬಳಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಓಬವ್ವ ಆತ್ಮ ರಕ್ಷಣಾ ಕಲೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾಕಾಲೇಜುಗಳ ಮಕ್ಕಳಿಗೆ ಆತ್ಮರಕ್ಷಣಾ ತರಬೇತಿಯನ್ನು ಶೀಘ್ರ ದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.

ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯಸ್ಥಾನ ಗೌರವಗಳಿವೆ. ಆದರೆ ಕಿಡಿಗೇಡಿಗಳು, ದುಷ್ಟಶಕ್ತಿಗಳು ತಾಯಂದಿರನ್ನು ಮಕ್ಕಳನ್ನು ನೋಡುವ ರೀತಿ ಅಮಾನುಷವಾಗಿದೆ. ಈ ಮನಸ್ಥಿತಿಗೆ ಹಲವಾರು ಹೆಣ್ಣುಮಕ್ಕಳು ಬಲಿಯಾಗಿರುವುದನ್ನು ತಡೆಗಟ್ಟಲು ಕಾನೂನುಗಳಾಗಿವೆ, ಕಾರ್ಯಕ್ರಮ ಗಳನ್ನು ರೂಪಿಸಿ, ಹಣಕಾಸಿನ ವೆಚ್ಚವೂ ಆಗಿದೆ. ಆದರೆ, ಮಹಿಳೆಯರಿಗೆ ಆತ್ಮರಕ್ಷಣೆಯ ಕಾರ್ಯಕ್ರಮ ಅಗತ್ಯವಿದೆ. ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಕಲೆ ಮಹಿಳೆಯರಿಗೆ ಇದ್ದರೆ ದುಷ್ಟ ಶಕ್ತಿಗಳಿಗೆ ಸರಿಯಾದ ಪಾಠವನ್ನು ಕಲಿಸಬಹುದೆಂಬ ವಿಶ್ವಾಸವಿದೆ.

ಅದಕ್ಕಾಗಿ ಕಾನೂನು, ಶಿಕ್ಷಣ , ಗೃಹ ಇಲಾಖೆಗಳು,ಸಮಾಜ, ಸರ್ಕಾರ ಮಹಿಳೆಯರ ರಕ್ಷಣೆಗೆ ಒಗ್ಗಟ್ಟಾಗಿ ನಿಂತು ಅವರ ಆತ್ಮರಕ್ಷಣೆ ಮಾತ್ರವಲ್ಲದೆ ಅವರ ಗೌರವದ ರಕ್ಷಣೆಯನ್ನೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆ ನೀಡಿ , ಕರ್ನಾಟಕ ವಸತಿ ಶಾಲೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವರ್ಷವಿಡೀ ಈ ಕಾರ್ಯಕ್ರಮ ನಡೆಸಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಕ್ರೂಡೀಕರಿಸಿ ವಿನೂತನ ಯೋಜನೆಯನ್ನು ಜಾರಿಗೆ ತರಲಾಗುವುದು. ಹೆಣ್ಣುಮಕ್ಕಳು ಸ್ವಾಲವಂಬಿಗಳಾದರೆ ದೇಶದ ಭವಿಷ್ಯ ಉತ್ತಮವಾಗಲಿದೆ. ನಮ್ಮ ಸಾಂಸ್ಕೃತಿಕ, ಸಾಮಾಜಿಕ ಲೋಕ ಶ್ರೀಮಂತವಾಗಲಿದೆ ಎಂದರು.

Use Police Schools to provide self defence training for women

ಆತ್ಮರಕ್ಷಣೆಗೆ ಆತ್ಮವಿಶ್ವಾಸ ಅಗತ್ಯ: ಆತ್ಮರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಎಲ್ಲ ಪ್ರಾಣಿಗಳ, ಮಾನವರ ಗುಣಧರ್ಮ. ಆತ್ಮರಕ್ಷಣೆಗೆ ಬೇಕಾಗಿರುವುದು ಆತ್ಮವಿಶ್ವಾಸ. ಯಾವ ವ್ಯಕ್ತಿಗೆ ಆತ್ಮವಿಶ್ವಾಸ ಇರುತ್ತದೆಯೋ, ಅವನು ತನ್ನ ಆತ್ಮರಕ್ಷಣೆಯನ್ನು ಅತ್ಯಂತ ಸಮರ್ಥವಾಗಿ ಮಾಡಲು ಸಾಧ್ಯ.

