Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಅತ್ಯುತ್ತಮ ಶಾಸಕ ಪ್ರಶಸ್ತಿ- ಬಿ.ಎಸ್. ಯಡಿಯೂರಪ್ಪ
  • ಬೆಂಗಳೂರು ನಗರ

ಅತ್ಯುತ್ತಮ ಶಾಸಕ ಪ್ರಶಸ್ತಿ- ಬಿ.ಎಸ್. ಯಡಿಯೂರಪ್ಪ

The Bengaluru Live September 24, 2021 9:00 PM
BS Yediyurappa awarded as Best Legislator in Karnataka

ಅತ್ಯುತ್ತಮ ಶಾಸಕ ಪ್ರಶಸ್ತಿ- ಬಿ.ಎಸ್. ಯಡಿಯೂರಪ್ಪ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಲೋಕಸಭೆಯ ಮಾದರಿಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತುತ ಸಾಲಿನಿಂದ ನೀಡಲು ನಿರ್ಧರಿಸಿದ್ದು, ಮೊದಲ ಸಾಲಿನ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸದನದ ಹಿರಿಯ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಭಾಜನರಾಗಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಇಂದು ವಿಧಾನಸಭೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಪ್ರಜಾಪ್ರಬುತ್ವ: ಸಂಸದೀಯ ಮೌಲ್ಯಗಳ ರಕ್ಷಣೆ” ಕುರಿತು ವಿಧಾನಮಂಡಲದ ಉಭಯ ಸದನಗಳ ಉದ್ದೇಶಿಸಿ ಮಾತನಾಡಲು ಆಗಮಿಸಿದ್ದ ಲೋಕಸಭಾ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಪ್ರಶಸ್ತಿ ಕುರಿತು ಮಾತನಾಡಿದ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಅವರು ಸಂಸದೀಯ ಕಾರ್ಯಚಟುವಟಿಕೆಯನ್ನು ಪ್ರೋತ್ಸಾಹಿಸಲು ಜೀವಮಾನದಲ್ಲಿ ಒಮ್ಮೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು ಎಂದು ತಿಳಿಸಿದರು.

ವಿಧಾನ ಸಭೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದು, ಮಂತ್ರಿಗಳಾದವರು ಈ ಪ್ರಶಸ್ತಿಗೆ ಅನ್ವಯಿಸುವುದಿಲ್ಲ, ಕೇವಲ ಶಾಸಕರನ್ನು ಮಾತ್ರ ಪರಿಗಣಿಸಲಾಗುತ್ತದೆ. ಇಂತಹ ಮೊದಲ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಬಿ.ಎಸ್. ಯಡಿಯೂರಪ್ಪ ಅವರು ಆಯ್ಕೆಯಾಗಿದ್ದು ಪ್ರಶಸ್ತಿಯ ಹಿರಿಮೆ ಹೆಚ್ಚಿಸಿದೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಇವರು ರೈತನಾಯಕರಾಗಿ, ಜನತೆಯ ಆಗುಹೋಗುಗಳಿಗೆ ಸ್ಪಂದಿಸಿದ, ಸಂಸದೀಯ ವ್ಯವಸ್ಥೆಯಲ್ಲಿ 8 ಬಾರಿ ಗೆದ್ದು ಬಂದಿದ್ದಾರೆ. ರೈತರ ಸಾಲ ಮನ್ನಾ ಇನ್ನಿತರ ಅತ್ಯುತ್ತಮ ಕೆಲಸವನ್ನು ನಿರ್ವಹಿಸಿರುತ್ತಾರೆ. ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನಸೇವೆಯನ್ನು ಜನಾರ್ಧನ ಸೇವೆ ಎಂಬಂತೆ ಮಾಡಿದ್ದಾರೆ ಎಂದರು.

ಸಂಸದೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಸಮಿತಿ ರಚನೆಗೊಂಡಿತು. ಸಮಿತಿಯ ಅಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ, ಸದಸ್ಯರುಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವ ಜೆ.ಸಿ. ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರುಗಳನ್ನೊಳಗೊಂಡ ಸಮಿತಿಯು ಬಿ.ಎಸ್. ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರುಗಳು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ವಿಧಾನಸಭೆ ಹಾಗೂ ಪರಿಷತ್ತಿನ ಸದಸ್ಯರುಗಳು ಮತ್ತು ಲೋಕಸಭಾ ಸದಸ್ಯರುಗಳು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಪಾಸಿಟಿವಿಟಿ ದರ ಆಧರಿಸಿ ಅಕ್ಟೋಬರ್ 1 ರಿಂದ ಚಿತ್ರಮಂದಿರ ಶೇ. 100 ಭರ್ತಿಗೆ ಅವಕಾಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Next: ಬಿಜೆಪಿಗೆ ಶಾಶ್ವತ ತಳಹದಿ ಹಾಕಿಕೊಟ್ಟ ಉಪಾಧ್ಯಾಯರು- ಎನ್. ರವಿಕುಮಾರ್

Related Stories

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM
ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

The Bengaluru Live November 19, 2026 2:24 AM
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಮಾಣಪತ್ರ ಹಿಡಿದ ಮಕ್ಕಳು ಮತ್ತು ಗಣ್ಯರು
  • ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ

The Bengaluru Live November 18, 2026 11:11 PM

Latest Post

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

November 19, 2026 2:28 AM
ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000 ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

November 19, 2026 2:24 AM
ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

November 19, 2026 2:18 AM
ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯ ಮೇಲೆ ಒಬ್ಬರು ಮತ್ತೊಬ್ಬರಿಗೆ ದಾಖಲೆ ನೀಡುತ್ತಿರುವ ಪುರುಷರು ಮತ್ತು ಮಹಿಳೆಯರು
  • ಕರ್ನಾಟಕ

ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ

November 19, 2026 2:16 AM
ಕ್ಲೌಡ್ ಕಂಪ್ಯೂಟಿಂಗ್‌ನಿಂದ 2ನೇ, 3ನೇ ಹಂತದ ನಗರಗಳಿಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಎಸ್‌ಟಿಪಿಐ ನಿರ್ದೇಶಕ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಕ್ಲೌಡ್ ಕಂಪ್ಯೂಟಿಂಗ್‌ನಿಂದ 2ನೇ, 3ನೇ ಹಂತದ ನಗರಗಳಿಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಎಸ್‌ಟಿಪಿಐ ನಿರ್ದೇಶಕ

November 19, 2026 2:13 AM
ಆಧುನಿಕ ಯುದ್ಧತಂತ್ರದಲ್ಲಿ ಸೆಮಿಕಂಡಕ್ಟರ್‌ಗಳೇ ಪ್ರಬಲ ಅಸ್ತ್ರ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಡಿಆರ್‌ಡಿಒ ಡಾ. ಬಿ.ಕೆ. ದಾಸ್ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯ ಮೇಲೆ ಒಬ್ಬರು ಮತ್ತೊಬ್ಬರಿಗೆ ದಾಖಲೆ ನೀಡುತ್ತಿರುವ ಪುರುಷರು ಮತ್ತು ಮಹಿಳೆಯರು
  • ಕರ್ನಾಟಕ

ಆಧುನಿಕ ಯುದ್ಧತಂತ್ರದಲ್ಲಿ ಸೆಮಿಕಂಡಕ್ಟರ್‌ಗಳೇ ಪ್ರಬಲ ಅಸ್ತ್ರ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಡಿಆರ್‌ಡಿಒ ಡಾ. ಬಿ.ಕೆ. ದಾಸ್

November 19, 2026 2:09 AM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM
ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

The Bengaluru Live November 19, 2026 2:24 AM
ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

The Bengaluru Live November 19, 2026 2:18 AM
ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯ ಮೇಲೆ ಒಬ್ಬರು ಮತ್ತೊಬ್ಬರಿಗೆ ದಾಖಲೆ ನೀಡುತ್ತಿರುವ ಪುರುಷರು ಮತ್ತು ಮಹಿಳೆಯರು
  • ಕರ್ನಾಟಕ

ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ

The Bengaluru Live November 19, 2026 2:16 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್
  • ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000
  • ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ
  • ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕೆಎಸ್‌ಟಿಇಪಿಎಸ್ ಮಳಿಗೆ
©Copyright 2025 The Bengaluru Live All rights reserved. | MoreNews by AF themes.