ತಾವು ಪಡೆಯುವ ತರಬೇತಿ ಆತ್ಮ ವಿಶ್ವಾಸ ಎಂಬ ಮೂಲ ಗುಣಧರ್ಮವನ್ನಿಟ್ಟುಕೊಂಡು ಆತ್ಮರಕ್ಷಣೆಗೆ ಒಂದು ರೀತಿಯಲ್ಲಿ ಟಾನಿಕ್ ಇದ್ದಂತೆ. ಎದುರಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲೆ ಎನ್ನುವ ಶಕ್ತಿ ತುಂಬುವ ಟಾನಿಕ್ ಇದ್ದಂತೆ ಎಂದರು. ಸಮಾಜಕಲ್ಯಾಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ನಿಮಗೆ ಈ ಟಾನಿಕ್ ನೀಡುತ್ತಿದ್ದಾರೆ. ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ 50 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಹೆಸರಿನಲ್ಲಿಯೇ ಶಕ್ತಿ ತುಂಬಲು ಒನಕೆ ಓಬವ್ವನ ಹೆಸರಿಡಲಾಗಿದೆ ಎಂದು ತಿಳಿಸಿದರು.

ಮಹಿಳಾ ಶಕ್ತಿ: ಓಬವ್ವಳ ರೋಮಾಂಚಕ, ಐತಿಹಾಸಿಕ ಕಥೆಯನ್ನು ನಾವೆಲ್ಲರೂ ಓದಿದ್ದೇವೆ. ಓಬವ್ವ ಅಂದರೆ ಶಕ್ತಿಯ ಪ್ರತೀಕ. ಕನ್ನಡ ನಾಡು ಇಂತಹ ಶಕ್ತಿಯನ್ನು ಒಳಗೊಂಡಿರುವ ನಾಡು. ಕಿತ್ತೂರು ಚನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ ಇವರೆಲ್ಲರೂ ಪುರುಷರನ್ನೂ ಮೀರಿಸುವ ಶೌರ್ಯವನ್ನು ಹೊಂದಿದ್ದರು. ನಮ್ಮೆಲ್ಲರಿಗೂ ಬಹಳ ದೊಡ್ಡ ಸ್ಫೂರ್ತಿ ಮತ್ತು ಪ್ರೇರಣೆ. ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ , ಸ್ಪೂರ್ತಿಯೂ ಅಷ್ಟೇ ಮುಖ್ಯ. ಯಾವ ದೇಶಕ್ಕೆ ಉತ್ತಮ ಇತಿಹಾಸವಿದೆಯೋ ಆ ದೇಶದ ಭವಿಷ್ಯವೂ ಉತ್ತಮವಾಗಿರುತ್ತದೆ ಎನ್ನುವ ಮಾತಿದೆ. ಭವ್ಯ ಇತಿಹಾಸ ಮತ್ತು ಪರಂಪರೆ ಇರುವ ನಮ್ಮ ದೇಶದಲ್ಲಿ ಅಸಂಖ್ಯಾತ ವೀರರಿದ್ದಾರೆ. ನಮ್ಮ ನೆಲ, ಕನ್ನಡಿಗರ ಅಸ್ಮಿತೆಯನ್ನು ಮತ್ತೊಮ್ಮೆ ಮರುಕಳಿಸಿ, ಇಂದಿನ ಪೀಳಿಗೆಗೆ ಪ್ರೇರಣೆ ನೀಡುವ ಕೆಲಸವಾಗುತ್ತಿದೆ. 6 ತಿಂಗಳಲ್ಲಿ ದಾಖಲೆ ಎನಿಸುವ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದರು.

ಸಚಿವರಾದ @KotasBJP, @HalappaAchar, ವಿಪ ಸದಸ್ಯ @nrkbjp ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

2/2

— CM of Karnataka (@CMofKarnataka) February 6, 2022

ಕರ್ನಾಟಕಕ್ಕೆ ಅಗ್ರಮಾನ್ಯ ಸ್ಥಾನ: ನಮ್ಮ ರಾಜ್ಯ 75 ನೇ ರಾಜ್ಯೋತ್ಸವನ್ನು ಆಚರಿಸುವಾಗ ದೇಶದಲ್ಲಿ ರಾಜ್ಯಕ್ಕೆ ಅಗ್ರಮಾನ್ಯ ಸ್ಥಾನವಿರಬೇಕು. ಅದಕ್ಕೆ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿದರೆ ಸಾಲದು. ನಮ್ಮ ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ವಿದ್ಯೆ, ಕೈಯಲ್ಲಿ ಕೆಲಸ, ಪ್ರೇರಣೆ ನೀಡುವ ಕೆಲಸ ಮಾಡಲು ಅವಕಾಶಗಳನ್ನು ಸರ್ಕಾರ ಮಾಡಿಕೊಡಲಿದೆ. ಐತಿಹಾಸಿಕ ಪುರುಷರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ: ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ 7500 ಹೊಸ ಕೆಡೆಟ್ ಗಳನ್ನು ಎನ್.ಸಿ.ಸಿ ಗೆ ಸೇರ್ಪಡೆ ಗೊಳಿಸಲು ತಲಾ 12 ಸಾವಿರ ರೂ.ಗಳ ಅನುದಾನ ನೀಡಿದೆ. 75 ಹೊಸ ಘಟಕಗಳನ್ನು ಶಾಲಾಕಾಲೇಜುಗಳಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. 44 ಸಾವಿರ ಎನ್.ಸಿ.ಸಿ ಕೆಡೆಟ್ ಗಳಿಗೆ ತರಬೇತಿಗೆ ಅನುಮತಿ ಕೋರಲಾಗಿದೆ. ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್ ಗಳನ್ನು ಎನ್.ಸಿ.ಸಿ ಗೆ 2023 ನೆ ಸಾಲಿನಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು. ಮಿಲಿಟರಿಗೆ ಸಮಾನವಾದ ತರಬೇತಿಯ ಜೊತೆಗೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

Also Read: Karnataka police schools to provide self-defence training for women

ಆತ್ಮರಕ್ಷಣಾ ಯೋಜನೆಗಳಿಗೆ ಅಡಿಪಾಯ: ಆತ್ಮರಕ್ಷಣಾ ಯೋಜನೆಗಳಿಗೆ ದೊಡ್ಡ ಅಡಿಪಾಯವನ್ನು ಇಂದು ಹಾಕಲಾಗಿದೆ. ಉತ್ತಮ ಮುನ್ನಡಿಯನ್ನು ಬರೆಯಲಾಗಿದೆ. ಕೆಳದಿ ಚನಮ್ಮ ಮತ್ತು ಬೆಳವಾಡಿ ಮಲ್ಲಮ್ಮನ ಉತ್ಸವವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಇವರು ಶಕ್ತಿ ಹಾಗೂ ಪ್ರೇರಣಾ ಕೇಂದ್ರಗಳು. ದಿನನಿತ್ಯ ಬಳಸುವ ವಸ್ತುಗಳನ್ನು ಆತ್ಮರಕ್ಷಣೆಗೆ ಬಳಕೆ ಮಾಡಬಹುದೆಂಬ ಸಂದೇಶವನ್ನು ಓಬವ್ವ ನಮಗೆ ನೀಡಿದ್ದಾಳೆ ಎಂದರು.

About the Author

The Bengaluru Live

Administrator

Visit Website View All Posts

Post navigation

Previous: ಮುಖ್ಯಮಂತ್ರಿ ದೆಹಲಿ ಪ್ರವಾಸ: ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಸಂಸದರ ಭೇಟಿ
Next: ಶಿಕ್ಷಣ ಸಂಸ್ಥೆಗಳ ಜತೆ ಉದ್ಯಮಗಳ ಸಂಬಂಧ ಅಗತ್ಯ: ಅಶ್ವತ್ಥ ನಾರಾಯಣ

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

November 11, 2026 11:57 PM
ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

November 11, 2026 10:40 PM
ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

November 11, 2026 10:23 PM
ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

November 11, 2026 10:15 PM
ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ ಕಸದ ವಾಹನದ ಸುತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದು, ಚೆಕ್ಸ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ವಾಹನದ ಒಳಭಾಗವನ್ನು ಪರಿಶೀಲಿಸುತ್ತಿರುವುದು
  • ಬೆಂಗಳೂರು

ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ

November 11, 2026 9:59 PM
ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್ ಎಡಭಾಗದಲ್ಲಿ ಹಳದಿ ಕುರ್ತಾ ಧರಿಸಿರುವ ಲೋಕಮಾತ ಡಿ.ಎಸ್. ಮತ್ತು ಬಲಭಾಗದಲ್ಲಿ ನಾಮಫಲಕವಿರುವ ಮೇಜಿನ ಬಳಿ ಕುಳಿತಿರುವ ಬಸವರಾಜ ಮಾಗಿ ಅವರ ಎರಡು ಚಿತ್ರಗಳ ಕೊಲಾಜ್
  • ಬೆಂಗಳೂರು

ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್

November 11, 2026 9:08 PM

ನೀವು ತಪ್ಪಿಸಿಕೊಂಡಿರಬಹುದು

ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

The Bengaluru Live November 11, 2026 11:57 PM
ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

The Bengaluru Live November 11, 2026 10:40 PM
ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

The Bengaluru Live November 11, 2026 10:23 PM
ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

The Bengaluru Live November 11, 2026 10:15 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ
  • ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ
  • ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ
  • ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು
©Copyright 2025 The Bengaluru Live All rights reserved. | MoreNews by AF themes.